ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಹಾರಾಡಲಿದೆ 305 ಮೀಟರ್ ಉದ್ದದ ರಾಷ್ಟ್ರಧ್ವಜ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಆಗಸ್ಟ್ 14 : ಸ್ವಾತಂತ್ರ ದಿನಾಚರಣೆಗೆ ಮಂಗಳೂರು ಸಿದ್ಧವಾಗುತ್ತಿದೆ.ನಗರದ ಸಾರಸ್ವತ ವಿದ್ಯಾಸಂಸ್ಥೆಯಲ್ಲಿ 305 ಮೀಟರ್ ಉದ್ದದ ಬೃಹತ್ ತ್ರಿವರ್ಣ ಧ್ವಜವನ್ನು 1,000 ಮಂದಿ ವಿದ್ಯಾರ್ಥಿಗಳು ಹಿಡಿದು ರಾಷ್ಟ್ರಭಕ್ತಿಯನ್ನು ಅನಾವರಣಗೊಳಿಸಲಿದ್ದಾರೆ.

ಗಣಪತಿ ಪ್ರೌಢಶಾಲೆಯ ಸಮೀಪದ ಮಹಾಲಕ್ಷ್ಮೀ ಗಣಪತಿ ದೇವಸ್ಥಾನದ ಮುಂಭಾಗದಿಂದ ಈ ರಾಷ್ಟ್ರಧ್ವಜವು ಅನಾವರಣಗೊಳ್ಳುತ್ತಾ ಹಂಪನಕಟ್ಟೆ ವೃತ್ತದವರೆಗೆ ಮುಂದುವರಿಯಲಿದೆ. ಈ ಬೃಹತ್ ರಾಷ್ಟ್ರಧ್ವಜವನ್ನು ಸಂಸ್ಥೆಯ ವಿದ್ಯಾರ್ಥಿಗಳು ಹಿಡಿದು ಎಲ್ಲರ ಗಮನ ಸೆಳೆಯಲಿದ್ದಾರೆ. [ಸ್ವಾತಂತ್ರ ದಿನಾಚರಣೆ ತಯಾರಿಯ ಚಿತ್ರಗಳು]

mangaluru

ಶನಿವಾರ ಬೆಳಗ್ಗೆ 7.45ಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರದ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಬೃಹತ್ ತ್ರಿವರ್ಣ ಧ್ವಜ ಅನಾವರಣಗೊಳಿಸಲಾಗುತ್ತಿದೆ. [ಸ್ವಾತಂತ್ರ್ಯ ದಿನೋತ್ಸವ: ಹುಟ್ಟುಹಬ್ಬ ಆಚರಣೆಗೆ ಸಜ್ಜಾದ ಭಾರತ]

ರಾಷ್ಟ್ರದ ಉತ್ತಮ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೇಶಭಕ್ತ ಪ್ರಜೆಗಳಿಗೆ, ದೇಶ ರಕ್ಷಕರಿಗೆ ಈ ಕಾರ್ಯಕ್ರಮವನ್ನು ಸಮರ್ಪಿಸಲಾಗುತ್ತಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಮಹೇಶ್ ಎಲ್. ಬೊಂಡಾಲ್ ಹೇಳಿದ್ದಾರೆ.

ಸಾರಸ್ವತ ವಿದ್ಯಾಸಂಸ್ಥೆಯ ಅಧೀನದಲ್ಲಿರುವ ಗಣಪತಿ ಆಂಗ್ಲ ಮಾಧ್ಯಮ ಶಾಲೆ, ಗಣಪತಿ ಅನುದಾನಿತ ಪ್ರಾಥಮಿಕ ಶಾಲೆ, ಗಣಪತಿ ಪ್ರೌಢಶಾಲೆ, ಗಣಪತಿ ಪ.ಪೂ. ಕಾಲೇಜು, ಆನಂದಾಶ್ರಮ ಶಾಲೆ, ಪರಿಜ್ಞಾನ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Mangaluru Saraswat education society is all gearing up for the biggest Independence Day celebration on Saturday, August 15, 2005 by unfurling the 305 meter long national flag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X