ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.2ರಿಂದ ಶಿರಾಡಿ ಘಾಟ್ ಬಂದ್, ಪರ್ಯಾಯ ಮಾರ್ಗಗಳು

|
Google Oneindia Kannada News

ಮಂಗಳೂರು, ಜ. 1 : ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಘಾಟ್ ರಸ್ತೆಯನ್ನು ಜ.2ರ ಶುಕ್ರವಾರದಿಂದ ಬಂದ್ ಮಾಡಲಾಗುತ್ತದೆ. ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗಿದೆ.

ಶಿರಾಡಿ ಘಾಟ್ ರಸ್ತೆಯಲ್ಲಿ 237 ರಿಂದ 250 ಕಿ.ಮೀವರೆಗಿನ ಅಂದರೆ ಹೆಗ್ಗದ್ದೆಯಿಂದ ಕೆಂಪುಹೊಳೆ ಗೆಸ್ಟ್‌ಹೌಸ್‌ವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿರುವ ಹಿನ್ನಲೆಯಲ್ಲಿ ಜನವರಿ 2ರಿಂದ ಸಕಲೇಶಪುರ ಸಮೀಪದ ದೋಣಿಗಲ್‌ನಿಂದ ಗುಂಡ್ಯದವರೆಗಿನ ರವರೆಗೆ ಶಿರಾಡಿಘಾಟಿ ಭಾಗದ ರಸ್ತೆ ಭಾಗವನ್ನು ಬಂದ್ ಮಾಡಲಾಗುತ್ತದೆ. [ಕುಂಭಕರ್ಣನ ನಿದ್ದೆಗೆ ಜಾರಲಿರುವ ಶಿರಾಡಿಘಾಟ್]

Shiradi Ghat

ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಿ.ನಟರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಅಪಾಯಕಾರಿ ಶಿರಾಡಿ ಘಾಟ್ ರಸ್ತೆಗೆ ಕಾಯಕಲ್ಪ]

ಪರ್ಯಾಯ ಮಾರ್ಗಗಳು ಹೀಗಿವೆ

* ಹಾಸನ-ಮಂಗಳೂರು ಕಡೆಗೆ : ಲಘು ವಾಹನಗಳು (ಸಾಮಾನ್ಯ ಬಸ್ಸುಗಳು, ಕಾರು, ಜೀಪು, ವ್ಯಾನು, ಎಲ್.ಸಿ.ವಿ. (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ) ಹಾಸನ-ಬೇಲೂರು (ರಾಜ್ಯ ಹೆದ್ದಾರಿ-57)-ಮೂಡಿಗೆರೆ-ಚಾರ್ಮಡಿ ಘಾಟ್-ಬೆಳ್ತಂಗಡಿ-ಉಜಿರೆ-ಬಿ.ಸಿ.ರಸ್ತೆ (ರಾಷ್ಟ್ರೀಯ ಹೆದ್ದಾರಿ 234)-ಮಂಗಳೂರು (ರಾಷ್ಟ್ರೀಯ ಹೆದ್ದಾರಿ 75)

ಹಾಸನ-ಸಕಲೇಶಪುರ-ಆನೆಮಹಲ್ (ರಾಷ್ಟ್ರೀಯ ಹೆದ್ದಾರಿ 75) ಹಾನಬಾಲ್-ಜೆನ್ನಾಪುರ(ರಾಜ್ಯ ಹೆದ್ದಾರಿ-27)-ಮುಡಿಗೆರೆ-ಚಾರ್ಮಡಿ ಘಾಟ್-ಬೆಳ್ತಂಗಡಿ-ಉಜಿರೆ-ಬಿ.ಸಿ.ರಸ್ತೆ(ರಾಷ್ಟ್ರೀಯ ಹೆದ್ದಾರಿ 234)-ಮಂಗಳೂರು (ರಾಷ್ಟ್ರೀಯ ಹೆದ್ದಾರಿ 75) ಹಾಸನ-ಸಕಲೇಶಪುರ-(ರಾಷ್ಟ್ರೀಯ ಹೆದ್ದಾರಿ 75)-ಬೇಲೂರು-ಮುಡಿಗೆರೆ-ಚಾರ್ಮಡಿ ಘಾಟ್-ಬೆಳ್ತಂಗಡಿ-ಉಜಿರೆ-ಬಿ.ಸಿ.ರಸ್ತೆ (ರಾಷ್ಟ್ರೀಯಹೆದ್ದಾರಿ 234)-ಮಂಗಳೂರು (ರಾಷ್ಟ್ರೀಯ ಹೆದ್ದಾರಿ 75)

