ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ್ತೂರಿ ರಂಗನ್ ವರದಿ; ಮಂಗಳೂರಿನ ಈ ಹಳ್ಳಿಗಳಿಗೆ ಡೇಂಜರ್!

|
Google Oneindia Kannada News

ಬೆಂಗಳೂರು, ಜುಲೈ19: ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನ ಮಾಡಿದರೆ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ. ಮಂಗಳೂರಿನ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ ಎಂಬುದರ ವಿವರಣೆ ಇಲ್ಲಿದೆ.

ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಿಬಿಡುತ್ತದೆ.

ಕಸ್ತೂರಿ ರಂಗನ್ ವರದಿ: ಹಾಸನದ ಯಾವ ಹಳ್ಳಿಗಳಿಗೆ ಅಪಾಯ!ಕಸ್ತೂರಿ ರಂಗನ್ ವರದಿ: ಹಾಸನದ ಯಾವ ಹಳ್ಳಿಗಳಿಗೆ ಅಪಾಯ!

ಕೇಂದ್ರ ಸರ್ಕಾರಕ್ಕೆ ಗಾಡ್ಗಿಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗಿಳ್ ವರದಿಯಲ್ಲಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು. ಅದರಂತೆ ಗುಜರಾತ್ ತಮಿಳುನಾಡಿ, ಮಹಾರಾಷ್ಟ್ರ, ಗೋವಾ, ಕರ್ನಾಟಕ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20668 ಚದರ ಕಿ.ಮೀ ಒಳಗೊಂಡಿದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಾಗುತ್ತದೆ.

Kasturirangan report on Western Ghats Eco-sensitive Area; Know Affected Villages List in Mangaluru District

ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಹಳ್ಳಿಗಳಿಗೆ ಅಪಾಯ
ಬೆಳ್ತಂಗಡಿಯ ನರಾವಿ, ಮಳವಂತಿಗೆ, ಕುತ್ಲೂರು, ಸುಲ್ಕೇರಿಮೊಗ್ರು, ಶಿರ್‍ಲಾಲು, ನವರಾ, ಸವನಾಲು, ಚಾರ್‍ಮಡಿ, ಸುಲ್ಕೇರಿ, ನವೂರು, ನೆರಿಯಾ, ನದ, ಪುಡಿವೆಟ್ಟು, ಶಿಶಿಲಾ, ಕಲಂಜಾ, ಶಿಬಾಜೆ, ರೆಖ್ಯಾ ಹಳ್ಳಿಗಳು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರಲಿದೆ.

Kasturirangan report on Western Ghats Eco-sensitive Area; Know Affected Villages List in Mangaluru District

ಮಂಗಳೂರಿನ ಪುತ್ತೂರು ತಾಲೂಕಿನ ಹಳ್ಳಿಗಳು ಡೇಂಜರ್
ಕೌಕರ್‍ಡಿ, ಗೋಲಿದಟ್ಟು, ಶಿರಾಡಿ, ಅಲಂತಾಲಯ, ಶಿರಿಬಾಗಿಲು, ಬಲ್ಯಾ, ಕೊಬಾರು, ಬಿಳಿನೆಲೆ, ದೊಲ್ಪಾಡಿ ಗ್ರಾಮಗಳು ಕಸ್ತೂರಿ ರಂಗನ್ ವರದಿಯಲ್ಲಿವೆ.

Kasturirangan report on Western Ghats Eco-sensitive Area; Know Affected Villages List in Mangaluru District

ಮಂಗಳೂರಿನ ಸುಳ್ಯ ತಾಲೂಕಿನ ಹಳ್ಳಿಗಳಿವು
ಬಲ್ಪ, ಏನೆಕಲ್ಲು, ಸುಬ್ರಮಣ್ಯ, ಸುಬ್ರಮಣ್ಯ, ನಲ್ಕೂರು, ಕುತ್ಕುಂಜ, ಇನಕೀಡು, ದೇವಚಲ್ಲ, ಹರಿಹರಪಲ್ಲತಡ್ಕ, ಬಲಗೋಡು, ಮಾದಪ್ಪಾಡಿ, ಉಬಾರಡ್ಕ ಮಿಟ್ಟುರ್, ಕಲ್ಮಕರು, ಅರನ್ತೋಡು, ಅಲೆಟ್ಟಿ, ಸಂಪಜೆ, ತೊಡಿಕನ ಎಂಬ ಹಳ್ಳಿಗಳು ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನಗೊಳಿಸಿದರೆ ಈ ಹಳ್ಳಿಗರ ಅಭಿವೃದ್ಧಿಗೆ ಹಿನ್ನಡೆ ಆಗುವ ಅಪಾಯವಿದೆ.

Recommended Video

ಅಗ್ನಿವೀರ್ ಪ್ರಾಜೆಕ್ಟ್ ನಿಂದಾಗಿ ಭಾರತ ರಕ್ಷಣಾ ಪಡೆಗೆ ಏನು ಲಾಭ | *Defence | OneIndia Kannada

English summary
The Kasturirangan committee report has proposed 37% of the total area of Western Ghats to be declared as Eco-Sensitive Area (ESA). Here is the list villages in Hassan district which will affected once this report implemented.Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X