ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 20ರವರೆಗೆ ಲಾಕ್‌ಡೌನ್ ವಿಸ್ತರಣೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 10: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಜೊತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಡೆಸಿರುವ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ದ.ಕ ಜಿಲ್ಲೆಯಲ್ಲಿ ಮತ್ತೊಂದು ವಾರ ಲಾಕ್‌ಡೌನ್ ಮಾಡಲು ಡಿಸಿ ಡಾ.ರಾಜೇಂದ್ರ ‌ಕೆ.ವಿಯವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ. ಇನ್ನೂ ಒಂದು ವಾರ ಕಟ್ಟುನಿಟ್ಟಿನ ಕ್ರಮ ಬೇಕಾಗಿದೆ. ರಾಜ್ಯದಲ್ಲಿ ಅನ್‌ಲಾಕ್ ಆದರೂ, ಜಿಲ್ಲಾ ಮಟ್ಟದಲ್ಲಿ ಲಾಕ್‌ಡೌನ್ ಮಾಡಬೇಕಿದೆ. ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನೆಲೆ ಬಿಗಿ ಕ್ರಮಕ್ಕೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಮಂಗಳೂರು, ಬಂಟ್ವಾಳ ತಾಲೂಕು ಹೊರತುಪಡಿಸಿ ಬೇರೆ ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿಲ್ಲ. ಸುಳ್ಯ, ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ ಇನ್ನು ಬಿಗಿ ಕ್ರಮ ಬೇಕು. ಜಿಲ್ಲೆಯೊಳಗೆ ಎಲ್ಲಾ ತಾಲೂಕು ಮಟ್ಟದಲ್ಲಿ ಬಿಗಿ ಕ್ರಮ ಅಗತ್ಯವಿದೆ ಅಂತ ಜಿಲ್ಲಾಧಿಕಾರಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮಾಹಿತಿ ನೀಡಿದ್ದಾರೆ.

Mangaluru: Lockdown To Be Extended In Dakshina Kannada District Till June 20

ಅಲ್ಲದೇ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನೆಲೆ, ಜಿಲ್ಲೆಯಲ್ಲಿ ಇನ್ನೊಂದಿಷ್ಟು ದಿನ ಕಠಿಣ ನಿಯಮ ಜಾರಿಗೆ ಅವಕಾಶ ಮಾಡಿ ಕೊಡಲು‌ ಮನವಿ ಮಾಡಿದ್ದಾರೆ. ಅಂಗಡಿ-ಮುಂಗಟ್ಟುಗಳು ತರೆಯುವ ವಿಚಾರದಲ್ಲೂ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ. ಪ್ರತಿ ಅಂಗಡಿಯವರಿಗೂ ವಾರಕ್ಕೆ ಒಂದು ದಿನ ಟೆಸ್ಟ್ ಕಡ್ಡಾಯವಾಗಬೇಕಿದೆ.

ಟೆಸ್ಟಿಂಗ್‌ನ್ನು ಹೆಚ್ಚಿಸಿ ಪಾಸಿಟಿವ್ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅವಕಾಶ ಬೇಕು. ಈ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು ಎಂದು ಸಿಎಂ ಸಭೆಯಲ್ಲಿ ಜಿಲ್ಲೆಯಲ್ಲಿ ‌ಇನ್ನಷ್ಟು ಕಟ್ಟುನಿಟ್ಟಿನ ‌ಕ್ರಮದ ಬಗ್ಗೆ ಜಿಲ್ಲಾಧಿಕಾರಿ ಅಭಿಪ್ರಾಯ ತಿಳಿಸಿದ್ದಾರೆ.

Mangaluru: Lockdown To Be Extended In Dakshina Kannada District Till June 20

ದ.ಕ ಜಿಲ್ಲೆಯಲ್ಲಿ ವಾಹನ ಸಂಚಾರದ ವಿಚಾರದಲ್ಲಿ ಕೊಂಚ ನಿರ್ಬಂಧಕ್ಕೆ ‌ಮುಖ್ಯಮಂತ್ರಿ ಬಳಿ ಮಾಡಲಾಗಿದೆ. ತಾಲ್ಲೂಕಿನಿಂದ ತಾಲ್ಲೂಕಿಗೆ ಹೋಗಲು ನಿರ್ಬಂಧ ವಿಧಿಸಬೇಕು. ಹೀಗೆ ಹೋಗಲು ಅವಶ್ಯಕತೆ ಇದ್ದರೆ ಅನುಮತಿ ಪಡೆಯಲು ಇಲ್ಲವೇ ಪಾಸ್ ಬಗ್ಗೆ ಚಿಂತನೆ ನಡೆಸಬೇಕು. ಕಂಟೈನ್ಮೆಂಟ್ ಝೋನ್‌ನಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಬೇಕಿದೆ. ಸದ್ಯ ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಿದ್ದು, ಈ ಎರಡು ತಾಲ್ಲೂಕಿನಲ್ಲಿ ಕಂಟ್ರೋಲ್ ಬಂದರೆ ಜಿಲ್ಲೆಯಲ್ಲಿ ಇಳಿಕೆ‌ ಬಗ್ಗೆ‌ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗಿದೆ.

ಜೂ.20ರವರೆಗೂ ದ.ಕ ಜಿಲ್ಲೆ ಲಾಕ್‌ಡೌನ್‌ಗೆ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಕೆಲವೊಂದು ನಿರ್ದಿಷ್ಟ ವಿಚಾರಗಳಿಗೆ ಸಡಿಲಿಕೆ ಮಾಡಿ, ಉಳಿದಂತೆ ದ.ಕ ಜಿಲ್ಲೆ ಲಾಕ್‌ಡೌನ್ ನಿರ್ಧಾರ ಮಾಡಲಾಗಿದೆ. ಕೆಲ ಕೈಗಾರಿಕೆ ಸೇರಿ ಕೆಲವೊಂದು ನಿರ್ಬಂಧ ಸಡಿಲಿಸಿ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಸಿಎಂ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಡಿಸಿ ರಾಜೇಂದ್ರ ನಿರ್ಧಾರ ಮಾಡಿದ್ದಾರೆ. ಶುಕ್ರವಾರ ಮತ್ತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಸೇರಿ ಲಾಕ್‌ಡೌನ್ ರೂಪುರೇಷೆ ಮಾಡಲಿದ್ದಾರೆ.

English summary
DC Dr Rajendra KV has appealed to Chief Minister BS Yediyurappa to lockdown extension another 1 week in the Dakshina district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X