• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಕರ ಸಂಕ್ರಾಂತಿ ದಿನದಿಂದ ಕದ್ರಿ ಮಂಜುನಾಥ ಜಾತ್ರೆ ಶುರು

By Mahesh
|

ಮಂಗಳೂರು, ಜ.11: ಇಲ್ಲಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಕರ ಸಂಕ್ರಾಂತಿ ಜ. 14 ದಿನದಿಂದ ಜ. 23ರವರೆಗೆ ನಡೆಯಲಿದೆ, ಜ.25ರಂದು ರಾತ್ರಿ ಮಲರಾಯ ದೈವದ ನೇಮೋತ್ಸವ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿ ಪ್ರಕಟಿಸಿದೆ.

ಜ. 14ರಂದು ಬೆಳಗ್ಗೆ 4ರಿಂದ ತೀರ್ಥ ಸ್ನಾನ, ಸಂಜೆ 6ಕ್ಕೆ ಧ್ವಜಾರೋಹಣದ ಮೂಲಕ ಧಾರ್ಮಿಕ ವಿಧಿ ವಿಧಾನ ಹಾಗೂ ಜಾತ್ರಾ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಪ್ರತಿ ನಿತ್ಯದ ಕಾರ್ಯಕ್ರಮ ವಿವರ ಇಂತಿದೆ:

* ಜ.15ರಂದು ಶ್ರೀ ಮಲರಾಯ ದೈವದ ಭಂಡಾರ ಆಗಮನ ಮತ್ತು ರಾತ್ರಿ 10ಕ್ಕೆ ಗರುಡಾರೋಹಣ

* ಜ.16ರಂದು ಸಂಜೆ 7ಕ್ಕೆ ಉತ್ಸವ ಬಲಿ ಪ್ರಾರಂಭ

* ಜ. 17ರಂದು ಸಂಜೆ 6ಕ್ಕೆ ಬಿಕರ್ನಕಟ್ಟೆ ಸವಾರಿ ಬಲಿ

* ಜ. 18ರಂದು ಸಂಜೆ 6ಕ್ಕೆ ಮಲ್ಲಿಕಟ್ಟೆ ಸವಾರಿ ಬಲಿ

* ಜ. 19ರಂದು ಸಂಜೆ 6ಕ್ಕೆ ಮುಂಡಾಣ ಕಟ್ಟೆ ಸವಾರಿ ಬಲಿ

* ಜ. 20ರಂದು ಸಂಜೆ 6 ಕ್ಕೆ ಕೊಂಚಾಡಿ ಸವಾರಿ ಬಲಿ

* ಜ. 21ರಂದು ಏಳನೇ ದೀಪೋತ್ಸವ, ಮಧ್ಯಾಹ್ನ 12ಕ್ಕೆ ಮಹಾ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 7ಕ್ಕೆ ಉತ್ಸವ ಬಲಿ ಪ್ರಾರಂಭ,

* ಜ. 22ರಂದು ಶ್ರೀ ಮನ್ಮಹಾರಥೋತ್ಸವ, ಮಧ್ಯಾಹ್ನ 12ಕ್ಕೆ ಮಹಾಪೂಜೆ 1.30ಕ್ಕೆ ರಥಾರೋಹಣ, ಸಂಜೆ 6 ಗಂಟೆಗೆ ಶ್ರೀ ಮನ್ಮಹಾರಥೋತ್ಸವ, ಬೆಳ್ಳಿರಥೋತ್ಸವ, [ಕದ್ರಿಯಲ್ಲಿ ಅನಾವರಣಗೊಂಡ ಬಾಲಕೃಷ್ಣರ ಲೀಲೆ]

* ಜ.23ರಂದು ಬೆಳಗ್ಗೆ 7ಕ್ಕೆ ಶ್ರೀದೇವರ ಕವಾಟೋದ್ಘಾಟನೆ ಮತ್ತು ಪೂಜೆ ನಂತರ ತುಲಾಭಾರ ಸೇವೆ, ರಾತ್ರಿ 10.30ಕ್ಕೆ ಧ್ವಜಾವರೋಹಣ ನಡೆಯಲಿದೆ ಮತ್ತು ಜ. 25ರಂದು ಬೆಳಗ್ಗೆ 10ಕ್ಕೆ ಶ್ರೀದೇವಳದಿಂದ ಶ್ರೀ ಮಲರಾಯ ದೈವದ ಭಂಡಾರ ಹೊರಡುವುದು.

