ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳದಲ್ಲಿ ಐವರಿಗೆ ಕಠಿಣ ಕ್ಷುಲ್ಲಕ ದೀಕ್ಷಾ ಪ್ರಧಾನ

|
Google Oneindia Kannada News

ಮಂಗಳೂರು, ಫೆಬ್ರವರಿ 14:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸಂಭ್ರಮ ಮುಗಿಲು ಮುಟ್ಟಿದೆ. ಮಹಾಮಸ್ತಕಾಭಿಷೇಕದ ಅಂಗವಾಗಿ ಕ್ಷುಲ್ಲಕ ದೀಕ್ಷಾ ಮಹೋತ್ಸವ ಎಂಬ ಐತಿಹಾಸಿಕ ಕಾರ್ಯಕ್ರಮ ಇಂದು ಗುರುವಾರ ನಡೆಯಿತು.

ಜೈನಧರ್ಮದಲ್ಲಿ ಕ್ಷುಲ್ಲಕ ದೀಕ್ಷಾಗೆ ವಿಶೇಷ ಮಹತ್ವ. ಈ ದೀಕ್ಷೇ ಪಡೆದವರು ಲೌಕಿಕ ಜೀವನ ಸುಖ ತೊರೆದು ಮೋಕ್ಷ ಸಾಧನೆಗಾಗಿ ವೈರಾಗಿಗಳಾಗಿ ಕಠಿಣ ವೃತ ಕೈಗೊಳ್ಳಬೇಕಾಗುತ್ತದೆ.

ಜಗತ್ತಿನಲ್ಲಿ ಇತರ ಧರ್ಮಗಳಿಗಿಂತ ಆಚಾರ ವಿಚಾರ, ಸಂಸ್ಕ್ರತಿ , ಪರಂಪರೆಗಳಿಂದ ಭಿನ್ನವಾಗಿರುವ ಧರ್ಮ ಜೈನ ಧರ್ಮ. ಅದರಂತೆ ಜೈನ ಧರ್ಮದಲ್ಲಿ ಮೋಕ್ಷ ಸಾಧನೆಗಾಗಿ ಕೈಗೊಳ್ಳುವ ಕ್ಷುಲ್ಲಕ ದೀಕ್ಷಾಕ್ಕೆ ವಿಶೇಷ ಮಹತ್ವವಿದೆ. ಕ್ಷುಲ್ಲಕ ದೀಕ್ಷೆ ಅಂದರೆ ಜೈನ ದಿಗಂಬರ ಸನ್ಯಾಸಿಯಾಗುವ ಮೊದಲ ಹಂತದಲ್ಲಿ ಪಡೆದುಕೊಳ್ಳುವ ದೀಕ್ಷೆ.

ದೀಕ್ಷೆ ಪಡೆದ ನಂತರ ತಮ್ಮ ಲೌಕಿಕ ಜೀವನ ತೊರೆದು ವೈರಾಗಿಗಳಾಗಿ ಇರಬೇಕಾಗುತ್ತೆ. ಅಂತಹ ವಿಶೇಷಗಳಿಗೆ ಕ್ಷುಲ್ಲಕ ದೀಕ್ಷೆಗೆ ಧರ್ಮಸ್ಥಳ ಮಹಾಮಸ್ತಕಾಭಿಷೇಕದ ವೇದಿಕೆ ಇಂದು ಸಾಕ್ಷಿಯಾಯಿತು.

ಧರ್ಮಸ್ಥಳದಲ್ಲಿ ಕುಸಿದು ಬಿತ್ತು ಪಂಚ ಮಹಾವೈಭವದ ಮುಖ್ಯ ವೇದಿಕೆಧರ್ಮಸ್ಥಳದಲ್ಲಿ ಕುಸಿದು ಬಿತ್ತು ಪಂಚ ಮಹಾವೈಭವದ ಮುಖ್ಯ ವೇದಿಕೆ

ಧರ್ಮಸ್ಥಳದ ಅಮೃತಮರ್ಷಿಣಿ ವೇದಿಕೆಯಲ್ಲಿ ಮೂವರು ಪುರುಷರಿಗೆ ಹಾಗೂ‌ ಇಬ್ಬರು ಮಹಿಳೆಯರಿಗೆ ಈ ಕ್ಷುಲ್ಲಕ ದೀಕ್ಷೆಯನ್ನು ಪ್ರಧಾನ ಮಾಡಲಾಯಿತು.

