ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ: 6 ಯುವತಿಯರ ರಕ್ಷಣೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು ಜೂನ್ 22: ಮಂಗಳೂರಿನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಸಾಮಾಜಿಕ ಸೇವಾಸಂಸ್ಥೆ ಹಾಗು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಜಾಲದಲ್ಲಿ ಸಿಲುಕಿದ್ದ ಬಾಂಗ್ಲಾದೇಶ ಮೂಲದ 6 ಮಂದಿ ಯುವತಿಯರನ್ನು ರಕ್ಷಿಸಲಾಗಿದೆ.

ಇಂದು ಮುಂಜಾನೆ ಮಂಗಳೂರಿನ ಪಂಪ್ ವಲ್ ಬಳಿ ಇರುವ ಅನ್ನಪೂರ್ಣ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವಿದೇಶಿ ಯುವತಿಯರನ್ನು ಕೂಡಿಹಾಕಿ ಅವರಿಂದ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೈಸೂರಿನ ಒಡನಾಡಿ ಸೇವಾಸಂಸ್ಥೆಯ ಸ್ವಯಂ ಸೇವಕರಿಗೆ ದೊರೆತಿತ್ತು.

Lodge raided at Mangaluru 6 Bangladeshi girls rescue

ಮೈಸೂರಿನಲ್ಲಿ ತಲೆಯೆತ್ತುತ್ತಿದೆ ಹೈಟೆಕ್ ವೇಶ್ಯಾವಾಟಿಕೆಮೈಸೂರಿನಲ್ಲಿ ತಲೆಯೆತ್ತುತ್ತಿದೆ ಹೈಟೆಕ್ ವೇಶ್ಯಾವಾಟಿಕೆ

ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದ ಒಡನಾಡಿ ಸೇವಾಸಂಸ್ಥೆಯ ಸ್ವಯಂ ಸೇವಕರು ಮಂಗಳೂರು ಪೊಲೀಸರ ನೆರವಿನೊಂದಿಗೆ ಲಾಡ್ಜ್ ಮೇಲೆ ದಾಳಿ ನಡೆಸಿದ್ದರು.

Lodge raided at Mangaluru 6 Bangladeshi girls rescue

ಲಾಡ್ಜ್ ನಲ್ಲಿ ವ್ಯಾಪಕ ಶೋಧಕಾರ್ಯ ನಡೆಸಿದ ಪೊಲೀಸರಿಗೆ ಆಚ್ಚರಿ ಕಾದಿತ್ತು. ಲಾಡ್ಜ್ ನ ಕೊಠಡಿಯೊಂದರ ಶೌಚಾಲಯದಲ್ಲಿ ಗುಪ್ತ ದಾರಿಯೊಂದನ್ನು ಪೊಲೀಸರು ಪತ್ತೆಮಾಡಿದ್ದರು. ಆ ಗುಪ್ತದಾರಿಯ ಮೂಲಕ ಪ್ರವೇಶಿಸಿದ ಪೊಲೀಸರು ರಹಸ್ಯ ಕೊಠಡಿಯಲ್ಲಿ ಕೂಡಿ ಹಾಕಲಾಗಿದ್ದ 6 ಮಂದಿ ಬಾಂಗ್ಲಾ ದೇಶ ಮೂಲದ ಯುವತಿಯರನ್ನು ರಕ್ಷಿಸಿದ್ದಾರೆ.

Lodge raided at Mangaluru 6 Bangladeshi girls rescue

ಈ ದಾಳಿಯ ಸಂದರ್ಭದಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲದ ಕಿಂಗ್ ಪಿನ್ ಶಿವರಾಮ ಪೂಜಾರಿ ಎಂಬಾತ ತಪ್ಪಿಸಿಕೊಂಡಿದ್ದು, ಲಾಡ್ಜ್ ನಲ್ಲಿದ್ದ 15 ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ದಾಳಿ ಸಂದರ್ಭದಲ್ಲಿ ಯುವತಿಯರ ಬಳಿಇದ್ದ ಬಾಂಗ್ಲಾ ಕರೆನ್ಸಿ, ಐಡಿ ಕಾರ್ಡ್ ನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ.

English summary
High tech Prostitution racket busted in Mangaluru. Hotel Annapurna and lodge at Pumpwell was raided by Mangaluru police today morning . During the raid Mangaluru police and Mysuru Based Odanadi samstha rescued 6 Bangladeshi girls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X