ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈ ಇಲ್ಲದೆ ಕಾಲಿನಲ್ಲಿ ಪರೀಕ್ಷೆ ಬರೆದ ಬಂಟ್ವಾಳ ಹುಡುಗ

|
Google Oneindia Kannada News

ಬಂಟ್ವಾಳ, ಜೂನ್ 26: ಕೈ ಇಲ್ಲದೆ, ಕಾಲು ಇಲ್ಲದೆ ಇದ್ದರೂ ತಮ್ಮ ಛಲದಿಂದ ದೊಡ್ಡ ದೊಡ್ಡ ಸಾಧನೆ ಮಾಡಿ ತೋರಿಸಿರುವ ಅನೇಕ ಉದಾಹರಣೆಗಳು ಇವೆ. ಇದೀಗ ಇದೇ ರೀತಿ ಬಂಟ್ವಾಳದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಅನೇಕರು ಸ್ಫೂರ್ತಿ ನೀಡುತ್ತಿದ್ದಾನೆ.

Recommended Video

ಬೆಂಗಳೂರಲ್ಲಿ ನದಿ ಇದ್ದಿದ್ದು ಗೊತ್ತಾಗಿದ್ದೇ ನೆನ್ನೆ| Vrushabavathi River | Bengaluru | Oneindia Kannada

ರಾಜ್ಯದಲ್ಲಿ ನಿನ್ನೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾಗಿದೆ. ಬಂಟ್ವಾಳ ತಾಲ್ಲೂಕಿನ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ಕಾಲಿಲ್ಲದ ಒಬ್ಬ ಹುಡುಗ ಪರೀಕ್ಷೆ ಬರೆದಿದ್ದು, ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ಆ ಹುಡುಗನಿಗೆ ಶಹಬಾಶ್ ಎಂದಿದ್ದಾರೆ.

ಮೈಸೂರಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು SSLC ಪರೀಕ್ಷೆಗೆ ಗೈರುಮೈಸೂರಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು SSLC ಪರೀಕ್ಷೆಗೆ ಗೈರು

ಕೌಶಿಕ್ ಎಂಬ ವಿದ್ಯಾರ್ಥಿ ಬಂಟ್ವಾಳ ತಾಲ್ಲೂಕಿನ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ತನ್ನ ಕಾಲಿನ ಮೂಲಕ ಪರೀಕ್ಷೆ ಬರೆದಿದ್ದಾನೆ. ಯಾರ ಸಹಾಯವನ್ನು ಪಡೆಯದೇ ತಾನೇ ಪರೀಕ್ಷೆ ಬರೆದಿದ್ದಾನೆ. ಈ ಬಗ್ಗೆ ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Bhatkal Student Wrote SSLC Exam With His Legs

''ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳ ಮೂಲಕವೇ ಉತ್ತರ ಬರೆದ‌ ಈ ಪೋರ ನಿಗೆ ನನ್ನ ಹೃದಯಪೂರ್ವ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ‌ ಸಾರ್ಥಕ‌ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ.'' ಎಂದು ಸುರೇಶ್ ಕುಮಾರ್ ಶುಭ ಹಾರೈಸಿದ್ದಾರೆ.

English summary
SSLC exam karnataka 2020: Kowshik a Bantwal student wrote SSLC exam with his legs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X