ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಟ್ಟೂರಿನಲ್ಲಿ ಇಂದು ಕದ್ರಿ ಗೋಪಾಲನಾಥ್ ಅಂತ್ಯಕ್ರಿಯೆ; ಮಿನಿ ಪುರಭವನದಲ್ಲಿ ಅಂತಿಮ ದರ್ಶನ

By ಮಂಗಳೂರು ಪ್ರತಿನಿಧಿ
|
Google Oneindia Kannada News

Recommended Video

Dakshina Kannada Mourns Kadri Gopalnath Legendary Saxophonist | Oneindia Kannada

ಮಂಗಳೂರು, ಅಕ್ಟೋಬರ್ 14: ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರವನ್ನು ಪದವಿನಂಗಡಿ ದೇವಿಕಟ್ಟೆಯ ನಿವಾಸದಿಂದ ಮಂಗಳೂರು ಮಿನಿ ಪುರಭವನದತ್ತ ತರಲಾಗಿದೆ.

ಬೆಳಿಗ್ಗೆ ಒಂಬತ್ತು ಗಂಟೆಗೆ ನಡೆದ ಸಂಗೀತ ಮಾಂತ್ರಿಕನ ಅಂತಿಮ ಯಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಸಂಗೀತ ಪ್ರೇಮಿಗಳು ಭಾಗವಹಿಸಿದರು. ಮಧ್ಯಾಹ್ನ ಎರಡು ಗಂಟೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ಇರಿಸಲಾಗುತ್ತದೆ.

ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲ್ ನಾಥ್ ವಿಧಿವಶಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲ್ ನಾಥ್ ವಿಧಿವಶ

ಮಿನಿ ಪುರಭವನದಲ್ಲಿ ಗಣ್ಯ ವ್ಯಕ್ತಿಗಳು, ಸಂಗೀತ ಪ್ರಿಯರು ಮತ್ತು ಅಪಾರ ಶಿಷ್ಯವೃಂದ ಅಂತಿಮ ದರ್ಶನ‌ ಪಡೆಯುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.

Kadri Gopalnath Funeral Today At His Hometown Bantwal

ಗೋಪಾಲನಾಥ್ ಅವರ ಮಕ್ಕಳಾದ ಮಣಿಕಾಂತ್ ಕದ್ರಿ ಮತ್ತು ಗುರುಪ್ರಸಾದ್ ಮತ್ತು ಕುಟುಂಬಸ್ಥರು ಇದ್ದು, ಕದ್ರಿ ಗೋಪಾಲನಾಥ್ ಅವರ ಶಿಷ್ಯವೃಂದ ಮಿನಿ ಪುರಭವನದಲ್ಲಿ ಅಗಲಿದ ಸಾಧಕನಿಗೆ ಸ್ವರಾಂಜಲಿ ಸಲ್ಲಿಸುತ್ತಿದೆ.

ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ವ್ಯಕ್ತಿಚಿತ್ರ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ವ್ಯಕ್ತಿಚಿತ್ರ

ಜಿಲ್ಲಾಡಳಿತದ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಜೋಗಿ ಸಮುದಾಯದ ಸಂಪ್ರದಾಯದಂತೆ ಸಂಜೆ ನಾಲ್ಕರ ಸುಮಾರಿಗೆ ಹುಟ್ಟೂರು ಬಂಟ್ವಾಳದ ಮಿತ್ತಮಜಲುನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

English summary
The funeral of saxophonist Kadri Gopalnath will be held today afternoon at his hometown Mittamajalu of Bantwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X