ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಬೆಕ್ಕಿನ ಮರಿಗಳನ್ನು ಫ್ಲ್ಯಾಟ್‌ನಿಂದ ಹೊರಗೆಸೆದ ಮಹಿಳೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 21; ಆಗಷ್ಟೇ ಹುಟ್ಟಿದ ಮುದ್ದಾದ 5 ಬೆಕ್ಕಿನ ಮರಿಗಳನ್ನು ಮನೆಯ ಮಹಡಿಯಿಂದ ಕೆಳಗೆ ಬಿಸಾಡಿದ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅತ್ತಾವರದ ಫ್ಲ್ಯಾಟ್‌ವೊಂದರಲ್ಲಿ ಮಹಿಳೆ ಬೆಕ್ಕಿನ ಮರಿಗಳನ್ನು ಅದರ ತಾಯಿ ಜೊತೆ ಮನೆಯಿಂದ ಹೊರಗಟ್ಟಿದ್ದಾರೆ.

ಆಗಷ್ಟೇ ಹುಟ್ಟಿದ ಬೆಕ್ಕಿನ ಮರಿಗಳು ಭಾರಿ ಮಳೆಗೆ ನೋವಿನಿಂದ ನರಳಾಡಿವೆ. ಶಕ್ತಿನಗರದ ಆನಿಮೇಲ್ ಕೇರ್ ಟ್ರಸ್ಟ್‌ನ ಕಾರ್ಯಕರ್ತರು ಬೆಕ್ಕಿನ ಮರಿಗಳ ರಕ್ಷಣೆ ಮಾಡಿದ್ದಾರೆ. ಮಳೆಗೆ ನರಳಾಡುತ್ತಿದ್ದ ಮರಿಗಳಿಗೆ ಬೆಚ್ಚನೆಯ ಆಶ್ರಯ ನೀಡಿದ್ದಾರೆ.

 ರಾಜಭವನದಲ್ಲಿ ಬೆಕ್ಕು ಹಿಡಿಯಲು ಬರೋಬ್ಬರಿ 1 ಲಕ್ಷಕ್ಕೆ ಗುತ್ತಿಗೆ ರಾಜಭವನದಲ್ಲಿ ಬೆಕ್ಕು ಹಿಡಿಯಲು ಬರೋಬ್ಬರಿ 1 ಲಕ್ಷಕ್ಕೆ ಗುತ್ತಿಗೆ

ಮಹಿಳೆಯು ಹಲ್ಲೆ ಮಾಡಿದ್ದರಿಂದ ಓಡಿ ಹೋಗಿದ್ದ ತಾಯಿ ಬೆಕ್ಕನ್ನು ಕೂಡಾ ರಕ್ಷಣೆ ಮಾಡಲಾಗಿದ್ದು, ತಾಯಿ ಮತ್ತು ಮರಿ ಬೆಕ್ಕುಗಳು ಆರೋಗ್ಯವಾಗಿದ್ದು, ಬೆಚ್ಚಗಿನ ಆಶ್ರಯ ಸಿಕ್ಕಿದೆ.

 ರಾಜಭವನದಲ್ಲಿ ಬೆಕ್ಕು ಹಿಡಿಯಲು ಬರೋಬ್ಬರಿ 1 ಲಕ್ಷಕ್ಕೆ ಗುತ್ತಿಗೆ ರಾಜಭವನದಲ್ಲಿ ಬೆಕ್ಕು ಹಿಡಿಯಲು ಬರೋಬ್ಬರಿ 1 ಲಕ್ಷಕ್ಕೆ ಗುತ್ತಿಗೆ

Kitten Thrown From Independent House At Attavar

ಮಹಿಳೆಯ ಕ್ರೂರತೆಯನ್ನು ಹಲವು ಮಂದಿ ಕಣ್ಣಾರೆ ಕಂಡಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಾಯಿ ಬೆಕ್ಕು ತನ್ನ ಮರಿಗಳನ್ನು ಸುರಕ್ಷಿತವಾಗಿಡಲು ಸ್ಥಳ ಹುಡುಕುವ ಸಂದರ್ಭದಲ್ಲಿ ಈ ರೀತಿಯ ದೌರ್ಜನ್ಯ ಕ್ಷಮಿಸಲು ಅಸಾಧ್ಯವಾಗಿದೆ‌‌.

16ನೇ ಅಂತಸ್ತಿನ ಬಾಲ್ಕನಿಯಿಂದ ಬೆಕ್ಕು ಎಸೆದು ಜೈಲು ಸೇರಿದ 16ನೇ ಅಂತಸ್ತಿನ ಬಾಲ್ಕನಿಯಿಂದ ಬೆಕ್ಕು ಎಸೆದು ಜೈಲು ಸೇರಿದ

ಆಗ ತಾನೆ ಹುಟ್ಟಿದ ಮರಿಗಳನ್ನು ಮಾನವೀಯ ದೃಷ್ಟಿಯಲ್ಲಿಯೂ ನೋಡದೇ ಮಳೆಯಲ್ಲಿ ಹೊರಗೆ ಹಾಕಿದ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

English summary
5 new born kittens were apparently thrown out of a terrace of an independent house near Attavar, Mangaluru by a woman and the mother cat was beaten.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X