ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಕ್ಷೇತ್ರ ದಲ್ಲಿ ಎಲ್ಲೆಲ್ಲೂ ಸೋಲು ಗೆಲುವಿನ ಲೆಕ್ಕಾಚಾರ

|
Google Oneindia Kannada News

Recommended Video

ಗೆಲ್ಲಲು ದೈವ, ದೇವರ ಮೊರೆ: Lok Sabha Election 2019 | Oneindia Kannada

ಮಂಗಳೂರು ಏಪ್ರಿಲ್ 20 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಬ್ಬರ ತಣ್ಣಗಾಗಿದೆ. ಕಳೆದ ಒಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏರಿದ್ದ ಚುನಾವಣಾ ಜ್ವರದ ಬಿಸಿ ಈಗ ಇಳಿದಿದೆ. ಇನ್ನು ಏನಿದ್ದರೂ ಕ್ಷೇತ್ರದಲ್ಲಿ ಸೋಲು ಗೇಲುವಿನ ಲೆಕ್ಕಾಚಾರ . ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಮೇ 23 ರ ಫಲಿತಾಂಶ ದತ್ತ ಕೇಂದ್ರಿಕೃತ ಗೊಂಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಎಲ್ಲಾ 1861 ಮತಗಟ್ಟೆಗಳ ಮತಯಂತ್ರ ಗಳು ಮಂಗಳೂರು ಹೊರವಲಯದ ಸುರತ್ಕಲ್ ನ ಎನ್ ಐ ಟಿ ಕೆ ಕಾಲೇಜು ಆವರಣದ ಭದ್ರತಾ ಕೊಠೆಡಿ ಯಲ್ಲಿ ಇಡಲಾಗಿದೆ. ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳ ಹಣೆ ಬರಹ ಮೇ 23 ರಂದು ಪ್ರಕಟಗೊಳ್ಳಲಿದ್ದು , ಕ್ಷೇತ್ರದಲ್ಲಿ ಸೋಲು ಗೆಲುವಿನ ಬಗ್ಗೆ ಲೆಕ್ಕಾಚಾರ, ವಿಶ್ಲೇಷಣೆ ಆರಂಭಗೊಂಡಿದೆ.

ಸ್ಟ್ರಾಂಗ್ ರೂಂನಲ್ಲಿ ಭದ್ರವಾದ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಸ್ಟ್ರಾಂಗ್ ರೂಂನಲ್ಲಿ ಭದ್ರವಾದ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ

ಕಳೆದ ಒಂದುವರೆ ತಿಂಗಳಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರು ಬಿಸಿಲನ ಬೇಗೆಯ ನಡುವೆ ಚುನಾವಣೆಯ ಕಾವು ಇನ್ನಷ್ಟು ಏರಿಸಿತ್ತು. ಗೆಲುವಿನ ಬೆನ್ನು ಹಿಡಿದು ನಾನಾ ರಾಜಕೀಯ ಪಕ್ಷಗಳು ನಡೆಸಿ ನಾನಾ ರೀತಿಯ ಕಸರತ್ತು, ಕಾರ್ಯತಂತ್ರ . ಆರೋಪ ಪ್ರತ್ಯಾರೋಪ,ವಾಗ್ದಾಳಿ , ರೋಡ್ ಶೋ , ಕಚಹುಳಿ ಇಡುವ ಟೋಲ್ ಗಳಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರು ಈ ಬಾರಿ ಸಾಕ್ಷಿಯಾದರು.

