ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಚ್ಚಿ-ಮಂಗಳೂರು ಗ್ಯಾಸ್ ಪೈಪ್‌ಲೈನ್ ಆಗಸ್ಟ್‌ನಲ್ಲಿ ಪೂರ್ಣ

|
Google Oneindia Kannada News

ಮಂಗಳೂರು, ಜುಲೈ 23 : ಕೊಚ್ಚಿ- ಮಂಗಳೂರು ನಡುವಿನ ಗ್ಯಾಸ್ ಪೈಪ್ ಲೈನ್ ಯೋಜನೆ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ. 2,915 ಕೋಟಿ ರೂ.ಗಳ ಬೃಹತ್ ಮೊತ್ತದ ಯೋಜನೆ ಇದಾಗಿದೆ.

Recommended Video

India vs China : ಪಾಕಿಸ್ತಾನವನ್ನು ಬಿಟ್ಟು ಚೀನಾವನ್ನು ಟಾರ್ಗೆಟ್ ಮಾಡಿದ ಭಾರತ | Oneindia Kannada

ಮಂಗಳೂರಿಗೆ ರಿಗ್ಯಾಸಿಫೈಡ್ ಲಿಕ್ವಿಡ್ ನ್ಯಾಚುರಲ್ ಗ್ಯಾಸ್ (ಆರ್‌ಎಲ್‌ಎನ್‌ಜಿ) ಪೂರೈಕೆ ಮಾಡುವ ಯೋಜನೆಯನ್ನು ಜಿಎಐಎಲ್ ಆರಂಭಿಸಿತ್ತು. 2009ರಲ್ಲಿ ಆರಂಭವಾದ ಯೋಜನೆ ಈಗ ಪೂರ್ಣಗೊಳ್ಳುತ್ತಿದೆ.

ದಾರಿ ಮಧ್ಯೆ ಗಾಡಿ ನಿಲ್ಲಿಸಿ ಸಿಲಿಂಡರ್ ನಿಂದ ಗ್ಯಾಸ್ ಕದಿಯುತ್ತಿದ್ದ ಸಿಬ್ಬಂದಿದಾರಿ ಮಧ್ಯೆ ಗಾಡಿ ನಿಲ್ಲಿಸಿ ಸಿಲಿಂಡರ್ ನಿಂದ ಗ್ಯಾಸ್ ಕದಿಯುತ್ತಿದ್ದ ಸಿಬ್ಬಂದಿ

ಗ್ಯಾಸ್ ಪೈಪ್‌ ಲೈನ್ ಸುರಕ್ಷತೆ ಮತ್ತು ಭೂ ಸ್ವಾಧೀನದ ವಿಚಾರದ ಕಾರಣಕ್ಕೆ ಯೋಜನೆ ವಿಳಂಬವಾಯಿತು. 444 ಕಿ. ಮೀ. ಉದ್ದದ ಈ ಯೋಜನೆಯ ವೆಚ್ಚ ಈಗ 5,751 ಕೋಟಿಗೆ ಏರಿಕೆಯಾಗಿದೆ.

ಸುಲಭವಾಗಿ ಪೈಪ್ ಕಾಂಪೋಸ್ಟ್ ಘಟಕ ಅಳವಡಿಕೆ ಹೇಗೆ?ಸುಲಭವಾಗಿ ಪೈಪ್ ಕಾಂಪೋಸ್ಟ್ ಘಟಕ ಅಳವಡಿಕೆ ಹೇಗೆ?

Kochi-Mangalore Gas Pipeline Project To Complete In August

ಕೊನೆಯ ಹಂತದ ಇಂಜಿನಿಯರಿಂಗ್ ಕೆಲಸಗಳು ನಡೆಯುತ್ತಿದ್ದು, ಆಗಸ್ಟ್‌ನಲ್ಲಿ ಯೋಜನೆ ಪೂರ್ಣವಾಗಲಿದೆ. ಕಾಸರಗೋಡಿನ ಚಂದ್ರಗಿರಿ ನದಿಯಯಲ್ಲಿ ಪೈಪ್ ಅಳವಡಿಕೆ ಮಾಡುವುದು ಸವಾಲಿನ ಕೆಲಸವಾಗಿತ್ತು.

ವಿಶಾಖಪಟ್ಟಣಂನಲ್ಲಿ ಗ್ಯಾಸ್ ಸೋರಿಕೆ; 2 ಸಾವು ವಿಶಾಖಪಟ್ಟಣಂನಲ್ಲಿ ಗ್ಯಾಸ್ ಸೋರಿಕೆ; 2 ಸಾವು

1.5 ಕಿ. ಮೀ. ಮಾರ್ಗದ ಕೆಲವು ಭಾಗದ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಅದು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಪೈಪ್‌ಲೈನ್ ಮಾರ್ಗವನ್ನು ಎಂದು ಉದ್ಘಾಟನೆ ಮಾಡಲಾಗುತ್ತದೆ ಎಂದು ಇನ್ನೂ ದಿನಾಂಕ ನಿಗದಿ ಮಾಡಿಲ್ಲ.

ಚಂದ್ರಗಿರಿ ನದಿಯಲ್ಲಿ 1.5 ಕಿ. ಮೀ. ಉದ್ದ ಪೈಪ್ ಲೈನ್ ಇದೆ. ನದಿಯೊಳಗೆ ಕೆಲವು ಕಡೆ 8 ಮೀಟರ್ ಆಳದಲ್ಲಿ ಪೈಪ್‌ಗಳನ್ನು ಹಾಕಲಾಗಿದೆ. ನದಿ ಮತ್ತು ಸಮುದ್ರದ ಕಾರಣದಿಂದಾಗಿಯೇ ಯೋಜನೆಯ ಕೆಲಸಗಳು ಸ್ವಲ್ಪ ವಿಳಂಬವಾಗಿದೆ.

2013ರಲ್ಲಿ ಕೊಚ್ಚಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಯೋಜನೆಗೆ ಚಾಲನೆ ನೀಡಲಾಗಿದೆ. 2016ರಿಂದ ಅದಾನಿ ಗ್ರೂಪ್ ಗ್ಯಾಸ್ ಪೂರೈಕೆ ಮಾಡುತ್ತಿದೆ. ಈ ಪೈಪ್ ಲೈನ್ ಮೂಲಕ ಪ್ರಸ್ತುತ ಪ್ರತಿದಿನ 3.8 ಮಿಲಿಯನ್ ಕ್ಯೂಬಿಕ್ ಗ್ಯಾಸ್‌ಗಳನ್ನು ಕೈಗಾರಿಕೆ ಮತ್ತು ಮನೆಗಳಿಗೆ ನೀಡಲಾಗುತ್ತಿದೆ.

English summary
Kochi-Mangalore gas pipeline project supplying RLNG is set to be commissioned in August. GAIL taken up the 444 km long gas pipeline project in 2009.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X