ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಪ್ರಯತ್ನ ಫಲ ನೀಡಲ್ಲ ಎಂದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್

|
Google Oneindia Kannada News

ಮಂಗಳೂರು, ಫೆಬ್ರವರಿ 03:ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಬಿಜೆಪಿ ಪ್ರಯತ್ನ ಫಲ ನೀಡುವುದಿಲ್ಲ ಎಂದು ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹೇಳಿದರು.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವಿರೋಧ ಪಕ್ಷದ ಯಾವುದೇ ಪ್ರಯತ್ನಗಳು ಫಲ ನೀಡಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಭದ್ರವಾಗಿದೆ. ದೇಶದಲ್ಲಿ ಮೋದಿ, ಅಮಿತ್ ಷಾ ಪ್ರಜಾಪ್ರಭುತ್ವದ‌ ಕಗ್ಗೊಲೆ‌ ಮಾಡ್ತಿದ್ದಾರೆ. ಬಿಜೆಪಿ ನಾಯಕರು ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ನಾಶಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಶಾಸಕರ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದರು.

ಫೆ.4 ರಂದು ಹಿಂದೂ ಮಹಾಸಭಾದ ಕೃತ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಫೆ.4 ರಂದು ಹಿಂದೂ ಮಹಾಸಭಾದ ಕೃತ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದು,‌ ಉತ್ತರವನ್ನೂ ಪಡೆಯಲಾಗಿದೆ. ಯಡಿಯೂರಪ್ಪ ಸರ್ಕಾರವಿದ್ದಾಗಲೂ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದ್ದರು. ಈಗಲೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು.

KC Venu Gopal slams BJP in Managluru

ಅಧಿಕಾರವಿಲ್ಲದೇ ಬಿಜೆಪಿಯವರಿಗೆ ಡಿಪ್ರೆಷನ್ ಆಗಿದೆ. ಅದಕ್ಕಾಗಿ ಚೀಪ್ ಸ್ಟೆಪ್ ಗಳನ್ನು ಬಿಜೆಪಿ ಫಾಲೋ ಮಾಡುತ್ತಿದೆ ಎಂದು ಕಿಡಿಕಾರಿದರು.

 ಆಡಿಕೊಳ್ಳೋರ್ ಎದುರು ಎಡವಿ ಬಿದ್ದಂಗಾಯ್ತು ಕಾಂಗ್ರೆಸ್ ಕತೆ! ಆಡಿಕೊಳ್ಳೋರ್ ಎದುರು ಎಡವಿ ಬಿದ್ದಂಗಾಯ್ತು ಕಾಂಗ್ರೆಸ್ ಕತೆ!

ಈ ಸಂದರ್ಭದಲ್ಲಿ ಶಾಸಕ ಗಣೇಶ್ - ಆನಂದ್ ಸಿಂಗ್ ಹೊಡೆದಾಟ ವಿಚಾರದ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ , ಗಣೇಶ್ ಪ್ರಕರಣದ ಬಗ್ಗೆ ಪಕ್ಷದ ಸಮಿತಿ ವಿಚಾರಣೆ ಮಾಡ್ತಾ ಇದೆ . ಡಿಸಿಎಂ ಪರಮೇಶ್ವರ್ ಸೋಮವಾರ ಸಭೆ ನಡೆಸಲಿದ್ದಾರೆ . ಗಣೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ . ಪರಮೇಶ್ವರ್ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

English summary
Speaking with media persons in Managluru Karnataka incharge Congress senior leader Veenu Gopal slammed BJP on operation Kamala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X