ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಳುನಾಡಿನ ಹೊಸ ವರ್ಷ ಬಿಸು ಪರ್ಬದ ಬಗ್ಗೆ ತಿಳಿಯಿರಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 14 : ಸೌರಮಾನ ಪದ್ಧತಿಯ ವರ್ಷಾಚರಣೆ ಮಾಡುವ ತುಳುನಾಡಿನಲ್ಲಿ ಹೊಸ ವರ್ಷದ ಆಗಮನವಾಗಿದ್ದು, ಏ.14ರಂದು 'ಬಿಸು ಪರ್ಬದ' ಮೂಲಕ ನೂತನ ವರ್ಷವನ್ನು ಸ್ವಾಗತಿಸಲಾಗಿದೆ.

ಅನಾದಿ ಕಾಲದಿಂದಲೂ ಬಿಸು ಪರ್ಬವನ್ನು ಹೊಸ ವರ್ಷವೆಂದು ಆಚರಿಸಿಕೊಂಡು ಬರುತ್ತಿರುವ ತುಳುನಾಡಿನಲ್ಲಿ ಆಧುನಿಕ ಆಕರ್ಷಣೆಗಳ ನಡುವೆ ಹಬ್ಬ ಮತ್ತು ಸಂಸ್ಕೃತಿ ಬದಲಾಗಿದ್ದರೂ, ಈಗಲೂ ಗ್ರಾಮೀಣ ಪ್ರದೇಶದಲ್ಲಿ ಬಿಸು ಸೊಬಗು ಉಳಿದುಕೊಂಡಿದ್ದು, ಬಿಸು ಕಣಿ ನೋಡುವ, ಹೊಸ ಬಟ್ಟೆ ಉಟ್ಟು ಸಂಭ್ರಮಿಸುವ ಗೌಜಿ ಕಳೆ ಗಟ್ಟುತ್ತಿದೆ. [ತುಳುನಾಡ್ದ ಜಾತ್ರೆಯಲ್ಲಿ ಮತ್ತೆ ರಾಜ್ಯ ವಿಭಜನೆಯ ಕೂಗು]

bisu parba

ತುಳುನಾಡಿನಲ್ಲಿ ಆದಿಯಿಂದಲೂ ಬಿಸು ಪರ್ಬವೇ ಯುಗಾದಿಯಾಗಿದ್ದು, ಕೇರಳ ಮತ್ತು ತಮಿಳುನಾಡಿನ ಮಾದರಿಯಲ್ಲೇ ಈ ವಿಷು ಹಬ್ಬವನ್ನು ಆಚರಿಸಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಚಾಂದ್ರಮಾನ ಯುಗಾದಿಗೆ ಅಬ್ಬರದ ಪ್ರಚಾರದ ಕೊರತೆಯಿಂದಾಗಿ ಸದ್ದಿಲದೆ, ಮೌನವಾಗಿ ಹಾದು ಹೋಗುತ್ತದೆ. [ತುಳುನಾಡು ಪ್ರತ್ಯೇಕ ರಾಜ್ಯವಾದರೆ ತಪ್ಪೇನು: 10 ಪ್ರಶ್ನೆಗೆ 10 ಉತ್ತರ]

'ತುಳುವರಿಗೆ ಬಿಸು ಎಂದರೆ ಕೇವಲ ಹೊಸ ವರ್ಷ ಮಾತ್ರವಲ್ಲ, ಇಲ್ಲಿನ ಕೃಷಿ ಸಂಸ್ಕೃತಿಗೂ ಬಿಸು ಹಬ್ಬಕ್ಕೂ ಸಾಮೀಪ್ಯವಿದೆ. ಕೃಷಿಯ ರೂಪದಲ್ಲೇ ಹೊಸ ವರ್ಷವನ್ನು ಸ್ವಾಗತಿಸುವ ತುಳುವರು, ಬೇಸಾಯ ಸರಣಿಯ ಮೊದಲ ಕೆಲಸವನ್ನು ಬಿಸು ದಿನದಂದೇ ಮಾಡುತ್ತಾರೆ' ಎಂದು ಕೃಷಿಕ ಹೊನ್ನಪ್ಪ ಗೌಡ ಮುದಲಾಜೆ ಹೇಳುತ್ತಾರೆ. [ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನದ ಗುರಿ]

