ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಭಟ್ಕಳ ನಡುವೆ ಹೊಸ ವೋಲ್ವೋ ಬಸ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 04 : ಮಾರ್ಚ್ 5ರಿಂದ 6 ಹೊಸ ವೋಲ್ವೋ ಬಸ್ ಗಳನ್ನು ಮಂಗಳೂರು-ಭಟ್ಕಳ ಮಾರ್ಗದಲ್ಲಿ ಪ್ರಥಮ ಬಾರಿಗೆ ಪ್ರಾರಂಭಿಸಲು ಮಂಗಳೂರು ವಿಭಾಗೀಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಪ್ರತಿ ದಿನ ಮಂಗಳೂರಿನಿಂದ 9 ಹಾಗೂ ಭಟ್ಕಳದಿಂದ 9 ಬಾರಿ ಸಂಚರಿಸಲಿವೆ.

ಪ್ರಮುಖ ಸ್ಥಳಗಳ ಪ್ರಯಾಣದರ : ಮಂಗಳೂರು-ಭಟ್ಕಳ ರು. 225, ಮಂಗಳೂರು-ಕುಂದಾಪುರ ರು.160, ಉಡುಪಿ-ಕುಂದಾಪುರ ರು. 65, ಮಣಿಪಾಲ-ಕುಂದಾಪುರ ರು. 65, ಕುಂದಾಪುರ-ಬೈಂದೂರು ರು. 45.

ವೋಲ್ವೊ ಬಸ್ಸಿನ ಸಮಯ : ಬೆಳಿಗ್ಗೆ 6.45ಕ್ಕೆ ಮಂಗಳೂರಿನಿಂದ ಹೊರಟು 9.54ಕ್ಕೆ ಭಟ್ಕಳ ತಲುಪಲಿದೆ. ಇದೇ ರೀತಿ ಬೆಳಿಗ್ಗೆ 7.15, 7.45, 10, 10.30, 11 ಅಪರಾಹ್ನ 2.45, 3.15, 3.45ಕ್ಕೆ ಮಂಗಳೂರಿನಿಂದ ಭಟ್ಕಳಕ್ಕೆ ಹೊರಡಲಿದೆ. [ಮಂಗಳೂರಿನಲ್ಲಿ ಬಸ್ ಬೆಂಕಿಗಾಹುತಿ, ಚಿತ್ರಗಳು]

KSRTC Volvo buses between Mangaluru-Bhatkal from 5th March

ಭಟ್ಕಳ- ಮಂಗಳೂರು : ಬೆಳಿಗ್ಗೆ 6ಕ್ಕೆ ಭಟ್ಕಳದಿಂದ ವೋಲ್ವೋ ಬಸ್ ಹೊರಡಲಿದ್ದು, ಇದೇ ರೀತಿ ಬೆಳಿಗ್ಗೆ 6.30, 7, 10.45, 11.15, 11.45, ಅಪರಾಹ್ನ 2, 2.30, 3ಕ್ಕೆ ಹೊರಡಲಿದೆ. ಸುರತ್ಕಲ್, ಮೂಲ್ಕಿ, ಉಡುಪಿ, ಮಣಿಪಾಲ, ಬ್ರಹ್ಮಾವರ, ಕುಂದಾಪುರ, ಬೈಂದೂರುಗಳಲ್ಲಿ ನಿಲುಗಡೆ ಇದೆ. ಇದಲ್ಲದೆ ಈಗಾಗಲೇ ಇರುವ ಮಂಗಳೂರು-ಮಣಿಪಾಲದ ವೋಲ್ವೊ ಬಸ್ಸುಗಳು ಎಂದಿನಂತೆ ಒಡಾಡಲಿವೆ.

English summary
KSRTC will be operating new volvo buses between Mangaluru and Bhatkal route from March 5, 2017. This is being done for the convenience of the general public. Apart from this the general bus services will be as usual.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X