* ಭಾರೀ ವಾಹನಗಳು : ರಾಜಹಂಸ, ಐರಾವತ ಬಸ್ಸುಗಳು ಮತ್ತು ಖಾಸಗಿ ಲಕ್ಸುರಿ ಬಸ್ಸುಗಳು ಮತ್ತು ಲಘು ವಾಹನಗಳು ಮಂಗಳೂರು-ಬಿ.ಸಿ.ರಸ್ತೆ-ಮಾಣಿ(ರಾಷ್ಟ್ರೀಯ ಹೆದ್ದಾರಿ 75)- ಪುತ್ತೂರು-ಮಡಿಕೇರಿ-ಹುಣಸೂರು(ರಾಷ್ಟ್ರೀಯ ಹೆದ್ದಾರಿ 275)-ಕೆ.ಆರ್.ನಗರ- ಹೊಳೆನರಸೀಪುರ-ಹಾಸನ(ರಾಜ್ಯ ಹೆದ್ದಾರಿ 57)

* ಮಂಗಳೂರು-ಬೆಂಗಳೂರು ಕಡೆಗೆ ಲಘು ಮತ್ತು ಭಾರೀ ವಾಹನಗಳು : ಮಂಗಳೂರು -ಬಿ.ಸಿ.ರಸ್ತೆ-ಮಾಣಿ(ರಾಷ್ಟ್ರೀಯ ಹೆದ್ದಾರಿ 75)-ಪುತ್ತೂರು-ಮಡಿಕೇರಿ-ಹುಣಸೂರು(ರಾಷ್ಟ್ರೀಯ ಹೆದ್ದಾರಿ 275)-ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು. (ಬುಲೆಟ್ ಟ್ಯಾಂಕರ್, ಷಿಪ್ ಕಾರ್ಗೊ ಕಂಟೈನರ್, ಲಾಂಗ್ ಚಾಸೀಸ್ ವಾಹನಗಳು ಹೊರತುಪಡಿಸಿ)

* ಭಾರೀ ವಾಹನಗಳು (ಬುಲೆಟ್ ಟ್ಯಾಂಕರ್, ಷಿಪ್ ಕಾರ್ಗೊ ಕಂಟೈನರ‍್ಸ್, ಲಾಂಗ್ ಚಾಸೀಸ್ ವಾಹನಗಳು ಒಳಗೊಂಡಂತೆ) ಬೆಂಗಳೂರು-ನೆಲಮಂಗಲ-ಶಿವಮೊಗ್ಗ-ಸಾಗರ-ಹೊನ್ನಾವರ- ಮುರುಡೇಶ್ವರ-ಕುಂದಾಪುರ-ಉಡುಪಿ-ಮಂಗಳೂರು. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]

* ಬೆಂಗಳೂರು-ಉಡುಪಿ ಕಡೆಗೆ : ಲಘು ವಾಹನಗಳು ಬೆಂಗಳೂರು-ಹಾಸನ-ಮೂಡಿಗೆರೆ-ಕೊಟ್ಟಿಗೆಹಾರ-ಕಳಸ-ಕುದುರೆಮುಖ-ಮಾಲಘಾಟ್-ಕಾರ್ಕಳ-ಉಡುಪಿ.

* ಭಾರೀ ವಾಹನಗಳು : ಬೆಂಗಳೂರು-ಶಿವಮೊಗ್ಗ-ಆಯನೂರು-ಹೊಸನಗರ-ಮಾಸ್ತಿಕಟ್ಟೆ-ಬಾಳೆಬಾರೆಘಾಟ್-ಹೊಸಂಗಡಿ-ಸಿದ್ಧಾಪುರ-ಕುಂದಾಪುರ.

English summary
The Shiradi Ghat stretch on the Mangalore - Bengaluru National Highway will be blocked for all vehicles for about Six months from January 2,2015. Here is alternative roads list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X