ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ಹೈದರಾಬಾದ್ ನಡುವೆ ಅಂಬಾರಿ ಬಸ್; ವೇಳಾಪಟ್ಟಿ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 30: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಕ್ಟೋಬರ್ 1ರಿಂದ ಮಂಗಳೂರು ಮತ್ತು ಉಡುಪಿಯಿಂದ ಹೈದರಾಬಾದ್‌ಗೆ ಐಷಾರಾಮಿ ಬಸ್ ಸೇವೆಯನ್ನು ಆರಂಭಿಸಲಿದೆ.

ಮಂಗಳೂರು-ಹೈದರಾಬಾದ್ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆಕ್ಸೆಲ್ ಎಸಿ ಸ್ಲಿಪರ್ ಮತ್ತು ಉಡುಪಿ- ಹೈದರಾಬಾದ್ ಮಾರ್ಗದಲ್ಲಿ ರಾಜಹಂಸ ಬಸ್‌ ಸೇವೆಯನ್ನು ಆರಂಭಿಸಲಾಗುತ್ತಿದೆ.

ಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ

ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಐಷಾರಾಮಿ ಬಸ್‌ಗಳ ಸಂಚಾರ ಆರಂಭಿಸಲಾಗುತ್ತಿದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ. ಅಂತರರಾಜ್ಯ ಬಸ್ ಸೇವೆಗೆ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಆರಂಭಿಸಲಾಗಿದೆ ಎಂದು ನಿಗಮ ಪ್ರಕಟಣೆಯಲ್ಲಿ ಹೇಳಿದೆ.

ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇನ್ನು ಎಲ್ಲಾ ಸೀಟು ಭರ್ತಿ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಇನ್ನು ಎಲ್ಲಾ ಸೀಟು ಭರ್ತಿ

ಕಳೆದ ಗುರುವಾರ ಕೆಎಸ್ಆರ್‌ಟಿಸಿ ಮಂಗಳೂರು-ಮುಂಬೈ ನಡುವೆ ಮಲ್ಟಿ ಆಕ್ಸೆಲ್ ಮತ್ತು ಹವಾನಿಯಂತ್ರಣ ರಹಿತ ಬಸ್ ಸೇವೆಗಳನ್ನು ಆರಂಭಿಸಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಬಸ್ ಸಂಚಾರವನ್ನು ಪುನಃ ಆರಂಭಿಸಲಾಗಿತ್ತು.

ಹುಬ್ಬಳ್ಳಿ-ಹೈದರಾಬಾದ್ ಬಸ್ ಸಂಚಾರ ಆರಂಭ; ವೇಳಾಪಟ್ಟಿ ಹುಬ್ಬಳ್ಳಿ-ಹೈದರಾಬಾದ್ ಬಸ್ ಸಂಚಾರ ಆರಂಭ; ವೇಳಾಪಟ್ಟಿ

ಮಂಗಳೂರು-ಹೈದರಾಬಾದ್

ಮಂಗಳೂರು-ಹೈದರಾಬಾದ್

ಮಂಗಳೂರು-ಹೈದರಾಬಾದ್ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆಕ್ಸೆಲ್ ಎಸಿ ಸ್ಲಿಪರ್ ಬಸ್ ಸಂಚಾರ ನಡೆಸಲಿದೆ. ಮಧ್ಯಾಹ್ನ 3ಕ್ಕೆ ಮಂಗಳೂರಿನಿಂದ ಹೊರಡುವ ಬಸ್ ಮರುದಿನ ಬೆಳಗ್ಗೆ 8.30ಕ್ಕೆ ಹೈದರಾಬಾದ್ ತಲುಪಲಿದೆ.

ಪ್ರಯಾಣ ದರ ಎಷ್ಟು?

ಪ್ರಯಾಣ ದರ ಎಷ್ಟು?

ಹೈದರಾಬಾದ್‌ನಿಂದ ಸಂಜೆ 5ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 10 ಗಂಟೆಗೆ ಮಂಗಳೂರಿಗೆ ಬಂದು ತಲುಪಲಿದೆ. ಈ ಬಸ್ ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು ಮಾರ್ಗವಾಗಿ ಸಂಚಾರ ನಡೆಸಲಿದೆ. ಪ್ರಯಾಣ ದರ 1,700 ರೂ.ಗಳು.

ಉಡುಪಿ-ಹೈದರಾಬಾದ್ ಬಸ್

ಉಡುಪಿ-ಹೈದರಾಬಾದ್ ಬಸ್

ಉಡುಪಿ-ಹೈದರಾಬಾದ್ ನಡುವೆ ರಾಜಹಂಸ ಬಸ್ ಸಂಚಾರ ನಡೆಸಲಿದೆ. ಉಡುಪಿಯಿಂದ ಬೆಳಗ್ಗೆ 11.30ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 6.30ಕ್ಕೆ ಹೈದರಾಬಾದ್ ತಲುಪಲಿದೆ ಎಂದು ಕೆಎಸ್ಆರ್‌ಟಿಸಿ ಹೇಳಿದೆ.

ಪ್ರಯಾಣ ದರದ ವಿವರ

ಪ್ರಯಾಣ ದರದ ವಿವರ

ಹೈದರಾಬಾದ್‌ನಿಂದ ಸಂಜೆ 5.30ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 11 ಗಂಟೆಗೆ ಉಡುಪಿಗೆ ಬರಲಿದೆ. ಈ ಬಸ್ ಮಣಿಪಾಲ, ಕುಂದಾಪುರ, ಸಿದ್ದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಹರಿಹರ, ಹರಪನಹಳ್ಳಿ, ಹೊಸಪೇಟೆ, ಗಂಗಾವತಿ, ಮಾನ್ವಿ, ರಾಯಚೂರು ಮೂಲಕ ಹೈದರಾಬಾದ್‌ ತಲುಪಲಿದೆ. ಪ್ರಯಾಣದರ 970 ರೂ.ಗಳು.

English summary
KSRTC to run Ambari dream class bus between Mangaluru and Hyderabad. Rajahamsa bus between Udupi and Hyderabad from October 1, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X