ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಕೇಸ್ ಮುಚ್ಚಿ ಹಾಕಲು ಯತ್ನಿಸಿದ್ದ ವಕೀಲ ರಾಜೇಶ್ ಭಟ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 22; ಮಂಗಳೂರಿನ ಪ್ರಸಿದ್ಧ ವಕೀಲ ರಾಜೇಶ್ ಭಟ್ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ವಕೀಲನ ಪ‌ರ ಕೇಸ್ ದಾಖಲಿಸದಂತೇ ಒತ್ತಡ ಹೇರಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಇಬ್ಬರು ಪೊಲೀಸರನ್ನು ಅಮಾನತು ಮಾಡಿದ್ದಾರೆ. ಮಂಗಳೂರು ಮಹಿಳಾ ಜಾಗೃತಿ ವೇದಿಕೆಯ ಅಧ್ಯಕ್ಷೆ ಸಂತ್ರಸ್ತೆಯ ಜೊತೆಗೆ ರಾಜೀ ಪಂಚಾಯಿತಿಗೆ ಮುಂದಾಗಿದ್ದು, ಆಕೆಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು; ಡಿಸಿಪಿ ವಾಹನದ ಮೇಲೆ ಲಾರಿ ಹತ್ತಿಸಿದ ಮರಳು ದಂಧೆಕೋರರು ಮಂಗಳೂರು; ಡಿಸಿಪಿ ವಾಹನದ ಮೇಲೆ ಲಾರಿ ಹತ್ತಿಸಿದ ಮರಳು ದಂಧೆಕೋರರು

ಮಂಗಳೂರಿನ ಹೈಪ್ರೊಫೈಲ್ ವಕೀಲನ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ಕವಲೊಡೆಯುತ್ತಿದೆ. ಸಂತ್ರಸ್ತೆ ಪೊಲೀಸ್ ದೂರು ನೀಡುವ ಮುನ್ನ ಆರೋಪಿ ವಕೀಲ ರಾಜೇಶ್ ಭಟ್, ಕೇಸ್ ಮುಚ್ಚಿಹಾಕಲು ನಡೆಸಿದ ಭಾರೀ ಷಡ್ಯಂತ್ರ ಈಗ ಬೆಳಕಿಗೆ ಬಂದಿದೆ.

ಮಂಗಳೂರು; ಮಂಕಾದ ಖಾಕಿ, ಕಿಡಿಗೇಡಿಗಳಿಗೆ ಇಲ್ಲ ಲಗಾಮು! ಮಂಗಳೂರು; ಮಂಕಾದ ಖಾಕಿ, ಕಿಡಿಗೇಡಿಗಳಿಗೆ ಇಲ್ಲ ಲಗಾಮು!

 Lawyer Rajesh Bhat Case Police Officer Suspended

ಮಹಿಳಾ ಜನಜಾಗೃತಿ ವೇದಿಕೆಯ ಅಧ್ಯಕ್ಷೆಯನ್ನು ಬಳಸಿಕೊಂಡು ವಕೀಲ ರಾಜೇಶ್ ಭಟ್ ಪೊಲೀಸರನ್ನು ಉಪಯೋಗಿಸಿ ಕೇಸ್ ಮುಚ್ಚಿ ಹಾಕಲು ಯತ್ನಿಸಿರುವ ವಿಚಾರ ಬಯಲಾಗಿದೆ. ವಕೀಲ ರಾಜೇಶ್ ಭಟ್ ಸದ್ಯ ತಲೆಮರೆಸಿಕೊಂಡಿದ್ದು, ನಾಲ್ಕು ಪೊಲೀಸ್ ತಂಡಗಳು ಶೋಧ ಕಾರ್ಯ ಮಾಡುತ್ತಿದೆ.‌ ಇದರ ನಡುವೆ ವಕೀಲ ನಡೆಸಿರುವ ಷಡ್ಯಂತ್ರ ಬಯಲಾಗಿದೆ.

ಮಂಗಳೂರು; ಹೆದ್ದಾರಿಗೆ ಭೂಸ್ವಾಧೀನ, ರೈತರು ಕೋರ್ಟ್‌ಗೆ ಮಂಗಳೂರು; ಹೆದ್ದಾರಿಗೆ ಭೂಸ್ವಾಧೀನ, ರೈತರು ಕೋರ್ಟ್‌ಗೆ

ಸಂತ್ರಸ್ತೆ ಮತ್ತು ಆರೋಪಿ ವಕೀಲ ರಾಜೇಶ್ ಭಟ್ ಆಡಿಯೋ ಸಂಭಾಷಣೆ ವೈರಲ್ ಆದ ಹಿನ್ನಲೆಯಲ್ಲಿ ಗಾಬರಿಗೊಂಡ ವಕೀಲ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಬಗ್ಗೆ ಸಂತ್ರಸ್ತೆ ದೂರು ನೀಡುವ ಮೊದಲೇ ವಕೀಲ ರಾಜೇಶ್ ಭಟ್, ಉರ್ವ ಠಾಣೆಯಲ್ಲಿ ಸಂತ್ರಸ್ತೆ ಮತ್ತು ಸಂತ್ರಸ್ತೆಯ ಸ್ನೇಹಿತೆಯ ವಿರುದ್ಧ ದೂರು ನೀಡಿದ್ದ.

