ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1 ತಿಂಗಳಿನಲ್ಲಿ ಹುಚ್ಚರಂತೆ ಬೀದಿಯಲ್ಲಿ ಮೆರವಣಿಗೆ ಮಾಡಿಸುವೆ: ಕೊರಗಜ್ಜ ದೈವನುಡಿ

|
Google Oneindia Kannada News

ಮಂಗಳೂರು, ಜ 9: ತುಳುನಾಡಿನಲ್ಲಿ ಕೊರಗಜ್ಜನ ಮಹಿಮೆ ಅಪಾರ, ಅಪಾರ ಭಕ್ತಸ್ತೋಮ ಆ ದೈವವನ್ನು ನಂಬಿಕೊಂಡು ಬರುತ್ತಿದೆ. ಕೊರಗಜ್ಜನನ್ನು ಅಣಕಿಸಿರುವ ಹಲವಾರು ನಿದರ್ಶನಗಳು ಮಂಗಳೂರು, ಉಡುಪಿ ಭಾಗದಲ್ಲಿ ಆಗಾಗ ವರದಿಯಾಗುತ್ತಲೇ ಇರುತ್ತವೆ.

ಕೊರಗಜ್ಜನ ದೈವಸ್ಥಾನವನ್ನು ಅಪವಿತ್ರಗೊಳಿಸುವ ದುಷ್ಕರ್ಮಿಗಳು ದೈವಗುಡಿಗೆ ಬಂದು ತಪ್ಪೊಪ್ಪಿಗೆ ನೀಡಿದ ಉದಾಹರಣೆಗಳು ಒಂದಲ್ಲ..ಎರಡಲ್ಲಾ, ಬೇಕಾದಷ್ಟು ಸಿಗುತ್ತವೆ. ಧಾರ್ಮಿಕ ಭಾವನೆಗಳನ್ನು ಕೆಣಕುವ ಘಟನೆಗಳಿಂದ ಶಾಂತಿ ಕದಡುವ ಕೆಲಸ ಮತಾಂಧರಿಂದ ನಡೆಯುತ್ತಲೇ ಬರುತ್ತಿದ್ದರೂ ಇದಕ್ಕೆ ಬ್ರೇಕ್ ಬೀಳುತ್ತಿಲ್ಲ.

 ದಕ್ಷಿಣ ಕನ್ನಡ: ಕೊರಗಜ್ಜನ ವೇಷ ಧರಿಸಿ ವರನ ಹುಚ್ಚಾಟ; ಕಠಿಣ ಕ್ರಮಕ್ಕೆ ಆಗ್ರಹ ದಕ್ಷಿಣ ಕನ್ನಡ: ಕೊರಗಜ್ಜನ ವೇಷ ಧರಿಸಿ ವರನ ಹುಚ್ಚಾಟ; ಕಠಿಣ ಕ್ರಮಕ್ಕೆ ಆಗ್ರಹ

ಇತ್ತೀಚೆಗೆ ಮುಸ್ಲಿಂ ಸಮುದಾಯದ ವರನೊಬ್ಬ ಕೊರಗಜ್ಜ ದೈವದ ವೇಷ ಧರಿಸಿ, ಅಸಭ್ಯವಾಗಿ ವರ್ತಿಸಿದ್ದ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಕೂಡಾ.

ಘಟನೆಯಿಂದ ಬೇಸರಗೊಂಡಿದ್ದ ಕೊರಗಜ್ಜನ ಭಕ್ತರು ದೈವದ ಬಳಿಯೇ ದೂರು ನೀಡಿದ್ದರು. ಈಗ, ದೈವದ ಕೋಲದ ಸಂದರ್ಭದಲ್ಲಿ ದೈವನುಡಿ ಬಂದಿದ್ದು, ನಾನೇ ಆ ಯುವಕನನ್ನು ನೋಡಿಕೊಳ್ಳುತ್ತೇನೆ ಎನ್ನುವ ಅಭಯ ಬಂದಿದೆ.

ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿ ಹುಚ್ಚನಂತೆ ವರ್ತಿಸಿದ್ದ

ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿ ಹುಚ್ಚನಂತೆ ವರ್ತಿಸಿದ್ದ

ಕಳೆದ ಗುರುವಾರದಂದು (ಜ 6) ಬಂಟ್ವಾಳದ ಕೊಳ್ನಾಡು ಗ್ರಾಮದ ಅಜೀಝ್ ಎಂಬುವವರ ಪುತ್ರಿಯ ಮಗಳ ವಿವಾಹ ಕೇರಳ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಜೊತೆ ನಡೆದಿತ್ತು. ಆ ವೇಳೆ, ವರ ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿ, ಹುಚ್ಚನಂತೆ ವರ್ತಿಸಿದ್ದ. ಆ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಬೇಸತ್ತ ಕೊರಗಜ್ಜನ ಭಕ್ತರು, ನೀನೇ ನೋಡಿಕೋ ಎಂದು ಕೋಲದ (ದೈವದ ಆಟ) ವೇಳೆ ಪ್ರಾರ್ಥಿಸಿದ್ದರು.

ಕೊರಗಜ್ಜನ ವೇಷ ಹಾಕಿಸಿ ಹಾಡು, ನೃತ್ಯ ಮಾಡುತ್ತಾ ಬಂದು ಅವಮಾನ

ಕೊರಗಜ್ಜನ ವೇಷ ಹಾಕಿಸಿ ಹಾಡು, ನೃತ್ಯ ಮಾಡುತ್ತಾ ಬಂದು ಅವಮಾನ

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಸಾಲೆತ್ತೂರಿನಲ್ಲಿ ಮದುವೆಯ ಸಂಭ್ರಮದ ನೆಪದಲ್ಲಿ ಮುಸ್ಲಿಂ ಧರ್ಮದ ಯುವಕರು ಮದುಮಗಳ ಮನೆಗೆ ನಡುರಾತ್ರಿ ಬರುವ ವೇಳೆ ವರನಿಗೆ ಕೊರಗಜ್ಜನ ವೇಷ ಹಾಕಿಸಿ ಹಾಡು, ನೃತ್ಯ ಮಾಡುತ್ತಾ ಬಂದು ಅವಮಾನ ಮಾಡಿದ್ದರು. ಕಾರಣಿಕಗೆ ಹೆಸರಾಗಿರುವ ಕೊರಗಜ್ಜನ ಕೋಲದ ವೇಳೆ ಭಕ್ತರು ಪ್ರಾರ್ಥನೆ ಮಾಡಿದಾಗ, ನಾನು ಆ ಯುವಕನನ್ನು ನೋಡಿಕೊಳ್ಳುತ್ತೇನೆ ಎನ್ನುವ ಅಭಯವನ್ನು ದೈವ ನೀಡಿದೆ.

