ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ. 21ರಿಂದ ಕಾಸರಗೋಡು-ಮಂಗಳೂರು ನಡುವೆ ಬಸ್ ಸಂಚಾರ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 14 : ಕಾಸರಗೋಡು- ಮಂಗಳೂರು ನಡುವೆ ಬಸ್ ಸಂಚಾರ ಆರಂಭಿಸಲು ಕೇರಳ ರಸ್ತೆ ಸಾರಿಗೆ ನಿಗಮ ತೀರ್ಮಾನಿಸಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತವಾಗಿದೆ.

ಕೇರಳ ಸೆಪ್ಟೆಂಬರ್ 21ರಿಂದ ಕಾಸರಗೋಡು-ಮಂಗಳೂರು ನಡುವೆ ಬಸ್ ಸೇವೆ ಆರಂಭಿಸಲಿದೆ. ಇದರಿಂದಾಗಿ ಉಭಯ ರಾಜ್ಯಗಳ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.

 ಮಂಗಳೂರು ಗಲಭೆ; 21 ಮಂದಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಗಳೂರು ಗಲಭೆ; 21 ಮಂದಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು

ಕೆಎಸ್ಆರ್‌ಟಿಸಿ ಮಂಗಳೂರು-ಕಾಸರಗೋಡು ನಡುವೆ ಬಸ್ ಸೇವೆ ಆರಂಭಿಸುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಸೆ. 21ರಂದು ಬಸ್ ಸಂಚಾರ ಆರಂಭವಾದರೆ ಕೇವಲ 40 ಪ್ರಯಾಣಿಕರು ಮಾತ್ರ ಸಂಚಾರ ನಡೆಸಲು ಅವಕಾಶ ನೀಡಲಾಗುತ್ತದೆ.

ಬೆಂಗಳೂರು-ಮಂಗಳೂರು ರೈಲು ಸೇವೆ ಪುನರಾರಂಭಬೆಂಗಳೂರು-ಮಂಗಳೂರು ರೈಲು ಸೇವೆ ಪುನರಾರಂಭ

Kerala To Start Bus Service To Mangaluru From September 21

ಮಾರ್ಗಗಳು : ಕೇರಳ ರಸ್ತೆ ಸಾರಿಗೆ ನಿಗಮ ಮೊದಲ ಹಂತದಲ್ಲಿ ಕಾಸರಗೋಡು-ಮಂಗಳೂರು, ಕಾಸರಗೋಡು-ಪಂಜಿಕಲ್ಲು ಮಾರ್ಗದಲ್ಲಿ ಮಾತ್ರ ಬಸ್‌ಗಳನ್ನು ಓಡಿಸಲಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಈ ಬಸ್ ಸಂಚಾರ ನಡೆಸಲಿವೆ.

ಕಾಸರಗೋಡು-ದಕ್ಷಿಣ ಕನ್ನಡ ಗಡಿ ತೆರವಿಗೆ ಹೈಕೋರ್ಟ್ ಆದೇಶ ಕಾಸರಗೋಡು-ದಕ್ಷಿಣ ಕನ್ನಡ ಗಡಿ ತೆರವಿಗೆ ಹೈಕೋರ್ಟ್ ಆದೇಶ

ಅಂತರರಾಜ್ಯಗಳ ಸಂಚಾರಕ್ಕೆ ಕೇಂದ್ರ ಗೃಹ ಇಲಾಖೆಯೇ ಒಪ್ಪಿಗೆ ನೀಡಿದೆ. ಆದ್ದರಿಂದ, ಕರ್ನಾಟಕ ಸಹ ಮಂಗಳೂರು-ಕಾಸರಗೋಡು ನಡುವೆ ಕೆಎಸ್ಆರ್‌ಟಿಸಿ ಬಸ್‌ ಸಂಚಾರವನ್ನು ಆರಂಭಿಸುವ ಸಾಧ್ಯತೆ ಇದೆ.

ಕೋವಿಡ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದಾಗ ಕೇರಳ ಮತ್ತು ಕರ್ನಾಟಕ ಗಡಿಯನ್ನು ಮುಚ್ಚಲಾಗಿತ್ತು. ಈ ವಿವಾದ ಸುಪ್ರೀಂಕೋರ್ಟ್‌ ತನಕ ಹೋಗಿತ್ತು. ಅಂತಿಮವಾಗಿ ಅಂಬ್ಯುಲೆನ್ಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಭಾನುವಾರ ದಕ್ಷಿಣ ಕನ್ನಡದಲ್ಲಿ 404 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 17,363ಕ್ಕೆ ಏರಿಕೆಯಾಗಿದೆ.

English summary
Kerala road transport corporation decided to start Kasaragod-Mangaluru bus service from September 21, 2020. Bus service between two states stopped after lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X