ಕದ್ರಿ ದೇಗುಲ ತಲುಪುವುದು ಹೇಗೆ?: ಬೆಂಗಳೂರಿನಿಂದ ಮಂಗಳೂರಿಗೆ ಬಸ್, ರೈಲು, ವಿಮಾನ ಮಾರ್ಗಗಳಿವೆ. ಮಂಗಳೂರಿನ ನೆಹರೂ ಮೈದಾನ ಬಸ್ ನಿಲ್ದಾಣದಿಂದ ಸಿಟಿ ಬಸ್ ಸಂಖ್ಯೆ 3,3ಎ, 4, 4ಸಿ, 6ಎ,ಬಿ,ಸಿ, 14, 14ಎ,ಬಿ, 21, 22, 30ಎ,ಬಿ, 48 ಮುಂತಾದ ರೂಟಿನ ಬಸ್ ಗಳು ಕದ್ರಿ ದೇಗುಲದ ಬಳಿ ತೆರಳುತ್ತವೆ. [ಮಂಗಳೂರು : ಖಾಸಗಿ ಬಸ್ ಪ್ರಯಾಣದರ ಕಡಿತ]

ಕದ್ರಿ ದೇಗುಲದ ಮಹತ್ವ: ಮಂಗಳೂರು ಕೇಂದ್ರ ಭಾಗದಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ಈ ಬೆಟ್ಟದ ದೇಗುಲದ ಸುತ್ತಾ ಕೊಳವಿದ್ದು, ನೈಸರ್ಗಿಕ ರಮಣೀತೆಯೆ ಸಾಕ್ಷಿಯಾಗಿದೆ. ವಿಷ್ಣು ಹಾಗೂ ಪರಶುರಾಮನ ಅವತಾರದ ಕೊಂಡಿ ನಿಮಗೆ ಇಲ್ಲಿ ಸಿಗುತ್ತದೆ.

ಕ್ಷತ್ರೀಯರ ರುಂಡವನ್ನು ಚೆಂಡಾಡಿದ ಪರಶುರಾಮ ಮನಸ್ಸಿಗೆ ನೆಮ್ಮದಿ ಸಿಗದೆ ಶಿವನನ್ನು ಪ್ರಾರ್ಥಿಸಿ ಶಾಂತಿಮಯ ನೆಲೆಯನ್ನು ಸೂಚಿಸುವಂತೆ ಕೋರುತ್ತಾನೆ. ಅದರಂತೆ ಸಪತ್ನಿ ಸಮೇತನಾಗಿ ಕದರಿ ಬೆಟ್ಟಕ್ಕೆ ಬಂದ ಶಿವನು ಪರಶುರಾಮನಿಗೆ ನೆಲೆ ತೋರಿಸುತ್ತಾನೆ.

ಕಿ. ಪ್ರೂ 968ರಲ್ಲಿ ಅಳುಪ ಸಂಸ್ಥಾನದ ರಾಜ ಕುಂದವರ್ಮ ಭೂಪೇಂದ್ರ ಅವರು ಬೌದ್ಧ ವಿಹಾರ ಸ್ಥಾಪಿಸಿ ಲೋಕೇಶ್ವರ ಹೆಸರಿನ ದೈವದ ವಿಗ್ರಹ ಅನುಷ್ಠಾನಗೊಳಿಸಿದ್ದ. ಹೀಗಾಗಿ ದಕ್ಷಿಣ ಭಾರತದ ಅತಿ ಪುರಾತನ ದೇಗುಲಗಳ ಪೈಕಿ ಕದ್ರಿ ಮಂಜುನಾಥ ದೇಗುಲವೂ ಒಂದೆನಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The annual festival of historic Kadri Manjunatha temple will begin on the auspicious day of Makarasankranthi, on Monday January 14. The festivities will be held for nine days. The temple of Manjunatheshwara on the hills of Kadri is one of the oldest in South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more