ಶಾಸ್ತ್ರ ಗ್ರಂಥಗಳನ್ನು ನೀಡಿದರು

ಶಾಸ್ತ್ರ ಗ್ರಂಥಗಳನ್ನು ನೀಡಿದರು

ಜೈನ ಮುನಿ ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜಗಳು ದೀಕ್ಷೆ ನೀಡಿದರು. ಈ ಮೊದಲು ಹಲವು ಧಾರ್ಮಿಕ ವಿದಿವಿಧಾನವನ್ನು ನೆರವೇರಿಸಲಾಯಿತು. ನಂತರ ದೀಕ್ಷಾರ್ಥಿಗಳ ಆಭರಣ, ತೊಟ್ಟ ಬಟ್ಟೆಗಳನ್ನು ತೆಗೆದು, ಮುನಿಗಳು ತಮ್ಮ ಕೈಗಳಿಂದಲೇ ದಿಕ್ಷಾರ್ಥಿಗಳ ಕೂದಲನ್ನು ಎಳೆದು ತೆಗೆದು ಕೇಶಲೋಚನವನ್ನು ಮಾಡಿದರು. ಅಲ್ಲದೇ ಇಬ್ಬರು ಮಹಿಳೆಯರಿಗೆ ಬಿಳಿ ಸೀರೆಯನ್ನು ಉಡಿಸಲಾಯಿತು. ಮಂತ್ರ ಪಠಣದೊಂದಿದೆ ಮುನಿಸಂಘದವರು ಕ್ಷುಲ್ಲಕ ದೀಕ್ಷೆ ನೀಡಿದರು. ಇನ್ನೂ ದೀಕ್ಷೆ ಪಡೆದವರಿಗೆ ಮುನಿಗಳು ಸಂಯಮಕ್ಕಾಗಿ ಪಿಂಚಿ. ಶೌಚಕ್ಕಾಗಿ ಕಮಂಡಲ ಶಾಸ್ತ್ರ ಅಭ್ಯಾಸಕ್ಕಾಗಿ ಶಾಸ್ತ್ರ ಗ್ರಂಥಗಳನ್ನು ನೀಡಿದರು.

 ಧರ್ಮಸ್ಥಳದಲ್ಲಿ ಅನಾವರಣಗೊಂಡ ಭರತ ಚಕ್ರವರ್ತಿ ದಿಗ್ವಿಜಯ ಯಾತ್ರೆ ಧರ್ಮಸ್ಥಳದಲ್ಲಿ ಅನಾವರಣಗೊಂಡ ಭರತ ಚಕ್ರವರ್ತಿ ದಿಗ್ವಿಜಯ ಯಾತ್ರೆ

ಆಹಾರ ಪದ್ಧತಿ ಬದಲಾಗುತ್ತದೆ

ಆಹಾರ ಪದ್ಧತಿ ಬದಲಾಗುತ್ತದೆ

ಇನ್ನು ದೀಕ್ಷೆ ಪಡೆದ ನಂತರದ ಆಹಾರ ಪದ್ಧತಿ ಬದಲಾಗುತ್ತದೆ. ಬೆಳಗ್ಗೆ ಸೂರ್ಯೋದಯದ ವೇಳೆಗೆ ದಿನದಲ್ಲಿ ಒಮ್ಮೆಯೇ ಆಹಾರ ಸೇವಿಸುವ ಇವರು, ಸೇವನೆ ವೇಳೆ ಏನಾದರೂ ಕಸ ಕಡ್ಡಿ ಸಿಕ್ಕರೆ ಅಂದಿನ ಅಹಾರವನ್ನೇ ತ್ಯಜಿಸಬೇಕಾಗುತ್ತದೆ.