ಈ ಪ್ರಕರಣದಲ್ಲಿ ಸಂತ್ರಸ್ತೆಯ ಸ್ನೇಹಿತೆಯಿಂದ ಪೊಲೀಸರು ಒತ್ತಾಯಪೂರ್ವಕವಾಗಿ ಮುಚ್ಚಳಿಕೆ ಬರೆಸಿ ಕಳುಹಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಂತ್ರಸ್ತೆ ಸ್ನೇಹಿತೆಯು ನೀಡಿದ ಮಾಹಿತಿಯ ಪ್ರಕಾರ, ಪೊಲೀಸರು ತನಿಖೆ ಮಾಡಿ ಇಬ್ಬರು ಪೊಲೀಸರು ಮತ್ತು ಮಂಗಳೂರು ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷೆ ಪವಿತ್ರ ಆಚಾರ್ಯ ಎಂಬಾಕೆಯನ್ನು ಬಂಧನ ಮಾಡಲಾಗಿದೆ.

ಸಂತ್ರಸ್ತೆ ಮತ್ತು ಸಂತ್ರಸ್ತೆಯ ಸ್ನೇಹಿತೆಯನ್ನು ಭೇಟಿಯಾಗಿದ್ದ ಆರೋಪಿ ಪವಿತ್ರ ಆಚಾರ್ಯ, ಈ ಪ್ರಕರಣದಲ್ಲಿ ತಮ್ಮ ಸಂಘಟನೆ ನೆರವಾಗೋದಾಗಿ ಹೇಳಿದ್ದಾಳೆ. ಸಂತ್ರಸ್ತೆ ಯ ಸ್ನೇಹಿತೆಗೆ ಕೌನ್ಸೆಲಿಂಗ್ ನೀಡೋದಾಗಿ ಕಾರಿನಲ್ಲಿ ಮಂಗಳೂರಿನ ಮೈದಾನಕ್ಕೆ ಕರೆದುಕೊಂಡು ಹೋಗಿ ಪವಿತ್ರಾ ಆಚಾರ್ಯ ಸಂತ್ರಸ್ತೆಯ ಸ್ನೇಹಿತೆಗೆ ಬೆದರಿಸಿದ್ದಾಳೆ.

ವಕೀಲ ರಾಜೇಶ್ ಭಟ್ ಪ್ರಭಾವಿಯಾಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿದರೆ ಜೀವ ಸಹಿತ ಉಳಿಯೋಕೆ ಆಗಲ್ಲ. ವಕೀಲ ವೃತ್ತಿಯಲ್ಲಿ ಮುಂದುವರಿಯೋಕೆ ಆಗಲ್ಲ. ಪೊಲೀಸರಿಗೆ ದೂರು ನೀಡದೆ ಸುಮ್ಮನಿರಬೇಕು ಎಂದು ಬೆದರಿಸಿದ್ದಾಳೆ ಎಂಬುದು ಆರೋಪವಾಗಿದೆ.

ಬಳಿಕ ಸಂತ್ರಸ್ತೆಯ ಸ್ನೇಹಿತೆಯನ್ನು ಉರ್ವ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ ಮುಚ್ಚಳಿಕೆ ಬರೆಸಿದ್ದಾರೆ. ಸಂತ್ರಸ್ತೆಯ ಸ್ನೇಹಿತೆ ಠಾಣೆಗೆ ಹೋದ ಸಂದರ್ಭದಲ್ಲಿ ಆರೋಪಿ ರಾಜೇಶ್ ಭಟ್ ಕೂಡಾ ಠಾಣೆಯಲ್ಲಿದ್ದು, ರಾಜೇಶ್ ಭಟ್ ಕೊಟ್ಟ ದೂರಿನಂತೆ ಪೊಲೀಸರು ಸಂತ್ರಸ್ತೆಯ ಸ್ನೇಹಿತೆಯಿಂದ ಮುಚ್ಚಳಿಕೆ ಬರೆಸಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಯಾದರೂ ಉರ್ವ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಕಲಾ, ಹೆಡ್‌ಕಾನ್‌ಸ್ಟೇಬಲ್ ಪ್ರಮೋದ್ ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಾರದೇ, ವಕೀಲನ ಜೊತೆ ಶಾಮೀಲಾದ ಹಿನ್ನಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಇಬ್ಬರನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತು ಮಾಡಿದ್ದಾರೆ.

ಇದರ ಜೊತೆಗೆ ಸಂತ್ರಸ್ತೆ ಯ ಸ್ನೇಹಿತೆಯ ಬೆದರಿಕೆ ಹಾಕಿ ಪ್ರಕರಣ ಮುಚ್ಚಲು ಯತ್ನಿಸಿದ್ದ ಮಂಗಳೂರು ಮಹಿಳಾ ಜಾಗೃತಿ ವೇದಿಕೆಯ ಅಧ್ಯಕ್ಷೆ ಪವಿತ್ರಾ ಆಚಾರ್ಯಳನ್ನೂ ಪೊಲೀಸರು ಬಂಧಿಸಿದ್ದಾರೆ. ಕೇಸ್ ಮುಚ್ಚಿ ಹಾಕಲು ಸಹಕರಿಸಿದ ಸಂತ್ರಸ್ತೆಯ ಗೆಳೆಯ ಧ್ರುವ ಮತ್ತು ಆತನ ತಾಯಿ ಮಹಾಲಕ್ಷ್ಮೀ ಎಂಬುವವರನ್ನೂ ಪೊಲೀಸರು ಬಂಧಿಸಿದ್ದಾರೆ.

English summary
Sexual harassment by Mangaluru lawyer Rajesh Bhat. Mangaluru police commissioner suspended police officer who helped accused Rajesh Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X