ದೈವಕ್ಕೆ ಭಕ್ತರು ದೂರು ನೀಡಿ, ಶಿಕ್ಷಿಸುವಂತೆ ಪ್ರಾರ್ಥಿಸಿದ್ದರು

ದೈವಕ್ಕೆ ಭಕ್ತರು ದೂರು ನೀಡಿ, ಶಿಕ್ಷಿಸುವಂತೆ ಪ್ರಾರ್ಥಿಸಿದ್ದರು

ಜಿಲ್ಲೆಯ ಮೇಲಿನಮೊಗರು ಅತ್ತಾವರ ಪರಿಸರದಲ್ಲಿರುವ ಕೊರಗಜ್ಜನ ದೈವ ಕಟ್ಟೆಯಲ್ಲಿ ಶುಕ್ರವಾರ (ಜ 7) ಕೊರಗಜ್ಜನ ಕೋಲ ನಡೆದಿತ್ತು. ಆ ವೇಳೆ, ದೈವಕ್ಕೆ ಭಕ್ತರು ದೂರು ನೀಡಿ, ಶಿಕ್ಷಿಸುವಂತೆ ಪ್ರಾರ್ಥಿಸಿದ್ದರು. ನನ್ನನ್ನು ಆ ಯುವಕರು ಯಾವ ರೀತಿ ಹುಚ್ಚನಂತೆ ಚಿತ್ರಿಸಿ ಅವಮಾನಿಸಿದರೋ, ಅವರನ್ನೆಲ್ಲಾ ಒಂದು ತಿಂಗಳೊಳಗೆ ಹುಚ್ಚರಂತೆಯೇ ಮಾಡಿ ಬೀದಿ ಮೆರವಣಿಗೆ ಮಾಡಿಸುವೆ. ನಾನಿರೋದು ಹೌದಾದಲ್ಲಿ ಈ ಕೆಲಸ ನಡೆಸುವೆ ಎನ್ನುವ ದೈವನುಡಿ ಬಂದಿದೆ ಎಂದು ಹೇಳಲಾಗುತ್ತಿದೆ.

ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳಿಂದ ಭಾರೀ ಆಕ್ರೋಶ

ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳಿಂದ ಭಾರೀ ಆಕ್ರೋಶ

ವರ ಕೊರಗಜ್ಜನ ವೇಷ ಭೂಷಣ ಧರಿಸಿ, ತಲೆಗೆ ಅಡಿಕೆ ಹಾಳೆ ಟೋಪಿ ಹಾಕಿಕೊಂಡು, ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ವಧುವಿನ ಮನೆಗೆ ಬಂದಿದ್ದ. ಈ ಘಟನೆಗೆ ತೀವ್ರ ವಿರೋಧ ವ್ಯಕವಾಗಿ, ದೂರೂ ದಾಖಲಾಗಿತ್ತು. ಹಿಂದೂಗಳ ಆರಾಧ್ಯ ದೈವ ಕೊರಗಜ್ಜನನ್ನು ಮತ್ತು ಕೊರಗ ಸಮುದಾಯವನ್ನು ಅಮಾನಿಸಿರುವ ಕೃತ್ಯ ಅಮಾನವೀಯವಾಗಿದ್ದು ಎಂದು ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮುಸ್ಲಿಂ ಸಮುದಾಯದ ಕೆಲವು ಮುಖಂಡರು ಕೊರಗಜ್ಜನಿಗೆ ಅವಮಾನಿಸಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು.

ನನ್ನಿಂದ ತಪ್ಪಾಗಿದೆ, ಯಾರನ್ನೂ ನೋವಿಸುವ ಉದ್ದೇಶವಿಲ್ಲ

ನನ್ನಿಂದ ತಪ್ಪಾಗಿದೆ, ಯಾರನ್ನೂ ನೋವಿಸುವ ಉದ್ದೇಶವಿಲ್ಲ

ನನ್ನಿಂದ ತಪ್ಪಾಗಿದೆ, ನನಗೆ ಎಲ್ಲಾ ಧರ್ಮದ ಬಗ್ಗೆ ಗೌರವ ಇದೆ ಮತ್ತು ಯಾರ ಮನಸ್ಸನ್ನೂ ನೋವಿಸುವ ಉದ್ದೇಶವಿಲ್ಲ. ಸ್ನೇಹಿತರು ಬಣ್ಣ ಬಳಿದಿದ್ದರು, ಇದು ಕೇವಲ ಮನೋರಂಜನಾ ಉದ್ದೇಶಕ್ಕೆ. ಹಿಂದೂ ಧರ್ಮಕ್ಕೆ ಮತ್ತು ಕೊರಗ ಸಮಾಜಕ್ಕೆ ನೋವಾಗಿದೆ ಎನ್ನುವುದು ನನಗೆ ಅರಿವಿದೆ, ಅದಕ್ಕಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ವಿಡಿಯೋ ಮೂಲಕ ಈ ಯುವಕ ಕೇಳಿಕೊಂಡಿದ್ದಾನೆ.

English summary
Koragajja Insulting Incident In Vitla In Dakshina Kannada District, Latest Update. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X