ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಶೆಯೇರಿಸಿದ ಲಾಕ್ ಡೌನ್!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 27; ಸರ್ಕಾರ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಮದ್ಯವನ್ನು ಸೇರಿಸಿದೆ. ಲಾಕ್‌ಡೌನ್ ನಡುವೆ ಬೆಳಗ್ಗೆ 6 ಗಂಟೆಗೆ ಹಾಲಿನ ಜೊತೆಗೆ ಆಲ್ಕೋಹಾಲ್ ಕೂಡಾ ಸಿಗುತ್ತದೆ. ಇದರಿಂದ ಕುಡುಕರ ಸಂಖ್ಯೆಯೂ ಹೆಚ್ಚಿದೆ. ಕುಡಿತದ ಸಂಖ್ಯೆಯೂ ಹೆಚ್ಚಾಗಿದೆ.

ಮದ್ಯ ಯಥೇಚ್ಛವಾಗಿ ಸಿಗುವುದರಿಂದ ಕೆಲವು ಜನರು ಮನೆಯಲ್ಲಿಯೇ ಇಡೀ ದಿನ ಮದ್ಯದ ದಾಸರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಇಲಾಖೆ ನೀಡಿರುವ ದಾಖಲೆಗಳು ಈ ಅಂಶಗಳನ್ನು ಪುಷ್ಠೀಕರಿಸುತ್ತಿದೆ.

ಲಾಕ್ ಡೌನ್ ಘೋಷಣೆ; ಮದ್ಯ ಖರೀದಿಗೆ ಮುಗಿಬಿದ್ದ ಜನ! ಲಾಕ್ ಡೌನ್ ಘೋಷಣೆ; ಮದ್ಯ ಖರೀದಿಗೆ ಮುಗಿಬಿದ್ದ ಜನ!

ಈ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 1ರಿಂದ ಮೇ 25ರವರೆಗೆ 1,61,933 ಮದ್ಯದ ಬಾಕ್ಸ್‌ಗಳು ಮಾರಾಟವಾಗಿದೆ. ಕಳೆದ ವರ್ಷದ ಮೇ ತಿಂಗಳ 25 ದಿನಗಳ ಲೆಕ್ಕಾಚಾರ ನೋಡಿದರೆ ಈ ವರ್ಷ 70,000 ಲೀಟರ್ ಮದ್ಯ ಹೆಚ್ಚು ಮಾರಾಟವಾಗಿದೆ.

ಸರಳವಾಗಿ ನೆರವೇರಿದ ಮದ್ಯ, ಸಿಗರೇಟು ಪ್ರಿಯ ಖಾಪ್ರಿ ದೇವರ ಜಾತ್ರೆಸರಳವಾಗಿ ನೆರವೇರಿದ ಮದ್ಯ, ಸಿಗರೇಟು ಪ್ರಿಯ ಖಾಪ್ರಿ ದೇವರ ಜಾತ್ರೆ

Lockdown Jump In Liquor Sales In Dakshina Kannada

ಲಾಕ್ ಡೌನ್ ವೇಳೆ ಮನೆಯಲ್ಲಿಯೇ ಇರುವ ಮದ್ಯಪ್ರಿಯರು ಹೆಚ್ಚುವರಿ ಮದ್ಯವನ್ನು ಸೇವಿಸುತ್ತಿದ್ದಾರೆ ಅನ್ನೋದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಮಂಗಳೂರು: ಮಾಸ್ಕ್ ಧರಿಸದೆ ವಿವಾದ ಸೃಷ್ಟಿಸಿಕೊಂಡ ವೈದ್ಯ ಹೇಳೋದೇನು?ಮಂಗಳೂರು: ಮಾಸ್ಕ್ ಧರಿಸದೆ ವಿವಾದ ಸೃಷ್ಟಿಸಿಕೊಂಡ ವೈದ್ಯ ಹೇಳೋದೇನು?

ಅದರಲ್ಲೂ ಸ್ಕಾಚ್, ವಿಸ್ಕಿ ಸೇರಿದಂತೆ ದುಬಾರಿ ಮದ್ಯದ ಬದಲು ಕಡಿಮೆ ದರದ ಮದ್ಯವೇ ಅತೀ ಹೆಚ್ಚು ಮಾರಾಟವಾಗಿದೆ. ಕೆಲಸವಿಲ್ಲದ ಕಾರಣ ಕಡಿಮೆ ದರದ ಮದ್ಯಕ್ಕೆ ಜನರು ಹೆಚ್ಚು ಅವಲಂಬಿತರಾಗಿದ್ದಾರೆ.

ಈ ಬಾರಿ ಕರಾವಳಿಯಲ್ಲಿ ಬೇಸಿಗೆ ಯ ಅವಧಿ ಕಡಿಮೆಯಾಗಿ ಮಳೆಯ ಪ್ರಮಾಣವೇ ಜಾಸ್ತಿಯಾಗಿದೆ. ಪರಿಸರದ ಉಷ್ಣಾಂಶ ಕಡಿಮೆಯಾಗಿ ಬಿಯರ್ ಮಾರಾಟದಲ್ಲಿ ಭಾರೀ ಇಳಿಕೆಯಾಗಿದೆ.

ಮೇ 1 ರಿಂದ ಮೇ25ರವರೆಗ ಕೇವಲ 39,241 ಬಾಕ್ಸ್‌ಗಳು ಮಾತ್ರ ಮಾರಾಟವಾಗಿದೆ. ಮಳೆಯ ವಾತವರಣ ಇರುವುದರಿಂದ ಬಿಯರ್ ಬದಲು ಬೇರೆ ಮದ್ಯಕ್ಕೆ ಜನರು ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಿದ್ದಾರೆ.

ಸರ್ಕಾರ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಿ ತನ್ನ ಖಜಾನೆಯನ್ನು ತುಂಬಿಸಿಕೊಳ್ಳುತ್ತಿದೆ. ದಿನದ ಕೆಲಹೊತ್ತು ಮಾತ್ರ ನಶೆಯಲ್ಲಿರುತ್ತಿದ್ದ ಮದ್ಯಪ್ರಿಯರು ಇದೀಗ ಇಡೀ ದಿನ ನಶೆಯಲ್ಲಿದ್ದು, ಕುಡಿತದ ದಾಸರಾಗುತ್ತಿದ್ದಾರೆ.

English summary
Lockdown imposed in Karnataka. But liquor avilable from morning 6 am to 10 am. In Dakshina Kannada district liquor sale jumped during lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X