ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಟ್ಸ್ ಆಪ್ ಸ್ಟೇಟಸ್ ಜಗಳ; ಮಂಗಳೂರಿನಲ್ಲಿ ಯುವ ಕಾಂಗ್ರೆಸ್ ಮುಖಂಡನಿಂದ ಶೂಟೌಟ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 23: ಎರಡು ತಂಡಗಳ ನಡುವೆ ಶುರುವಾದ ಹೊಡೆದಾಟ ಶೂಟೌಟ್ ವರೆಗೂ ತಲುಪಿದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಸಮೀಪದ ಮುಕ್ಕಚ್ಚೇರಿ ಎಂಬಲ್ಲಿ ನಡೆದಿದೆ.

ಮುಕ್ಕಚ್ಚೇರಿಯ ಕಡಪರ ಎಂಬಲ್ಲಿ ಭಾನುವಾರ ತಡರಾತ್ರಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಆರಂಭದಲ್ಲಿ ವಾಟ್ಸ್ ಆಪ್ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಸಲ್ಮಾನ್ ನಡುವೆ ಮೊಬೈಲ್ ಫೋನ್ ಮೂಲಕ ಮಾತಿನ ಚಕಮಕಿ ನಡೆಸಿದ್ದಾರೆ. ನಂತರ, ಸ್ಥಳೀಯ ಕಾಂಗ್ರೆಸ್ ಮುಖಂಡ ಅತ್ತಾವರ ನಿವಾಸಿ ಸುಹೈಲ್ ಕಂದಕ್ ಏಳು ಮಂದಿ ಸಹಚರರೊಂದಿಗೆ ರಾತ್ರಿ 11:30ರ ಸುಮಾರಿಗೆ ಕಡಪರಕ್ಕೆ ತೆರಳಿದ್ದಾನೆ. ಅಲ್ಲಿ ಎರಡೂ ತಂಡಗಳ ನಡುವೆ ಹೊಡೆದಾಟ ಶುರುವಾಗಿದೆ.

ವಾಷಿಂಗ್ಟನ್ ಡಿಸಿ ಯಲ್ಲಿ ಶೂಟೌಟ್, ಓರ್ವ ಸಾವು, ಐವರಿಗೆ ಗಾಯವಾಷಿಂಗ್ಟನ್ ಡಿಸಿ ಯಲ್ಲಿ ಶೂಟೌಟ್, ಓರ್ವ ಸಾವು, ಐವರಿಗೆ ಗಾಯ

ಈ ವೇಳೆ ವಿರೋಧಿ ತಂಡದ ಮೇಲೆ ಸುಹೈಲ್ ಕಂದಕ್ ಐದು ಸುತ್ತು ಫೈರಿಂಗ್ ಮಾಡಿದ್ದಾನೆ. ಘಟನೆಯಲ್ಲಿ ಕಡಪರ ನಿವಾಸಿ ಇರ್ಶಾದ್ (20) ಎಂವರು ಗಾಯಗೊಂಡಿದ್ದಾರೆ. ಸುಹೈಲ್ ಫೈರಿಂಗ್ ಮಾಡುತ್ತಿದ್ದಂತೆ ಸ್ಥಳೀಯರು ಆತನ ಕಾರನ್ನು ಪುಡಿಗಟ್ಟಿದ್ದಾರೆ.

Local Youth Congress Leader Shootout In Ullala

ಜಮೀನು ವಿವಾದದಲ್ಲಿ ಸಂಬಂಧಿಯಿಂದಲೇ ಗುಂಡೇಟು; ಆಸ್ಪತ್ರೆಗೆ ದಾಖಲುಜಮೀನು ವಿವಾದದಲ್ಲಿ ಸಂಬಂಧಿಯಿಂದಲೇ ಗುಂಡೇಟು; ಆಸ್ಪತ್ರೆಗೆ ದಾಖಲು

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶೂಟೌಟ್ ನಡೆಸಿದ ಆಯುಧವನ್ನು ವಶಪಡಿಸಿಕೊಂಡಿರುವುದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ, ದೂರು, ಪ್ರತಿದೂರುಗಳು ದಾಖಲಾಗಿವೆ. ಇರ್ಶಾದ್ ನೀಡಿರುವ ದೂರಿನನ್ವಯ ಬಶೀರ್, ಸುಹೈಲ್ ಕಂದಕ್ ಮತ್ತು ತಂಡದ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಹಲವರನ್ನು ಬಂಧಿಸಲಾಗಿದೆ. ಸುಹೈಲ್ ಕಂದಕ್ ನೀಡಿರುವ ದೂರಿನನ್ವಯ ಸಲ್ಮಾನ್ ಮತ್ತು 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

English summary
Quarrel between the two teams leads up to the shootout in Mukkacheri near Mangalore's outskirt ullala. The shootout was carried out by Suhail Kandak, a resident of Attawara, a local Congress leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X