ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಬಳ ಲೋಕದ ಕಿಂಗ್‌ 'ತಾಟೆ': ₹ 8 ಲಕ್ಷಕ್ಕೂ ಅಧಿಕ ದರಕ್ಕೆ ಮಾರಾಟವಾಗಿದ್ದ ಕೋಣದ ಸಾಧನೆ ಏನು..?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್‌ 6: ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ಈ ಋತುವಿನ ಆರಂಭದ ಎರಡೂ ಕಂಬಳಗಳು ಭರ್ಜರಿ ಯಶಸ್ಸುಗಳಿಸಿದೆ.

ಜೊತೆಗೆ ಕಂಬಳ ಕ್ಷೇತ್ರದ ಅತೀ ವೇಗದ ಓಟದ ಕೋಣ ಎಂಬ ಬಿರುದು ಪಡೆದ 'ತಾಟೆ' ಎಂಬ ಕಂಬಳ ಕೋಣದ ಯಶಸ್ಸಿನ ನಾಗಲೋಟವೂ ಮುಂದುವರಿದಿದೆ. ಕಳೆದ ಎರಡು ಕಂಬಳದಲ್ಲೂ ಅಡ್ಡಹಲಗೆ ವಿಭಾಗದಲ್ಲಿ 'ತಾಟೆ' ಕೋಣ ಪ್ರಥಮ ಸ್ಥಾನವನ್ನು ಪಡೆದಿದೆ.

ಸರ್ಕಾರಿ ಬಸ್‌ಗಳ ಕೊರತೆ: ಖಾಸಗಿ ಬಸ್‌ಗಳ ಫುಟ್‌ ಬೋರ್ಡ್‌ನಲ್ಲಿ ನಿಂತು ವಿದ್ಯಾರ್ಥಿಗಳ ಅಪಾಯಕಾರಿ ಸಂಚಾರಸರ್ಕಾರಿ ಬಸ್‌ಗಳ ಕೊರತೆ: ಖಾಸಗಿ ಬಸ್‌ಗಳ ಫುಟ್‌ ಬೋರ್ಡ್‌ನಲ್ಲಿ ನಿಂತು ವಿದ್ಯಾರ್ಥಿಗಳ ಅಪಾಯಕಾರಿ ಸಂಚಾರ

ಕ್ರಿಕೆಟ್ ಲೋಕದ ದಿ ಬೆಸ್ಟ್ ಫಿನಿಷರ್ ಮಹೇಂದ್ರ ಸಿಂಗ್ ಧೋನಿಯಾದರೆ ಕಂಬಳ ಕ್ಷೇತ್ರದ ದಿ ಬೆಸ್ಟ್ ಫಿನೀಶರ್ ಈ "ತಾಟೆ" ಕೋಣ ಎನ್ನುವುದು ಕಂಬಳ ಕೂಟದ ಲಕ್ಷಾಂತರ ಮಂದಿ ಕಂಬಳ ಕೂಟದ ಅಭಿಮಾನಿಗಳ ಮಾತಾಗಿದೆ.

ಎಂಟೂ ಮುಕ್ಕಾಲು ಲಕ್ಷ ರೂಪಾಯಿಗೆ ಮಾರಾಟವಾಗಿದ್ದ ತಾಟೆ

ಎಂಟೂ ಮುಕ್ಕಾಲು ಲಕ್ಷ ರೂಪಾಯಿಗೆ ಮಾರಾಟವಾಗಿದ್ದ ತಾಟೆ

ಕೊನೆಯ ಹತ್ತು ಮೀಟರ್ ದೂರದಲ್ಲಿ ಗಾಳಿಯನ್ನು ಸೀಳಿ ಮುನ್ನುಗ್ಗುವ ತಾಟೆ ಎಲ್ಲರ ಹುಬ್ಬೇರಿಸುವಂತೆ ವಿಜಯದ ಗುರಿ ತಲುಪುತ್ತದೆ. ಇದೇ ಮಾದರಿಯಲ್ಲಿ ನೂರಾರು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಕಂಬಳ ಕ್ಷೇತ್ರಕ್ಕೆ ಹಗ್ಗ ಕಿರಿಯ ವಿಭಾಗದಲ್ಲಿ ಕಾಲಿಟ್ಟ ತಾಟೆ ಬಳಿಕ ಹಿಂದೆ ತಿರುಗಿ ನೋಡಲೇ ಇಲ್ಲ. ಹಗ್ಗ ಕಿರಿಯ ವಿಭಾಗದಲ್ಲಿ ನೂರಾರು ಪದಕಗಳನ್ನು ಸಂಪಾದಿಸಿದ ಬಳಿಕ ನೇಗಿಲು ಹಿರಿಯ ವಿಭಾಗಕ್ಕೆ ಕಾಲಿಟ್ಟಾಗ ಎಂಟೂ ಮುಕ್ಕಾಲು ಲಕ್ಷ ರೂಪಾಯಿಗೆ ಕಂಬಳದ ಪ್ರಸಿದ್ಧ ಕೋಣಗಳ ಯಜಮಾನ ಇರುವೈಲು ಪಾಣಿಲ ಬಾಡ ಪೂಜಾರಿಯವರ ಮಡಿಲು ಸೇರಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಕೋಣ ಮಾರಾಟವಾಗಿದ್ದು ಕಂಬಳ ಕ್ಷೇತ್ರದಲ್ಲೇ ಭಾರಿ ಸಂಚಲನ ಮೂಡಿಸಿತ್ತು.

