ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಫೆ. 9 ರಿಂದ 'ಬರ್ಡ್ ಫೆಸ್ಟಿವಲ್'

|
Google Oneindia Kannada News

ಮಂಗಳೂರು, ಫೆಬ್ರವರಿ 6: ಅಂತರಾಷ್ಟ್ರೀಯ ಸರ್ಫಿಂಗ್ ಉತ್ಸವ, ವೈನ್ ಉತ್ಸವ ಸೇರಿದಂತೆ ಇನ್ನಿತರ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಉತ್ಸವಗಳಿಗೆ ವೇದಿಕೆಯಾಗಿದ್ದ ಮಂಗಳೂರು ಈಗ ವಿನೂತನ 'ಬರ್ಡ್ ಫೆಸ್ಟಿವಲ್'ಗೆ ಸಾಕ್ಷಿಯಾಗಲಿದೆ. ರಾಜ್ಯದ 4ನೇ ಹಕ್ಕಿಗಳ ಹಬ್ಬವನ್ನು ಮಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಇದೇ ಬರುವ ಫೆ. 9 ರಿಂದ 11ರ ವರೆಗೆ ನಡೆಯಲಿದೆ.

ರಾಜ್ಯ ಅರಣ್ಯ ಇಲಾಖೆ ಹಾಗು ಕರ್ನಾಟಕ ಇಕೋ ಟೂರಿಸಂ ಡೆವೆಲಪ್ ಮೆಂಟ್ ಬೋರ್ಡ್ ನೇತೃತ್ವದಲ್ಲಿ ಈ ಬರ್ಡ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ರಂಗನತಿಟ್ಟು, ದಾಂಡೇಲಿ ಹಾಗೂ ಬಳ್ಳಾರಿಯಲ್ಲಿ ಈಗಾಗಲೇ ಈ ಹಕ್ಕಿಗಳ ಹಬ್ಬ ಯಶಸ್ವಿಯಾಗಿದ್ದು ಮೊದಲ ಬಾರಿಗೆ ಈ ಬರ್ಡ್ ಫೆಸ್ಟಿವಲ್ ಮಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ.

ಈ ಹಕ್ಕಿಗಳ ಹಬ್ಬದ ವಿಷೇಶವೆಂದರೆ ಕಡಲ ಬಾನಾಡಿಗಳನ್ನು ಅತೀ ಸಮೀಪದಿಂದ ಕಣ್ತುಂಬಿಕೊಳ್ಳುವ ಹಾಗೂ ಅದರ ಛಾಯಾಗ್ರಹಣಕ್ಕೂ ಅವಕಾಶ ದೊರೆಯಲಿದೆ. ಹಕ್ಕಿಗಳ ಕುರಿತು ಆಸಕ್ತರಿಗೆ ಹಾಗು ಅಧ್ಯಯನಶೀಲರಿಗೆ ಪ್ರಯೋಜನವಾಗಲಿ ಹಾಗೂ ಸ್ಥಳೀಯರಲ್ಲೂ ಪರಿಸರದ ಹಕ್ಕಿಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗುತ್ತಿದೆ.

Karnataka Bird festival 2018 starts from Feb 9 in Mangaluru

ಈ ಉತ್ಸವದಲ್ಲಿ ಪಾಲ್ಗೊಳ್ಳುವವರನ್ನು ಮಂಗಳೂರಿನ ಕಡಲ ಕಿನಾರೆಯಿಂದ ಸಮುದ್ರದಲ್ಲಿ 10 ರಿಂದ 15 ನಾಟಿಕಲ್ ಮೈಲ್ಸ್ ದೂರದವರೆಗೆ ದೋಣಿಯಲ್ಲಿ ಕರದೊಯ್ದು ಹಕ್ಕಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತಿರುವುದು ಈ ಉತ್ಸವದ ವಿಶೇಷತೆ.

ಈ ಉತ್ಸವದಲ್ಲಿ ಮಣಿಪಾಲ ಹಾಗು ಮಂಗಳೂರು ವ್ಯಾಪ್ತಿಯ ಬರ್ಡ್ ಫೋಟೋಗ್ರಾಫರ್ಸ್ ಹಾಗೂ ಆಸಕ್ತರು ಪಾಲ್ಗೊಳ್ಳಲಿದ್ದಾರೆ. ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಗುರುಪುರ ನದಿಯ ಪಿಲಿಕುಳ ರಿವರ್ ಲಾಡ್ಜ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

Karnataka Bird festival 2018 starts from Feb 9 in Mangaluru

ಬೆಳಗ್ಗೆ ಹಾಗು ಸಂಜೆ ನಿಗದಿತ ಸಮಯದಲ್ಲಿ ಹಕ್ಕಿಗಳ ಅಧಿಕ ಸಂಚಾರವಿರುವ ಕುದುರೆಮುಖ, ಕುಂದಾಪುರ ಸೇರಿದಂತೆ ಇನ್ನಿತ ಪ್ರದೇಶಗಳಿಗೆ ಭೇಟಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಇವೆಲ್ಲದರ ಮಧ್ಯೆ ನುರಿತರಿಂದ ಹಕ್ಕಿಗಳ ಕುರಿತು ಛಾಯಾಚಿತ್ರ ಪ್ರದರ್ಶನ, ಸಮಾಲೋಚನಾ ಸಭೆ ಕೂಡ ನಡೆಯಲಿದೆ.

English summary
'Karnataka Bird Festival 2018' organised in Mangaluru . Event starts from February 9 and ends on 11. Festival organised by Forest department and Karnataka Eco Tourism Development Board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X