ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವಾಲಯದ ಹೊರಗಿನ ಪೂಜೆ ದೇವರನ್ನು ತಲುಪೋಲ್ಲ: ಕುಕ್ಕೆ ಆಡಳಿತ ಮಂಡಳಿ!

|
Google Oneindia Kannada News

ಮಂಗಳೂರು, ಜೂನ್ 13: "ದೇವಾಲಯದ ಹೊರಗೆ ಮಾಡುವ ಪೂಜೆ ದೇವರನ್ನು ತಲುಪದಿರಬಹುದು" ಎಂಬ ಮಹತ್ವದ ಪ್ರಕಟಣೆಯೊಂದನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಹೊರಡಿಸಿದೆ.

ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ ಈ ಮಹತ್ವದ ಪ್ರಕಟಣೆಯನ್ನು ಹೊರಡಿಸಿರುವುದಾಗಿ ಅದು ಹೇಳಿದೆ. ಈ ದೇವಾಲಯಕ್ಕೆ ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಆದರೆ ಜನಜಂಗುಳಿ, ಸರತಿ ಸಾಲಿನಲ್ಲಿ ನಿಲ್ಲಬೇಕಾದ ಕಷ್ಟ, ವಿಳಂಬವಾಗಿವ ಸಾಧ್ಯತೆಗಳಿಂದಾಗಿ ಹಲವರು ದೇವಾಲಯದೊಳಗೆ ಪೂಜೆ ಸಲ್ಲಿಸದೆ, ಮಧ್ಯವರ್ತಿಗಳ ಮಾತಿಗೆ ಮರುಳಾಗಿ ದೇವಾಲಯದ ಹೊರಗೆ ಪೂಜೆ ಮಾಡಿಸುತ್ತಿದ್ದಾರೆ.

Kukke Subrahmanya: Pooja performed outside temple may not reach God

ಸತತ 7ನೇ ಬಾರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಂಬರ್ 1 ಸ್ಥಾನಸತತ 7ನೇ ಬಾರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಂಬರ್ 1 ಸ್ಥಾನ

ನದಿ ದಂಡೆಯ ಮೇಲೆ ಅಥವಾ ದೇವಾಲಯದ ಹೊರಗಿನ ಆವರಣದಲ್ಲಿ ಭಕ್ತರನ್ನು ಕರೆಸಿಕೊಂಡು, 'ದೇವಾಲಯದಲ್ಲಿ ಬಹಳ ರಶ್ ಇರುತ್ತದೆ ದಿನಗಟ್ಟಲೆ ಕಾಯಬೇಕು. ನಾವೂ ಈ ದೇವಾಲಯದವರೇ. ನಾವೇ ಪೂಜೆ ಮಾಡಿಸಿಕೊಡುತ್ತೇವೆ' ಎಂದು ಮಧ್ಯವರ್ತಿಗಳು ಒತ್ತಾಯಿಸಿ, ಭಕ್ತರು ದೇವಾಲಯದಲ್ಲಿ ಪೂಜೆ ಮಾಡಿಸದಂತೆ ಮಾಡುತ್ತಿದ್ದಾರೆ. ಇದರಿಂದ ದೇವಾಲಯದ ಹೆಸರಿಗೂ ಮಸಿಬಳಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಆಡಳಿತ ಮಂಡಳಿ ಈ ಪ್ರಕಟಣೆ ಹೊರಡಿಸಿದೆ.

ಕರ್ನಾಟಕದ ಮುಜರಾಯಿ ಖಾತೆಯಡಿಯಲ್ಲಿ ಬರುವ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕುಕ್ಕೆಗೆ ಪ್ರತಿ ದಿನ ಏನಿಲ್ಲವೆಂದರೂ 10,000 ಭಕ್ತರು ಭೇಟಿ ನೀಡುತ್ತಾರೆ.

English summary
Kukke Shree Subrahmanya Temple in Dakshina Kannada district has issued a public circular saying that pujas/rituals conducted outside the temple may not reach god. To control mediators, the temple issued this circular.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X