 ಬಾಹುಬಲಿ ಮಹಾಮಸ್ತಕಾಭಿಷೇಕ:ಧರ್ಮಸ್ಥಳಕ್ಕೆ ಹರಿದುಬರುತ್ತಿದೆ ಭಕ್ತರ ದಂಡು ಬಾಹುಬಲಿ ಮಹಾಮಸ್ತಕಾಭಿಷೇಕ:ಧರ್ಮಸ್ಥಳಕ್ಕೆ ಹರಿದುಬರುತ್ತಿದೆ ಭಕ್ತರ ದಂಡು

 ಮೂಲ ಹೆಸರು ಬದಲಾಯಿಸಲಾಯಿತು

ಮೂಲ ಹೆಸರು ಬದಲಾಯಿಸಲಾಯಿತು

ದೀಕ್ಷೆ ಪಡೆದವರಿಗೆ ಈ ಸಂಧರ್ಭದಲ್ಲಿ ತಮ್ಮ ಮೂಲ ಹೆಸರನ್ನು ಬದಲಾಯಿಸಲಾಯಿತು. ಸತೀಶ್ ಜೀ ಭಯ್ನಾಜಿ ಅವರಿಗೆ ಪರ್ವ ಸಾಗರ ಮಹಾರಾಜ್‌, ಶ್ರೀಪ್ರಭು ಭಯ್ನಾಜಿಗೆ ಪ್ರಭಾಕರ್‌ ಸಾಗರ್‌ ಮಹಾರಾಜ್‌, ಪೂರನ್ ಭಯ್ನಾಜಿಗೆ ಪರಮಾತ್ಮ ಸಾಗರ್‌ ಮಹಾರಾಜ್‌, ಜಿನವಾಣಿ ಮಾತಾಜಿಯವರು ಸಂಯಮ ದೀದಿಗೆ ಅಮರಜ್ಯೋತಿ ಮಾತಾಜಿ ಹಾಗೂ ಸಮತಾದೀದಿಗೆ ಅಮೃತ ಜ್ಯೋತಿ ಮಾತಾಜಿ ಎಂದು ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜ ಅವರು ನಾಮಕರಣ ಮಾಡಿದರು.

 ಬ್ರಹ್ಮಚಾರಿ ದೀಕ್ಷೆ ಪಡೆದಿದ್ದರು

ಬ್ರಹ್ಮಚಾರಿ ದೀಕ್ಷೆ ಪಡೆದಿದ್ದರು

ಇನ್ನು ದೀಕ್ಷೆ ಪಡೆದ ಸತೀಶ್ ಭಯ್ನಾಜಿ ಅವರ ಮೂಲ ಹೆಸರು ಸತೀಶ್ ಕುಮಾರ್‌ ಜೈನ್‌. ಇವರು ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಪುಲರ್ ನವರು. 14 ವರ್ಷ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದು, 9ವರ್ಷಗಳಿಂದ ತ್ಯಾಗ ಜೀವನ ನಡೆಸುತ್ತಿದ್ದಾರೆ. ಶ್ರೀಪ್ರಭು ಭಯ್ನಾಜಿ ಅವರ ಮೂಲ ಹೆಸರು ಶಿವಂಕುಮಾರ್ ಜೈನ್‌. ಉತ್ತರಪ್ರದೇಶದ ಇಟಾವಾದಲ್ಲಿ ಮುನಿಶ್ರೀ 108 ಪ್ರಮುಖ ಸಾಗರ್‌ಜಿ ಮಹಾರಾಜ್‌ ಅವರಿಂದ 2011ರಲ್ಲಿ ಬ್ರಹ್ಮಚಾರಿ ದೀಕ್ಷೆ ಪಡೆದಿದ್ದರು.

ಪೂರನ್ ಭಯ್ನಾಜಿ ಅವರ ಮೂಲಕ ಹೆಸರು ಪೂರಣ್ ಮಲ್ ಜೈನ್‌ ಆಗಿದ್ದು, ಹೈದರಾಬಾದಿನ ಮೂಲದ ಇವರು ಕಾನೂನು ಪದವೀಧರರು, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಹೊಂದಿದ್ದಾರೆ. 2017ರಲ್ಲಿ ಬ್ರಹ್ಮಚಾರಿ ದೀಕ್ಷೆ ಸ್ವೀಕರಿಸಿದ್ದರು. ಸಂಯಮ ದೀದಿ ಅವರು ಬಳ್ಳಾರಿ ಮೂಲದವರು. ಸಮತಾ ದೀದಿ ಅವರು ಬೆಳಗಾವಿಯವರು.

English summary
On the occasion of Dharmasthala Bahubali MahamasthakabhishekaKshullaka Deeksha performed by Jain community in Dharmasthala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X