ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಹಾರಾಷ್ಟ್ರದ ಮುಂಬೈಗೆ ಗುರುವಾರದಿಂದ ಬಸ್ ಸೇವೆ ಆರಂಭಿಸಲಿದೆ. ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ನಗರಗಳಿಗೆ ಬಸ್ ಸಂಚಾರ ನಡೆಸಲಿದೆ.

ಮಂಗಳೂರು ನಗರದಿಂದ ಮುಂಬೈಗೆ ಮಲ್ಟಿ ಆಕ್ಸೆಲ್ ಮತ್ತು ಹವಾನಿಯಂತ್ರಣ ರಹಿತ ಬಸ್‌ಗಳು ಗುರುವಾರದಿಂದ ಸಂಚಾರ ನಡೆಸಲಿವೆ. ಸರ್ಕಾರದ ಕೋವಿಡ್ ಮಾರ್ಗಸೂಚಿ ಅನ್ವಯ ಪ್ರಯಾಣಿಕರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಕೋವಿಡ್ 19; ದಕ್ಷಿಣ ಕನ್ನಡ ಜಿಲ್ಲೆಗೆ ಸಿಹಿ ಸುದ್ದಿ ಕೋವಿಡ್ 19; ದಕ್ಷಿಣ ಕನ್ನಡ ಜಿಲ್ಲೆಗೆ ಸಿಹಿ ಸುದ್ದಿ

ಗುರುವಾರ ಮಧ್ಯಾಹ್ನ 12 ಗಂಟೆಗೆ ಮಂಗಳೂರು ನಗರದಿಂದ ಬಸ್ ಹೊರಡಲಿದ್ದು, ಮರುದಿನ ಬೆಳಗ್ಗೆ 7.30ಕ್ಕೆ ಮುಂಬೈಗೆ ತಲುಪಲಿದೆ. ಮುಂಬೈನಿಂದ 11 ಗಂಟೆಗೆ ಹೊರಡಲಿರುವ ಬಸ್, ಮರುದಿನ ಬೆಳಗ್ಗೆ 7.30ಕ್ಕೆ ಮಂಗಳೂರು ತಲುಪಲಿದೆ. ಪ್ರಯಾಣ ದರ 1,600 ರೂ.ಗಳು.

ಮತ್ತೆ ರಸ್ತೆಗಿಳಿಯಲಿದೆ ಮಲೆನಾಡ ಜೀವನಾಡಿ ಸಹಕಾರ ಸಾರಿಗೆ ಬಸ್ ಮತ್ತೆ ರಸ್ತೆಗಿಳಿಯಲಿದೆ ಮಲೆನಾಡ ಜೀವನಾಡಿ ಸಹಕಾರ ಸಾರಿಗೆ ಬಸ್

KSRTC Bus Service To Mumbai From September 24

ಮಲ್ಟಿ ಆಕ್ಸೆಲ್ ಬಸ್‌ಗಳು ಮಂಗಳೂರಿನಿಂದ 1 ಗಂಟೆಗೆ ಹೊರಡಲಿದ್ದು, 7 ಗಂಟೆಗೆ ಮುಂಬೈ ತಲುಪಲಿವೆ. ಮುಂಬೈನಿಂದ 1 ಗಂಟೆಗೆ ಹೊರಡಲಿರುವ ಬಸ್, 7 ಗಂಟೆಗೆ ಮಂಗಳೂರು ತಲುಪಲಿದೆ.

 ಇಂದಿನಿಂದ ಬೆಳಗಾವಿ-ಮಹಾರಾಷ್ಟ್ರ ಬಸ್ ಸಂಚಾರ ಆರಂಭ ಇಂದಿನಿಂದ ಬೆಳಗಾವಿ-ಮಹಾರಾಷ್ಟ್ರ ಬಸ್ ಸಂಚಾರ ಆರಂಭ

ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರ. ಒಟ್ಟು ಸೋಂಕಿತರ ಸಂಖ್ಯೆ 12,63,799. ಮುಂಬೈನಲ್ಲಿ ಒಟ್ಟು ಸೋಂಕಿತರು 1,90,264.

ಕೋವಿಡ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಮುಂಬೈ ಮತ್ತು ಮಂಗಳೂರು ನಗರದ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಈಗ ಕೆಎಸ್ಆಅರ್‌ಟಿಸಿ ಪುನಃ ಸಂಚಾರ ಆರಂಭಿಸಲಿದೆ.

English summary
KSRTC will run multi-axle and non-air-conditioned bus services buses from Mangaluru to Mumbai from September 24, 2020. Bus services suspended after lockdown announcement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X