ಕಂಬಳದಲ್ಲಿ ಬೊಟ್ಟಿಮಾರ್ ಮತ್ತು ತಾಟೆ ಕೋಣಗಳ ಜೋಡಿ ಮೋಡಿ

ಕಂಬಳದಲ್ಲಿ ಬೊಟ್ಟಿಮಾರ್ ಮತ್ತು ತಾಟೆ ಕೋಣಗಳ ಜೋಡಿ ಮೋಡಿ

ಇರುವೈಲುಗೆ ಬಂದ ಬಳಿಕ ಬೊಟ್ಟಿಮಾರ್ ಮತ್ತು ತಾಟೆ ಕೋಣಗಳ ಜೋಡಿ ಕಂಬಳ ಪ್ರೇಮಿಗಳನ್ನು ಮೋಡಿ ಮಾಡಿದೆ. ಹಲವು ವರ್ಷಗಳ ಕಾಲ ಈ ಕೋಣಗಳ ಜೋಡಿ ಕಂಬಳ ಕೂಟದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಾಚಿದೆ. 2019ರಲ್ಲಿ ಮಂಗಳೂರಿನ ಐಕಳದಲ್ಲಿ ನಡೆದ ಕಾಂತಾಭಾರೆ ಬೂಧಭಾರೆ ಜೋಡುಕರೆ ಕಂಬಳಕೂಟದಲ್ಲಿ ಕಂಬಳ ಇತಿಹಾಸದ ಅತೀ ವೇಗದ ಓಟ ಓಡಿದ ಖ್ಯಾತ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರ ಅಂದಿನ ಸಾಧನೆಗೆ ಕಾರಣ ಇದೇ ತಾಟೆ ಎನ್ನುವುದು ಕೂಡ ವಿಶೇಷವಾಗಿದೆ.

ತಾಟೆಯ ಓಟವನ್ನು ನೋಡಲೆಂದೇ ಕಂಬಳಕ್ಕೆ ಜನ ಸಾಗರ

ತಾಟೆಯ ಓಟವನ್ನು ನೋಡಲೆಂದೇ ಕಂಬಳಕ್ಕೆ ಜನ ಸಾಗರ

ಕಂಬಳ ಕೂಟದಲ್ಲಿ ಎಲ್ಲರ ಕಣ್ಮನ ಸೆಳೆಯುವ ತಾಟೆ ಕೋಣ ಓಡುವ ರೀತಿಯೇ ಬಹಳ ವಿಶಿಷ್ಠವಾಗಿದೆ. ತಲೆ ಎತ್ತಿ ಓಡುವ ತಾಟೆ ವಿಜಯದ ಗುರಿಗೆ ಹಾರಿ ರೇಸ್‌ ಅನ್ನು ಅಂತಿಮ ಮಾಡುವುದೇ ವಿಶೇಷವಾಗಿದೆ. ಇಂದಿಗೂ ಜನ ಕಂಬಳಕ್ಕೆ ತಾಟೆಯ ಓಟವನ್ನು ನೋಡಲೆಂದೇ ಬರುವುದು. ಸದ್ಯ ನಾರಾವಿ ಯುವರಾಜ ಜೈನ್ ಅವರ ಯಜಮಾನಿಕೆಯ ತಂಡದಲ್ಲಿರುವ ತಾಟೆ, ಅಡ್ಡ ಹಲಗೆ ವಿಭಾಗದಲ್ಲಿ ಎರಡೂ ಕಂಬಳ ಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ಯಜಮಾನನ ನಂಬಿಕೆ ಉಳಿಸಿದೆ.

ತಾಟೆ ಓಟ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ತಾಟೆ ಓಟ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಒಟ್ಟಿನಲ್ಲಿ ಕರಾವಳಿಯಲ್ಲಿ ಕಂಬಳ ರಂಗು ಹೆಚ್ಚಾಗಿದೆ. ಓಟಗಾರನ ಪ್ರಸಿದ್ಧಿಗೆ ಓಡುವ ಕೋಣದ ಪ್ರಸಿದ್ಧಿಯೇ ಜಗದಗಲವಾಗಿದ್ದು ಕಂಬಳದ ಮೇಲಿರುವ ಜನರ ಪ್ರೀತಿಗೆ ಸಾಕ್ಷಿಯಾಗಿದೆ. ತಾಟೆಯ ಓಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ, ರೀಲ್ಸ್‌ ಮೂಲಕ ಜನಪ್ರಿಯತೆ ಪಡೆಯುತ್ತಿದೆ. ಚಿಗರೆಯ ಓಟದ ತಾಟೆಯನ್ನು ಅಭಿಮಾನಿಗಳು ಪ್ರೀತಿಯಿಂದ ಕಿಂಗ್ ತಾಟೆ ಎಂದು ಬಿರುದು ನೀಡಿ ಅಭಿಮಾನ ತೋರಿಸಿದ್ದಾರೆ.

English summary
Kambala the best finisher King thate achievements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X