ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಲ ಸೌಕರ್ಯಗಳ ಕೊರತೆಯ ನಡುವೆಯೂ 624 ಅಂಕ ಪಡೆದು ಸಾಧನೆಗೈದ ಕೃಪಾ

|
Google Oneindia Kannada News

ಮಂಗಳೂರು, ಮೇ 02:ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕೆ.ಆರ್. ಕೃಪಾ ಎಸ್‍ಎಸ್‍ಎಲ್‍ ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.

ಆದರೆ ಈ ಸಾಧನೆ ಮೆರೆದ ವಿದ್ಯಾರ್ಥಿನಿ ಕೃಪಾ ಮೂಲಸೌಕರ್ಯ ವಂಚಿತ ಕುಗ್ರಾಮವೊಂದರ ನಿವಾಸಿ ಎಂಬುದು ವಿಶೇಷ. ಶಾಲೆಗೆ ಈಕೆ ಪ್ರತಿನಿತ್ಯ ನಿತ್ಯ 6 ಕಿ ಮೀ ಕಾಲ್ನಡಿಗೆಯಲ್ಲಿ ಬಂದು ನಂತರ 44 ಕಿ.ಮೀ. ಬಸ್ ಮೂಲಕ ಪ್ರಯಾಣ ಮಾಡಿ ಈ ಸಾಧನೆ ಮಾಡಿದ್ದಾಳೆ.

ಈಕೆಯ ಸಾಧನೆಗೆ ಬೆಳಕು ಅಡ್ಡಿಯಾಗಲಿಲ್ಲ. ಈಕೆ ವಾಸಿಸುವ ಗ್ರಾಮ ಮೂಲಸೌಕರ್ಯ ವಂಚಿತ ಕುಗ್ರಾಮ. ಇಲ್ಲಿ ವಿದ್ಯುತ್ ಸಂಪರ್ಕವಿದೆ, ಆದರೆ ಕರೆಂಟ್ ಇರುವುದೇ ಇಲ್ಲ. ಕರೆಂಟು ಹಾಗೂ ರಸ್ತೆ ಸಮಸ್ಯೆ ಮಧ್ಯೆ ಕೂಡ ಈಕೆ ಗರಿಷ್ಠ ಸಾಧನೆ ಮಾಡಿರುವುದು ಈಕೆಯ ಹೆತ್ತವರಿಗೆ, ಕಲಿಸಿದ ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗೂ ಖುಷಿ ಕೊಟ್ಟಿದೆ.

SSLCಯಲ್ಲಿ 623 ಅಂಕ ಪಡೆದ ಮಾಗಡಿಯ ಚೈತನ್ಯಗೌಡSSLCಯಲ್ಲಿ 623 ಅಂಕ ಪಡೆದ ಮಾಗಡಿಯ ಚೈತನ್ಯಗೌಡ

ಕೃಪಾ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೇನ್ಯ ಗ್ರಾಮದವರು. ಇಲ್ಲಿಯ ಕಣ್ಕಲ್ ಕೃಷಿಕ ರವಿ ಅಮ್ಮಣ್ಣಾಯ ಮತ್ತು ಗೀತಾ ಅಮ್ಮಣ್ಣಾಯ ದಂಪತಿಗಳ ಎರಡನೆ ಪುತ್ರಿ. ಹಲವಾರು ಸಮಸ್ಯೆಗಳನ್ನು ಬೆನ್ನಿಗೆ ಕಟ್ಟಿಕೊಂಡೇ ಈ ಸಾಧನೆ ಮಾಡಿದ ಸಾಧಕಿ.

 ಪಠ್ಯೇತರ ಚಟುವಟಿಕೆಗಳಲ್ಲಿ ಮುಂದು

ಪಠ್ಯೇತರ ಚಟುವಟಿಕೆಗಳಲ್ಲಿ ಮುಂದು

ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಕೆ.ಆರ್.ಕೃಪಾ ಓದು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಎಂದಿಗೂ ಮುಂದಿದ್ದಳು.ಶಾಲೆ ಹಾಗೂ ಮನೆಯ ನಡುವೆ 25 ಕಿಲೊಮೀಟರ್ ಅಂತರವಿದೆ. ಮನೆಯಿಂದ ಶಾಲೆಗೆ ಸಾಗುವ ದಾರಿ 3 ಕಿ. ಮೀ.ಕಚ್ಚಾ ರಸ್ತೆಯಾಗಿದ್ದು, ಮಳೆ ಗಾಳಿ, ಬಿಸಿಲಿಗೆ ಕಾಲ್ನಡಿಗೆಯಲ್ಲೇ ತೆರಳಿ ಬಸ್ ಹಿಡಿದು ಶಾಲೆಗೆ ಹೋಗಬೇಕಾಗುತ್ತದೆ. ಅಂದರೆ 44 ಕಿ.ಮೀ.ಬಸ್ ಪ್ರಯಾಣ ಹಾಗೂ ಆರು ಕಿ‌.ಮೀ.ಕಾಲ್ನಡಿಗೆಯಲ್ಲಿ ಪ್ರಯಾಣಿಸಬೇಕಾಗುತ್ತದೆ.

 SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಟಾದ ನಾಗಾಂಜಲಿ ನಾಯ್ಕ SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಟಾದ ನಾಗಾಂಜಲಿ ನಾಯ್ಕ

 ಕೊರತೆಗಳ ನಡುವೆಯೂ ಸಾಧನೆ

ಕೊರತೆಗಳ ನಡುವೆಯೂ ಸಾಧನೆ

ಮನೆಯಲ್ಲಿ ಯಾವಾಗಲೂ ವಿದ್ಯುತ್ ಇರುತ್ತಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಓದಿಗೆ ಸಮಸ್ಯೆಯಾಗುತಿತ್ತು. ಬೆಳಕು, ದಾರಿ ಕೊರತೆಗಳ ನಡುವೆಯೂ ಓದಿ ಈಕೆ ಎತ್ತರದ ಸಾಧನೆ ಮಾಡಿದ್ದಾಳೆ.

 SSLC ಫಲಿತಾಂಶ:ದಕ್ಷಿಣ ಕನ್ನಡದ ನಾಲ್ವರು ವಿದ್ಯಾರ್ಥಿನಿಯರಿಗೆ 624 ಅಂಕ SSLC ಫಲಿತಾಂಶ:ದಕ್ಷಿಣ ಕನ್ನಡದ ನಾಲ್ವರು ವಿದ್ಯಾರ್ಥಿನಿಯರಿಗೆ 624 ಅಂಕ

 ಹೆತ್ತವರ, ಶಿಕ್ಷಕರ ಸಹಕಾರವಿತ್ತು

ಹೆತ್ತವರ, ಶಿಕ್ಷಕರ ಸಹಕಾರವಿತ್ತು

"ತರಗತಿ ಆರಂಭದ ದಿನಗಳಿಂದಲೇ ಓದಿನ ಕಡೆಗೆ ಗಮನಹರಿಸುತ್ತಿದ್ದೆ. ತರಗತಿಯಲ್ಲಿ ಹೇಳಿಕೊಡುತಿದ್ದ ಪಠ್ಯವನ್ನು ಅವತ್ತೆ ಓದುತಿದ್ದೆ. ನಸುಕಿನಲ್ಲಿ ಬೇಗನೆ ಎದ್ದು ಓದುವುದರಿಂದ ಹಿತವಾಗುತ್ತಿತ್ತು. ಮನೆಯಲ್ಲಿ ತಂದೆ-ತಾಯಿ ಓದಿಗೆ ಪೂರಕ ವಾತಾವರಣ ನಿರ್ಮಿಸಿಕೊಡುತ್ತಿದ್ದರು. ನೋಟ್ಸ್ ಬುಕ್ ಮಾತ್ರ ಅಲ್ಲ, ಟೆಕ್ಸ್ಟ್ ಬುಕ್ ಕೂಡ ಓದುತ್ತಿದ್ದೆ. ಹೆತ್ತವರು, ಶಿಕ್ಷಕರು ಸಂಸ್ಥೆಯವರ ಸಹಕಾರದಿಂದ ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾಳೆ" ಕೃಪಾ.

 ಆಟೋಟಗಳಲ್ಲೂ ಸಾಧನೆ

ಆಟೋಟಗಳಲ್ಲೂ ಸಾಧನೆ

ಈಕೆಯ ಸಹೋದರಿ ಶಿಲ್ಪಾ ಕೆ.ಆರ್. ಕೂಡ ಓದಿನಲ್ಲಿ ಮುಂದಿದ್ದರು. ಎಸ್‍ಎಸ್‍ಎಲ್‍ಸಿಯಲ್ಲಿ 615 ಅಂಕ ಗಳಿಸಿದ್ದರು. ಕೃಪಾ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದಾಳೆ.ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ನಡೆಸುತ್ತಿದ್ದಾಳೆ. ಥ್ರೋಬಾಲ್ ಸೇರಿದಂತೆ ಇನ್ನಿತರ ಆಟೋಟಗಳಲ್ಲೂ ಸಾಧನೆ ತೋರಿದ್ದಾಳೆ.

English summary
KR Krupa of Kenya village of Kadaba taluk scored 624 marks in SSLC exams and stood 2 in state.Here is the inspirational story of Krupa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X