ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಮಹಾನಗರ ಪಾಲಿಕೆಯಲ್ಲಿನ್ನು 'ಕವಿತಾ' ದರ್ಬಾರ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 9 : ಮಂಗಳೂರು ಮಹಾನಗರ ಪಾಲಿಕೆಯ 19 ನೇ ಅವಧಿಯ ನೂತನ ಮೇಯರ್ ಆಗಿ ಪಚ್ಚನಾಡಿ ವಾರ್ಡ್ ಸದಸ್ಯೆ ಕವಿತಾ ಸನಿಲ್ ಆಯ್ಕೆಯಾಗಿದ್ದಾರೆ.

ದೇರೆಬೈಲ್ ಉತ್ತರ ವಾರ್ಡ್ ಸದಸ್ಯ ರಜನೀಶ್ ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 38 ಮತಗಳನ್ನು ಪಡೆದ ಕವಿತಾ ನೂತನ ಮೇಯರ್ ಆಗಿ ಆಯ್ಕೆಗೊಂಡರು. ಈ ಸಲ ಮೇಯರ್ ಸ್ಥಾನ ಮಹಿಳೆಗೆ ಮೀಸಲಾಗಿತ್ತು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಜಯಂತಿ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಿತು.['ಮಹಿಳೆ ಸುಸೂತ್ರವಾಗಿ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಬಲ್ಲಳು']

Kavita Sanil is the new mayor of Mangalore city corporation

ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕರಾದ ಜೆ.ಆರ್. ಲೋಬೋ, ಮೊಯ್ದಿನ್ ಬಾವಾ ಉಪಸ್ಥಿತರಿದ್ದು, ಕವಿತಾ ಸನಿಲ್ ಪರ ಮತ ಚಲಾಯಿಸಿದರು.[ಮಂಗಳೂರು ಜೈಲಿನೊಳಗೆ ಗಾಂಜಾ, ಮೊಬೈಲ್ ಪೂರೈಕೆ ನಿಂತಿಲ್ಲ]

ಒನ್ ಇಂಡಿಯಾ ಜೊತೆ ಖುಷಿ ಹಂಚಿಕೊಂಡ ಕವಿತಾ, ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ, ಮಂಗಳೂರನ್ನ ಸ್ಮಾರ್ಟ್ ಸಿಟಿಯನ್ನಾಗಿ ಮಾಡುವ ಗುರಿಯಿದೆ ಎಂದಿದ್ದಾರೆ. ಉಪಮೇಯರ್ ರಜನೀಶ್ ಮಾತನಾಡಿ, ಮೇಯರ್ ಕೆಲಸಕ್ಕೆ ಸಾಥ್ ನೀಡುತ್ತೇನೆ, ಅಭಿವೃದ್ಧಿಯೇ ನಮ್ಮ ಗುರಿ' ಎಂದರು.

14 ಮಹಿಳಾ ಕಾರ್ಪೊರೇಟರ್ ಗಳ ಪೈಕಿ ಯಾವುದೇ ಸ್ಥಾನಮಾನ ಸಿಗದ ಬಿಲ್ಲವ ಸಮಾಜದ ಮಹಿಳೆಗೆ ಈ ಬಾರಿಯ ಮೇಯರ್ ಪಟ್ಟ ನೀಡುವಂತೆ ಆಡಳಿತರೂಢ ಸದಸ್ಯರು ಪಟ್ಟುಹಿಡಿದಿದ್ದರು. ಹೀಗಾಗಿ ಬಿಲ್ಲವ ಸಮಾಜದ ಮಹಿಳೆ ಕವಿತಾ ಸನಿಲ್ ಹಾಗೂ ಪ್ರತಿಭಾ ಕುಳಾಯಿ ಮಧ್ಯೆ ತೀವ್ರ ಪೈಪೋಟಿ ಇತ್ತು. ಕೊನೆಗೆ ಕವಿತಾ ಸನಿಲ್ ರನ್ನು ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಸ್ಥಾನಕ್ಕೆ ಅಂತಿಮಗೊಳಿಸಲಾಗಿತ್ತು.

English summary
Kavita Sanil has appointed as new mayor of Mangalore city corporation. Rajaneesh is the deputy mayor. The 19th mayor of Mangalore city corporation kavita told, development is her prime agenda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X