'ಬೇಸಾಯ ಕಮ್ಮಿಯಾಗಿ ಅಡಕೆ ತೋಟ ವ್ಯಾಪಿಸಿತು. ಇತ್ತೀಚಿಗೆ ರಬ್ಬರ್ ಬೆಲೆ ಅಬ್ಬರಿಸಿತು. ವ್ಯವಸಾಯ ಸಂಸ್ಕೃತಿ ಅಳಿಯುತ್ತಾ ವಾಣಿಜ್ಯ ಬೆಳೆಗಳು ವಿಜೃಂಭಿಸಲಾರಂಭಿಸಿದ ಕಾರಣ ಬಿಸು ಹಬ್ಬದ ಮಹತ್ವವು ಕಡಿಮೆಯಾಗಲು ಕಾರಣವಾಯಿತು' ಎಂಬುದು ಮತ್ತೊಬ್ಬ ಕೃಷಿಕ ಜತ್ತಪ್ಪ ರೈ ಅವರ ಅಭಿಪ್ರಾಯ.

ಕಾಲೇಜು ವಿದ್ಯಾರ್ಥಿ ಶಮಿತ್ ಹೇಳುವಂತೆ, 'ಬಿಸು ತುಳುವರ ಹೊಸ ವರ್ಷ ಅಂತಾರೆ. ಆದರೆ, ಈ ಹಬ್ಬಕ್ಕೆ ಪ್ರಚಾರದ ಕೊರತೆ ಇದೆ. ಬ್ರಾಂಡ್ ಡೆವಲಪ್ ಆಗಿಲ್ಲ. ಹಳೆಯ ಮಾದರಿಯಲ್ಲಷ್ಟೆ ಉಳಿದಿದೆ. ಹೀಗಾದರೆ ಹಬ್ಬದ ಕಲೆ ಹೆಚ್ಚು ಸಮಯ ಉಳಿಯಲಾರದು'.

ಇಂದು ಬಿಸು ಕಣಿ : ಕೇರಳ ಮತ್ತು ತಮಿಳುನಾಡಿನಲ್ಲಿ ಬಿಸು ಹಬ್ಬದಂದು ಬಿಸು ಕಣಿ ನೋಡುವ ಪದ್ಧತಿಯಿದೆ. ದೇವರ ಕೋಣೆಯಲ್ಲಿ ನಾನಾ ಬಗೆಯ ಫಲ ವಸ್ತು, ಹೊಸ ವಸ್ತ್ರಗಳನ್ನು ಓರಣವಾಗಿ ಜೋಡಿಸಿಟ್ಟು, ಅದರ ಮಧ್ಯದಲ್ಲೊಂದು ಕನ್ನಡಿ ಇಡಲಾಗುವುದು.

ಎದುರು ದೀಪ ಉರಿಸಲಾಗುವುದು. ಮುಂಜಾನೆ ಎದ್ದು ಸ್ನಾನ ಮಾಡಿ ಬಂದು ಈ ಬೀಸು ಕಣಿಯನ್ನು ನೋಡಿ ಶಿರಬಾಗಬೇಕು. ಕನ್ನಡಿಯಲ್ಲಿ ಮುಖ ನೋಡಿ ಹೊಸ ವರ್ಷವನ್ನು ಸ್ವಾಗತಿಸಬೇಕು ಎಂಬುದು ಇಲ್ಲಿನ ಆಶಯ. ಬಿಸು ಕಣಿಯ ಬಳಿಕ ಮಧ್ಯಾಹ್ನ ಭರ್ಜರಿ ಪಾಯಸದೂಟ ಹಬ್ಬದ ಸ್ಪೆಷಲ್. ಬೇಸಾಯಗಾರರು ಬೀಸು ದಿನ ಮುಹೂರ್ತ ಮಾಡುವ ಕ್ರಮ ಇದೆ. ಹಬ್ಬದ ದಿನ ಎತ್ತುಗಳನ್ನು ಗದ್ದೆಗೆ ಇಳಿಸಿ ಶಾಸ್ತ್ರ ಮಾಡಲಾಗುತ್ತದೆ. ನಂತರ ಏನಿಲ್ ಬೇಸಾಯಕ್ಕೆ ಪೂರ್ವಭಾವಿಯಾಗಿ ಕೈ ಬಿತ್ತ್ ಹಾಕಲಾಗುತ್ತದೆ.

English summary
Bisu Parba new year celebration festival in Tulu Nadu region in Karnataka. Festival is known as Bisu or Bisu Parba.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X