• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ಫೋಟೋ; ಶೌಚಾಲಯದಲ್ಲಿ ಬಂಧಿಯಾದ ಚಿರತೆ, ನಾಯಿ!

|

ದಕ್ಷಿಣ ಕನ್ನಡ, ಫೆಬ್ರವರಿ 03: ನಾಯಿಯನ್ನು ಅಟ್ಟಿಸಿಕೊಂಡ ಬಂದ ಚಿರತೆ ಮನೆಯ ಶೌಚಾಲಯಕ್ಕೆ ನುಗ್ಗಿದೆ. ಮನೆಯವರು ಚಿರತೆ ಮತ್ತು ನಾಯಿಯನ್ನು ಅಲ್ಲಿಯೇ ಕೂಡಿ ಹಾಕಿದ್ದಾರೆ. ಬುಧವಾರ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬುಧವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೈಕಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

ಬೆಂಗಳೂರು ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ! ಬೆಂಗಳೂರು ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ !

ರೇಗಪ್ಪ ಎಂಬುವವರ ಮನೆಯ ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಶೌಚಾಲಯಕ್ಕೆ ನುಗ್ಗಿದೆ. ಚಿರತೆ ನುಗ್ಗಿದ ಬಳಿಕ ಗಾಬರಿಗೊಂಡ ಮನೆಯ ಸದಸ್ಯರು ಹೊರಗೋಡಿ ಬಂದಿದ್ದಾರೆ. ಶೌಚಾಲಯದ ಬಾಗಿಲು ಹಾಕಿದ್ದಾರೆ.

ಚಾಮರಾಜನಗರ; ವೈದ್ಯರ ವಸತಿ ಗೃಹಕ್ಕೆ ನುಗ್ಗಿದ ಚಿರತೆ ಚಾಮರಾಜನಗರ; ವೈದ್ಯರ ವಸತಿ ಗೃಹಕ್ಕೆ ನುಗ್ಗಿದ ಚಿರತೆ

ಇದರಿಂದಾಗಿ ಚಿರತೆ ಮತ್ತು ನಾಯಿ ಶೌಚಾಲಯದಲ್ಲಿಯೇ ಬಂಧಿಯಾಗಿವೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿರತೆ ಸಹ ಕೂಡಿ ಹಾಕಿದ್ದರಿಂದ ಗಾಬರಿಗೊಂಡಿದೆ. ಶೌಚಾಲಯದ ಒಂದು ಮೂಲೆಯಲ್ಲಿ ಚಿರತೆ ಮತ್ತೊಂದು ಮೂಲೆಯಲ್ಲಿ ನಾಯಿ ಇದೆ.

ನಾಯಿ ಮೇಲೆ ಕಾರು ಹತ್ತಿಸಿದ ನಿವೃತ್ತ ಇನ್‌ಸ್ಪೆಕ್ಟರ್ ವಿರುದ್ಧ ಕೇಸು ! ನಾಯಿ ಮೇಲೆ ಕಾರು ಹತ್ತಿಸಿದ ನಿವೃತ್ತ ಇನ್‌ಸ್ಪೆಕ್ಟರ್ ವಿರುದ್ಧ ಕೇಸು !

ಚಿರತೆ ಬಂಧಿಯಾಗಿರುವ ಮಾಹಿತಿಯನ್ನು ತಿಳಿದು ಸುಬ್ರಮಣ್ಯ ವಲಯ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿದೆ. ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಚರಣೆಯನ್ನು ಆರಂಭಿಸಿದ್ದಾರೆ.

ಮುಂಜಾನೆ ನಾಯಿ ಜೋರಾಗಿ ಕೂಗುತ್ತಾ ಓಡಿದ್ದನ್ನು ಕೇಳಿ ಹೊರಬಂದೆವು. ಆಗ ಚಿರತೆ ಅದನ್ನು ಅಟ್ಟಿಸಿಕೊಂಡು ಹೋಗಿದ್ದು ನೋಡಿದೆವು. ಅದು ಶೌಚಾಲಯದೊಳಗೆ ಹೋಗುತ್ತಿದ್ದಂತೆ ಬಾಗಿಲು ಹಾಕಿದೆವು ಎಂದು ರೇಗಪ್ಪ ಕುಟುಂಬದವರು ಹೇಳಿದ್ದಾರೆ.

English summary
A leopard while chasing a dog entered inside a toilet. The members of the house locked both animals inside the toilet. Incident reported at Kaikamba of Kadaba taluk Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X