ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವಕನ ನಿಫಾ ವರದಿ; ಗಲಿಬಿಲಿಯಾಗಿದ್ದ ಜಿಲ್ಲಾಡಳಿತ ನಿರಾಳ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 15; ನಿಫಾ ವೈರಸ್ ಸೋಂಕು ಭೀತಿಯಿಂದ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರದ ಯುವಕನ ವರದಿ ಜಿಲ್ಲಾಡಳಿತದ ಕೈ ಸೇರಿದೆ. ಪುಣೆಯ ಲ್ಯಾಬ್‌ಗೆ ಯುವಕನ ನಿಫಾ ವೈರಸ್ ಪತ್ತೆಗಾಗಿ ಮಾದರಿ ಕಳುಹಿಸಿದ್ದು, ಯುವಕನ ವರದಿ ನೆಗೆಟಿವ್ ಆಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ.

ನಿಫಾ ಸೋಂಕು ತಗುಲಿರುವ ಶಂಕೆ ಮೇರೆಗೆ ಸ್ವ-ಇಚ್ಛೆಯಿಂದ ಯುವಕ ನಿಫಾ ಪರೀಕ್ಷೆಗೊಳಗಾಗಿದ್ದ. ಇದೀಗ ಯುವಕನ ವರದಿಯು ಆರೋಗ್ಯ ಇಲಾಖೆಯ ಕೈ ಸೇರಿದ್ದು, ವರದಿಯು 'ನೆಗೆಟಿವ್' ಬಂದಿರೋದಾಗಿ ದಕ್ಷಿಣ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕಾರವಾರದ ಯುವಕನಿಗೆ ನಿಫಾ ವೈರಸ್ ಇಲ್ಲ-ಇರೋದು ಹೆದರಿಕೆ ಅಷ್ಟೇ-ದ.ಕ ಜಿಲ್ಲಾಧಿಕಾರಿ ಸ್ಪಷ್ಟನೆ ಕಾರವಾರದ ಯುವಕನಿಗೆ ನಿಫಾ ವೈರಸ್ ಇಲ್ಲ-ಇರೋದು ಹೆದರಿಕೆ ಅಷ್ಟೇ-ದ.ಕ ಜಿಲ್ಲಾಧಿಕಾರಿ ಸ್ಪಷ್ಟನೆ

ಈ ಮೂಲಕ ಕೇರಳ ರಾಜ್ಯದಿಂದ ಕರ್ನಾಟಕಕ್ಕೂ ನಿಫಾ ವೈರಸ್ ಕಾಲಿಟ್ಟಿದೆಯೇ? ಅನ್ನೋ ಆತಂಕ ಕೊಂಚ ದೂರವಾದಂತಾಗಿದೆ. ಕಾರವಾರ ಮೂಲದ ಯುವಕ ಗೋವಾದಲ್ಲಿ ಮೈಕ್ರೋಬಯೋಲಾಜಿಸ್ಟ್ ಆಗಿದ್ದು, ಎರಡು ದಿನಗಳ ಹಿಂದಷ್ಟೇ ಮಂಗಳೂರಿಗೆ ಆಗಮಿಸಿ ನಿಫಾ ವೈರಸ್ ಸೋಂಕಿನ ಪತ್ತೆಗಾಗಿ ನಡೆಸುವ ಪರೀಕ್ಷೆಗೆ ಒಳಪಟ್ಟಿದ್ದರು.

ಗೋವಾದಿಂದ ಆಗಮಿಸಿದ ಮಂಗಳೂರಿನ ವ್ಯಕ್ತಿಗೆ ಅಂಟಿದೆಯಾ ನಿಫಾ ವೈರಸ್? ಗೋವಾದಿಂದ ಆಗಮಿಸಿದ ಮಂಗಳೂರಿನ ವ್ಯಕ್ತಿಗೆ ಅಂಟಿದೆಯಾ ನಿಫಾ ವೈರಸ್?

Karwar Youth Nipah Virus Report Negative

ಯುವಕನಲ್ಲಿ ನಿಫಾ ವೈರಸ್ ಸೋಂಕಿನ ಲಕ್ಷಣಗಳಿದ್ದು, ಕೂಡಲೇ ತಪಾಸಣೆ ಬಳಿಕ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾದಲ್ಲಿರಿಸಲಾಗಿತ್ತು‌. ಪರೀಕ್ಷಾ ಮಾದರಿಯನ್ನು ಪುಣೆಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದ್ದು, ಇದೀಗ ವರದಿಯು ಆರೋಗ್ಯ ಇಲಾಖೆಯ ಕೈ ಸೇರಿದ್ದು ನಿಫಾ ಸೋಂಕಿನ ಭೀತಿ ಇಲ್ಲ ಅನ್ನೋದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಕೊರೊನಾ- ನಿಫಾ ಆತಂಕ: ಅಕ್ಟೋಬರ್ ಅಂತ್ಯದವರೆಗೆ ಮೈಸೂರು- ಕೇರಳ ಸಂಚಾರ ನಿರ್ಬಂಧಕೊರೊನಾ- ನಿಫಾ ಆತಂಕ: ಅಕ್ಟೋಬರ್ ಅಂತ್ಯದವರೆಗೆ ಮೈಸೂರು- ಕೇರಳ ಸಂಚಾರ ನಿರ್ಬಂಧ

ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾದ ಬಳಿಕ ದಕ್ಷಿಣ ಕನ್ನಡ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿತ್ತು. ಆದರೆ ಇದರ ನಡುವೆ ನಿಫಾ ವೈರಸ್‌ನ ಆಂತಕ ಇದೆಯೆಂದು ಯುವಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಕಾರವಾರ ಮೂಲದ ಈ ಯುವಕ ಗೋವಾದಲ್ಲಿ ನಿಫಾ ವೈರಸ್ ಟೆಸ್ಟಿಂಗ್ ಮಾಡುವ ಕಿಟ್ ತಯಾರಿಕಾ ಲ್ಯಾಬ್‌ನಲ್ಲಿ ಕೆಲಸ ಮಾಡ್ತಿದ್ದ. ಅಲ್ಲಿಂದ ರಜೆಯಲ್ಲಿ ಕಾರವಾರಕ್ಕೆ ಬಂದ ಮೇಲೆ ಆತನಿಗೆ ಜ್ವರ ಕಾಣಿಸಿಕೊಂಡಿದೆ.

ಹೀಗಾಗಿ ನಿಫಾ ವೈರಸ್ ಇರಬಹುದು ಎಂದು ಕಾರವಾರ ಆಸ್ಪತ್ರೆಗೆ ಹೋಗಿ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಬಂದಿದ್ದಾನೆ. ಆ ಬಳಿಕ ಅಲ್ಲಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಬಂದಿದ್ದು ಆತನ ಸ್ಯಾಂಪಲ್‌ನ್ನು ಸಂಗ್ರಹ ಮಾಡಿ, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಪುಣೆಯ ಲ್ಯಾಬ್‌ಗೆ ಕಳುಹಿಸಿತ್ತು.

ಯುವಕ ಕರ್ತವ್ಯ ನಿರ್ವಹಿಸುವ ಗೋವಾದ ಲ್ಯಾಬ್‌ನಲ್ಲಿ ನಿಫಾ ವೈರಸ್ ಟೆಸ್ಟ್ ಕಿಟ್ ತಯಾರಿಸುವ ಸಂದರ್ಭ ಅದರಲ್ಲಿ ಆ್ಯಕ್ಟೀವ್ ಕಂಟೆಟ್‌ಗಳನ್ನ ಹಾಕಲಾಗುತ್ತೆ. ಹೀಗಾಗಿ ಇಕ್ವಿಪ್‌ಮೆಂಟ್ ಕಿಟ್ ತಯಾರಿಸುವವರು ಪಿಪಿಇ ಕಿಟ್ ಧರಿಸುವುದು ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗಿರುತ್ತೆ.

ಆದರೂ ಸಹ ಯುವಕ ಆತಂಕ ವ್ಯಕ್ತಪಡಿಸಿರುವುದರಿಂದ ಯುವಕನನ್ನು ಈಗಾಗಲೇ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಆದರೆ ಯುವಕನಿಗೆ ಯಾವುದೇ ನಿಫಾ ಲಕ್ಷಣಗಳಿಲ್ಲ, ಆತ ಸ್ಟೇಬಲ್ ಆಗಿದ್ದಾನೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಸದ್ಯ ಯುವಕನ ನಿಫಾ ಟೆಸ್ಟ್ ರಿಪೋರ್ಟ್ ಬಂದಿದ್ದು, ಹೀಗಾಗಿ ಆರೋಗ್ಯ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ.

ಯುವಕ ಗಣಪತಿ ಹಬ್ಬದ ದಿನ ಗೋವಾದಿಂದ ಕಾರವಾರಕ್ಕೆ ಬೈಕ್‌ನಲ್ಲಿ ಬಂದಿದ್ದ‌‌. ಈ ವೇಳೆ ಮಳೆಗೆ ನೆನೆದಿದ್ದ. ಆ ದಿನ ರಾತ್ರಿ ಯುವಕನಿಗೆ ಜ್ವರ, ಶೀತ ಕಾಣಿಸಿಕೊಂಡಿದ್ದು, ನಿಫಾ ಗಾಬರಿಯಿಂದ ಯುವಕ ಕಾರವಾರದ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಬಳಿಕ ಅಂಬುಲೆನ್ಸ್‌ನಲ್ಲಿ ಮಂಗಳೂರಿನ ವೆನ್ಲಾಕ್ ಸರ್ಕಾರಿ ಅಸ್ಪತ್ರೆಗೆ ಕರೆತರಲಾಗಿತ್ತು.

English summary
Karwar youth Nipah virus report negative. Youth who admitted to Mangaluru Wenlock hospital and sample sent to Pune for Nipah testing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X