ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಸರಗೋಡು: 'ಮೆಸೇಜ್‌ ಟು ಕೇರಳ' ಗ್ರೂಪಲ್ಲಿ ಐಎಸ್ ಪರ ಸಂದೇಶ

By ಮಂಗಳೂರು ಪ್ರತಿನಿದಿ
|
Google Oneindia Kannada News

ಕಾಸರಗೋಡು/ಮಂಗಳೂರು, ಮೇ 08 : ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನ (ಐಎಸ್) ಸಿದ್ಧಾಂತಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರ ಪಡಿಸಲು ಯತ್ನಿಸುತ್ತಿದ್ದ ಶಂಕಿತ ಪ್ರಕರಣ ಕಾಸರಗೋಡಿನಲ್ಲಿ ಬೆಳಕಿಗೆ ಬಂದಿದೆ.

ಉಗ್ರಗಾಮಿ ಸಂಘಟನೆ ಐಸಿಸ್ ಪರ ಕಾಸರಗೋಡಿನ 'ಮೆಸೇಜ್‌ ಟು ಕೇರಳ' ಎಂಬ ಗ್ರೂಪ್‌ನಲ್ಲಿ ಅನುಮತಿ ಇಲ್ಲದೆ ಸೇರ್ಪಡೆಗೊಳ್ಳಲ್ಪಟ್ಟ ಅಣಂಗೂರು ನಿವಾಸಿ ಹಾರಿಸ್ ಮಸ್ತಾನ್ ಅವರಿಗೆ ವಾಟ್ಸಪ್ ಮೂಲಕ ಮಲಯಾಳಂ ಭಾಷೆಯಲ್ಲಿ ಸಂದೇಶವೊಂದು ಲಭಿಸಿದೆ. ಇದರಿಂದ ಆತಂಕಗೊಂಡ ಮಸ್ತಾನ್ ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

Kasargod resident receives pro-IS message on WhatsApp

ಈ ಪ್ರಕರಣದ ಕುರಿತು ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ ಐಎ) ಮಾಹಿತಿ ನೀಡಿದ್ದಾರೆ. 'ಮೆಸೇಜ್‌ ಟು ಕೇರಳ' ಎಂಬ ವಾಟ್ಸಪ್ ಗುಂಪಿಗೆ ಹ್ಯಾರಿಸ್ ಅವರನ್ನು ಯಾರೋ ಸೇರ್ಪಡೆಗೊಳಿಸಿದ್ದರು. ಈ ಗುಂಪಿನಲ್ಲಿ ಜಿಹಾದ್ ಅನ್ನು ಹೊಗಳಿ ಸಂದೇಶಗಳು ಬರುತ್ತಿದ್ದವು.

ಗುಂಪಿನ ಅಡ್ಮಿನ್ ಬಳಿ ಗುಂಪಿನ ಬಗ್ಗೆ ವಿವರಗಳನ್ನು ಕೇಳಿದಾಗ, ಮಲಯಾಳದಲ್ಲಿ ಧ್ವನಿ ಸಂದೇಶಗಳನ್ನು ಕಳುಹಿಸಿದ ಎಂದು ದೂರಿನಲ್ಲಿ ಹ್ಯಾರಿಸ್ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಆರಂಭ ಮಾಡಿದ್ದು, ಸಂದೇಶವು ಅಫ್ಘಾನಿಸ್ತಾನದ ನಂಬರೊಂದರಿಂದ ಬಂದದ್ದಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಹಾರಿಸ್ ಗೆ ಲಭಿಸಿದ ವಾಯ್ಸ್ ಮೆಸೇಜನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಹಾಗೂ ರಾಜ್ಯ ಸ್ಪೆಷಲ್ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ನಂತರ ಇದನ್ನು ಪರಿಶೀಲಿಸಿದ ಎನ್ ಐಎ ತಂಡ ಕಾಸರಗೋಡಿಗೆ ಆಗಮಿಸಿ ಆ ಬಗ್ಗೆ ಸೂಕ್ತ ತನಿಖೆ ಆರಂಭಿಸಿದೆ ಎಂದು ತಿಳಿದು ಬಂದಿದೆ.

English summary
The National Investigation Agency (NIA) has found pro-ISIS messages being circulated on WhatsApp and begun a probe on Sunday, May 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X