ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.19ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ ಚೆನ್ನಯ ಜೋಡು ಕೆರೆ ಕಂಬಳ

|
Google Oneindia Kannada News

ಮಂಗಳೂರು, ಜನವರಿ 01: ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಈ ಬಾರಿ ಜನವರಿ 19 ರಂದು ನಡೆಯಲಿದೆ. ಈಗಾಗಲೇ ಕಂಬಳ ಕರೆ ಸಹಿತ ಇನ್ನಿತರ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ಜನವರಿ 19ರಂದು ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಕಂಬಳ ಗದ್ದೆಯಲ್ಲಿ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದರ್ಬೆ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆದಿದೆ.

ತುಳುನಾಡಿನ ಮೊದಲ ಕಂಬಳದಲ್ಲಿ ಅಂಬರೀಶ್ ಗೆ ಶ್ರದ್ಧಾಂಜಲಿತುಳುನಾಡಿನ ಮೊದಲ ಕಂಬಳದಲ್ಲಿ ಅಂಬರೀಶ್ ಗೆ ಶ್ರದ್ಧಾಂಜಲಿ

ಈ ಬಾರಿ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಉದ್ಯಮಿ ಎನ್‌.ಮುತ್ತಪ್ಪ ರೈ ಸಾರಥ್ಯದಲ್ಲಿ 26ನೇ ವರ್ಷದ ಕೋಟಿ-ಚೆನ್ನಯ ಕಂಬಳ ನಡೆಯುತ್ತಿದೆ. ಕಂಬಳ ಉತ್ಸವಕ್ಕೆ ಮುಖ್ಯಮಂತ್ರಿ ಸಹಿತ ಸಚಿವರು, ಶಾಸಕರು, ಎಂಎಲ್ಸಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

Koti Chanaiya Jodu kere Kambala will held on January 19

 ಅಸಂಖ್ಯಾತ ಕಂಬಳಪ್ರಿಯರನ್ನು ಅಗಲಿದ ಕರಾವಳಿಯ ರಾಕೇಟ್ ಮೋಡ್ ಅಸಂಖ್ಯಾತ ಕಂಬಳಪ್ರಿಯರನ್ನು ಅಗಲಿದ ಕರಾವಳಿಯ ರಾಕೇಟ್ ಮೋಡ್

ಈಗಾಗಲೇ ಸ್ಪೀಕರ್ ಪ್ರತಾಪ್‌ಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಸಚಿವ ಯು.ಟಿ.ಖಾದರ್ ಅವರನ್ನು ಕಂಬಳದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಕಂಬಳದಲ್ಲಿ ಆಕರ್ಷಣೆ ಕೇಂದ್ರ ಬಿಂದುವಾಗಿ ಸಿನಿಮಾ ನಟರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

English summary
Very Famous Putturu Koti Chanaiya Jodu kere Kambala will held on January 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X