Lok sabha poll BJP and Congress busy with winning calculation

ಈಗ ಎಲ್ಲಾ ಮುಗಿದಿದೆ. ಚುನಾವಣಾ ಪ್ರಚಅರ ಅಬ್ಬರ ತಣ್ಣಗಾಗಿದೆ. ಈಗ ಕ್ಷೇತ್ರದಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ನಾಯಕರು ಏಪ್ರಿಲ್ 23 ರಂದು ಎರಡನೇ ಹಂತದ ಚುನಾವಣೆ ನಡೆಯಲಿರುವ ರಾಜ್ಯದ ಇತರ ಕ್ಷೇತ್ರದೆಡೆ ಮುಖ ಮಾಡಿದ್ದಾರೆ. ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ದಲ್ಲಿ ತೊಡಗಿಸಿ ಕೊಂಡಿದ್ದಾರೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಹಿಂದೆ ನಡೆದಿದರು ನಡೆದ ಎಲ್ಲ ಚುನಾವಣೆಯ ಲೆಕ್ಕಾಚಾರಗಳನ್ನು ಮೀರಿಸಿ ದಾಖಲೆಯ ಶೇ.77.90 ಮತ ದಾನವಾಗಿದೆ. ಸುಳ್ಯದಲ್ಲಿ ಆಗಿರುವ ಶೇ.84 ಮತದಾನ ಜಿಲ್ಲೆಯ ಗರಿಷ್ಠ ಮತದಾನ ಪ್ರಮಾಣ . ಈ ಬಾರಿ ಕ್ಷೇತ್ರ ವ್ಯಾಪ್ತಿಯಲ್ಲಿ 13,43, 378 ಜನ ಮತ ಚಲಾಯಿಸಿದ್ದಾರೆ. ಆ ಪೈಕಿ 6,53,655 ಪುರುಷರು ಹಾಗು 6,89,693 ಮಹಿಳೆಯರು ಈ ಬಾರಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮತದಾನದಿಂದ ವಂಚಿತರಾದ ಕುವೈತ್ ನಲ್ಲಿರುವ ಮೋದಿ ಅಭಿಮಾನಿಗಳು ಮತದಾನದಿಂದ ವಂಚಿತರಾದ ಕುವೈತ್ ನಲ್ಲಿರುವ ಮೋದಿ ಅಭಿಮಾನಿಗಳು

ಕ್ಷೇತ್ರದಲ್ಲಿ ಹೆಚ್ಚಿದ ಮತದಾನ ಮತ್ತು ಕ್ಷೇತ್ರದಲ್ಲಿ ವ್ಯಕ್ತವಾಗಿರುವ ರಾಜಕೀಯ ಹವಾ ದೃಷ್ಠಿಯಲ್ಲಿಟ್ಟು ಪಕ್ಷಗಳಲ್ಲಿ ಗೆಲುವಿನ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ಆರಂಭಗೊಂಡಿದೆ. ಇದರ ಜತೆಗೆ ಗರಿಷ್ಠ ಮತದಾನ ಯಾವ ರಾಜಕೀಯ ಪಕ್ಷಕ್ಕೆ ಹೆಚ್ಚು ಅನುಕೂಲ ಎಂಬ ವಿಶ್ಲೇಷಣೆಯೂ ನಡೆಯುತ್ತಿದೆ.

ರಾಜಕೀಯ ಪಕ್ಷಗಳು ಪ್ರತಿ ಬೂತ್‌ ಮಟ್ಟದಲ್ಲಿ ಮತಗಳ ಲೆಕ್ಕಚಾರ ಅರಂಭಿಸಿವೆ. ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಕಳೆದು , ಕೂಡಿಸಿ, ಗುಣಿಸಿ ಲೆಕ್ಕಾಚಾರ ಮಾಡುತ್ತಿದ್ದಾರೆ.

ವೋಟಿಂಗ್ ಮಾಡಿ ಕರ್ತವ್ಯ ಮೆರೆದ ಅನಾರೋಗ್ಯ ಪೀಡಿತರು, ನವ ವಧು ವೋಟಿಂಗ್ ಮಾಡಿ ಕರ್ತವ್ಯ ಮೆರೆದ ಅನಾರೋಗ್ಯ ಪೀಡಿತರು, ನವ ವಧು

ಎಲ್ಲವನ್ನೂ ಕ್ರೋಡೀಕರಿಸಿ ಗೆಲುವಿನ ಸಾಧ್ಯತೆ, ಅಂತರಗಳ ಒಟ್ಟು ರೇಖಾಚಿತ್ರಣ ರೂಪಿಸುವುದರಲ್ಲಿ ಪಕ್ಷಗಳ ಕಾರ್ಯಕರ್ತರು ವ್ಯಸ್ತರಾಗಿದ್ದಾರೆ. ತಮ್ಮ ಅಭ್ಯರ್ಥಿ ಗೆದ್ದರೆ ದೇವರಿಗೆ, ದೈವಗಳಿಗೆ ವಿವಿಧ ರೀತಿಯ ಹರಕೆಗಳನ್ನು ಹೇಳಿ ಪ್ರಾರ್ಥನೆ ಸಲ್ಲಿಸುವ ಕಾರ್ಯ ನಡೆಯುತ್ತಿದೆ.

ಇನ್ನೊಂದೆಡೆ ಗೆಲುವು ಯಾರದಾಗಿರಬಹುದು ಎಂಬ ಕುತೂಹಲ ಮತದಾರರಲ್ಲೂ ಮನೆ ಮಾಡಿದೆ. ಇದಕ್ಕೆಲ್ಲ ಮೇ 23 ರಂದೇ ಉತ್ತರ ದೊರಕಲಿದೆ.

English summary
The record voters turnout of 77.90 in Dakshina kannada Lok sabha constituency . Now BJP and Congress leaders busy with calculation of winning margin of candidates,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X