ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್ ಉಲ್ಲಂಘನೆ; ದ.ಕ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 552 ವಾಹನಗಳು ಸೀಜ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು‌ ಕೊರೊನಾ ಲಾಕ್‌ಡೌನ್ ನಿಯಮ ಮುರಿಯುವವರ ಹೆಡೆಮುರಿಕಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು 552 ವಾಹನಗಳನ್ನು ಸೀಜ್ ಮಾಡಿದ್ದಾರೆ.

ಅದರಲ್ಲೂ ಮಂಗಳೂರು ನಗರ ಭಾಗದಲ್ಲಿ ಪೊಲೀಸರು ಅಕ್ಷರಶಃ ಬೇಟೆ ಹದ್ದುಗಳಂತೆ ನಾಕಾ ಬಂದಿ ಹಾಕಿ ಕಾನೂನು ಭಂಜಕರ ವಿರುದ್ಧ ಪ್ರಹಾರ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 552 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದು, ಅದರಲ್ಲಿ 452 ವಾಹನಗಳನ್ನು ಕೇವಲ ಮಂಗಳೂರು ನಗರ ಪೊಲೀಸ್ ಕಮೀಷನೇಟರ್ ವ್ಯಾಪ್ತಿಯಲ್ಲೇ ಮಾಡಿದ್ದಾರೆ.

Lockdown Violation; 552 Vehicles Sieze In 24 hours At Dakshina Kannada District

ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಕಮೀಷನೇಟರ್ ವ್ಯಾಪ್ತಿಯಲ್ಲಿ ಒಟ್ಟು 452 ವಾಹನಗಳನ್ನು ಸೀಜ್ ಮಾಡಲಾಗಿದ್ದು, ಅದರಲ್ಲಿ 401 ದ್ವಿಚಕ್ರ ವಾಹನಗಳಾಗಿವೆ, 11 ಆಟೋ ರಿಕ್ಷಾ, ಗೂಡ್ಸ್ ರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗಿದೆ. 40 ಕಾರುಗಳನ್ನೂ ಸೀಜ್ ಮಾಡಲಾಗಿದ್ದು, ಮತ್ತು 946 ಮಾಸ್ಕ್ ಹಾಕದ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ವ್ಯಾಪ್ತಿಯಲ್ಲಿ ಅಂದರೆ ಜಿಲ್ಲೆಯ ಗ್ರಾಮೀಣ ಭಾಗಗಳಾದ ಬಂಟ್ವಾಳ, ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಒಟ್ಟು100 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 394 ಮಾಸ್ಕ್ ಹಾಕದ ಪ್ರಕರಣಗಳನ್ನು ದಾಖಲಿಸಿಕೊಂಡು, ಕಾನೂನು ಉಲ್ಲಂಘನೆ ಮಾಡಿದ ಕುರಿತು 6 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದೆ.

ಹೀಗೆ ವಶಪಡಿಸಿಕೊಂಡ ವಾಹನಗಳಿಗೆ ನೇರ ಕೋರ್ಟ್ ಕೇಸ್ ಹಾಕುವುದರಿಂದ ಕೋರ್ಟ್ ತೆರೆಯುವವರೆಗೆ ಕೇಸ್ ಅನ್ನು ಪರಿಹಾರ ಮಾಡಲು ಅಸಾಧ್ಯವಾಗುತ್ತದೆ. ಕನಿಷ್ಠ ಮೂರು ತಿಂಗಳು ವಾಹನಗಳು ಪೊಲೀಸ್ ವಶದಲ್ಲೇ ಇರಬೇಕಾಗುತ್ತದೆ. ಆದುದರಿಂದ ಮನೆಯಲ್ಲೇ ಇದ್ದು, ವಾಹನಗಳನ್ನು ಕಾಪಾಡಿ ಅಂತಾ ಪೊಲೀಸರು ವಾಹನದ ಮಾಲೀಕರಿಗೆ ಕಿವಿಮಾತು ಹೇಳಿದ್ದಾರೆ.

English summary
The number of Corona lockdown violations cases rise in the Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X