ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ಕುಟುಟಾ ನಡುವೆ ವೋಲ್ವೊ ಬಸ್ ಸೇವೆ

|
Google Oneindia Kannada News

ಮಂಗಳೂರು, ಫೆಬ್ರವರಿ 16; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗ ನೂತನವಾಗಿ ವೋಲ್ವೊ ಬಸ್ ಸೇವೆಯನ್ನು ಆರಂಭಿಸಿದೆ. ಜನರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಮಂಗಳೂರು-ಕುಮಟಾ ನಡುವೆ ನೂತನ ವೋಲ್ವೊ ಬಸ್ ಸಂಚಾರ ನಡೆಸಲಿದೆ. ಉಡುಪಿ-ಕುಂದಾಪುರ-ಭಟ್ಕಳ-ಮುರ್ಡೇಶ್ವರ ಕ್ರಾಸ್-ಹೊನ್ನಾವರ ಮಾರ್ಗವಾಗಿ ಬಸ್ ಸಂಚಾರ ನಡೆಸಲಿದೆ.

ಫೆ. 14ರಿಂದ ರಾಯಬಾಗ-ಬೆಂಗಳೂರು ಹೊಸ ಸ್ಲೀಪರ್ ಬಸ್ ಸೇವೆ ಫೆ. 14ರಿಂದ ರಾಯಬಾಗ-ಬೆಂಗಳೂರು ಹೊಸ ಸ್ಲೀಪರ್ ಬಸ್ ಸೇವೆ

ಪ್ರಯಾಣಿಕರು ಮುಂಗಡ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣ ಮಾಡಲು ಅನುಕೂಲವನ್ನು ಕಲ್ಪಿಸಲಾಗಿದೆ. ಮಂಗಳೂರು ಸ್ಟೇಟ್ ಬ್ಯಾಂಕ್‌ನಿಂದ ಸಂಜೆ 5.15ಕ್ಕೆ ಹೊರಡುವ ಬಸ್ 21.45ಕ್ಕೆ ಕುಮಟಾಕ್ಕೆ ತಲುಪಲಿದೆ.

ಪುತ್ತೂರು; ಸರ್ಕಾರಿ ಬಸ್‌ನಲ್ಲಿ ಕೋಳಿಗೂ 50 ರೂ. ಟಿಕೆಟ್!ಪುತ್ತೂರು; ಸರ್ಕಾರಿ ಬಸ್‌ನಲ್ಲಿ ಕೋಳಿಗೂ 50 ರೂ. ಟಿಕೆಟ್!

 KSRTC Volvo Bus Between Mangaluru Kumta

ಕುಮುಟಾದಿಂದ ಮುಂಜಾನೆ 5.30ಕ್ಕೆ ಹೊರಡುವ ಬಸ್ ಮಂಗಳೂರು ಸ್ಟೇಟ್‌ ಬ್ಯಾಂಕ್‌ ಅನ್ನು 10 ಗಂಟೆಗೆ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೊಸ ಎಸಿ ಬಸ್‌ಗಳ ಖರೀದಿ ನಿಲ್ಲಿಸಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿಹೊಸ ಎಸಿ ಬಸ್‌ಗಳ ಖರೀದಿ ನಿಲ್ಲಿಸಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ

ಪ್ರಯಾಣ ದರದ ಮಾಹಿತಿ; ಮಂಗಳೂರು-ಕುಮಟಾ ನಡುವಿನ ಪ್ರಯಾಣ ದರ 330 ರೂ. ಆಗಿದೆ. ಮಂಗಳೂರು-ಹೊನ್ನಾವರ ಸರ್ಕಲ್‌ 300 ರೂ., ಮಂಗಳೂರು-ಮುರ್ಡೇಶ್ವರ ಕ್ರಾಸ್ 280 ರೂ.ಗಳು.

ಮಂಗಳೂರು-ಭಟ್ಕಳ 260 ರೂ., ಮಂಗಳೂರು-ಕುಂದಾಪುರ 160 ರೂ.ಗಳು. ಪ್ರಯಾಣಿಕರು ಕೆಎಸ್ಆರ್‌ಟಿಸಿ ವೆಬ್ ಸೈಟ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.

English summary
KSRTC Mangaluru division started Volvo bus service between Mangaluru-Kumta. Bus will run in Udupi, Honnavar route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X