ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಕ್ಕೆ; ಆಶ್ಲೇಷಾ ಬಲಿ ಸೇವೆ ಮಾಡಿಸಿದ ಸುಪ್ರೀಂ ಜಡ್ಜ್ ಅಬ್ದುಲ್ ನಝೀರ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 27; ಭಾರತದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್ ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದರು. ದಕ್ಷಿಣ ಕನ್ನಡದ ಪ್ರಸಿದ್ಧ ದೇವಾಲದಯಲ್ಲಿ ಆಶ್ಲೇಷ ಬಲಿ ಸೇವೆ ಮಾಡಿಸಿದರು.

ಒಂದು ವಾರಗಳ ಕಾಲದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ನ್ಯಾಯಮೂರ್ತಿ ಅಬ್ದುಲ್ ನಝೀರ್ ಹೈದರಾಬಾರ್‌ನಿಂದ ಮಂಗಳೂರಿಗೆ ಆಗಮಿಸಿ ಕುಕ್ಕೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ನ್ಯಾಯಮೂರ್ತಿಗಳ ಇಚ್ಛೆಯಂತೇ ದೇವಾಲಯದ ಆಡಳಿತ ಮಂಡಳಿ, ಆಶ್ಲೇಷಾ ಬಲಿ ಸೇವೆಗೆ ವ್ಯವಸ್ಥೆ ಮಾಡಿತ್ತು.

ವೈಭವದ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮ ರಥೋತ್ಸವ; ಲಕ್ಷಾಂತರ ಭಕ್ತರು ಭಾಗಿವೈಭವದ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮ ರಥೋತ್ಸವ; ಲಕ್ಷಾಂತರ ಭಕ್ತರು ಭಾಗಿ

ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಭಾರತದ ಪರಮಪವಿತ್ರ ನಾಗಕ್ಷೇತ್ರ. ಕೇವಲ ಹಿಂದೂ ಭಕ್ತರು ಮಾತ್ರವಲ್ಲದೇ ಎಲ್ಲಾ ಜಾತಿ, ಧರ್ಮದ ಭಕ್ತರೂ ಇಲ್ಲಿಗೆ ಆಗಮಿಸುತ್ತಾರೆ. ಈ ಅಭಿಪ್ರಾಯ ಈಗ ಮತ್ತೆ ರುಜುವಾತಾಗಿದೆ. ನ್ಯಾಯಮೂರ್ತಿಗಳಾದ ಅಬ್ದುಲ್ ನಝೀರ್ ಕುಟುಂಬ ಸಮೇತರಾಗಿ ಭೇಟಿ ನೀಡಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷಾ ಬಲಿ ಸೇವೆ ಮಾಡಿಸಿದ್ದಾರೆ.

 ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಉರುಳು ಸೇವೆ ಮಾಡುವ ಭಕ್ತರು! ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಉರುಳು ಸೇವೆ ಮಾಡುವ ಭಕ್ತರು!

justice S. Abdul Nazeer

ಮೂಲತಃ ಮೂಡಬಿದಿರೆ ಸಮೀಪದ ಬೆಳುವಾಯಿ ನಿವಾಸಿಯಾಗಿರುವ ನ್ಯಾಯೂಮೂರ್ತಿ ಅಬ್ದುಲ್ ನಝೀರ್ ಒಂದು ವಾರಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕುಕ್ಕೆ ಸುಬ್ರಮಣ್ಯದಿಂದ ಸೋಮವಾರ ಪುತ್ತೂರಿಗೆ ಆಗಮಿಸಿದ ನ್ಯಾಯಮೂರ್ತಿಗಳು, ಪುತ್ತೂರಿನಲ್ಲಿ ಬಾರ್ ಅಸೋಸಿಯೇಷನ್‌ನ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಅಲ್ಲಿನ ಕೋರ್ಟ್ ಕಟ್ಟಡದ ಎರಡನೇ ಹಂತದ ಕಟ್ಟಡ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ಕ್ವಾರ್ಟಸ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಚಂಪಾಷಷ್ಠಿ ವೀಕ್ಷಿಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಾರೆ ವಿಶೇಷ ಅತಿಥಿಗಳು!ಚಂಪಾಷಷ್ಠಿ ವೀಕ್ಷಿಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಾರೆ ವಿಶೇಷ ಅತಿಥಿಗಳು!

ಬಳಿಕ ಸುಳ್ಯದಲ್ಲಿ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬಳಿಕ ಬೆಳ್ತಂಗಡಿಯಲ್ಲೂ ಬಾರ್ ಅಸೋಸಿಯೇಷನ್ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನ್ಯಾಯಮೂರ್ತಿಗಳು ಮೂಡುಬಿದಿರೆಗೆ ಆಗಮಿಸಿ ಸ್ವಗೃಹದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನವರಿ 1ರಂದು ದೆಹಲಿಗೆ ವಾಪಸ್ ಆಗಲಿದ್ದಾರೆ.

ಕುಕ್ಕೆಯಲ್ಲಿ ಭಕ್ತಸಾಗರ; ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಶನಿವಾರ ಕ್ರಿಸ್‌ಮಸ್, ಭಾನುವಾರ ವಾರಾಂತ್ಯದ ರಜೆ ಹಾಗೂ ವರ್ಷಾಂತ್ಯದ ರಜಾ ದಿನಗಳ ಸರಣಿಯಿಂದ ಕಳೆದ ಎರಡು ದಿನಗಳಿಂದ ಕ್ಷೇತ್ರದಲ್ಲಿ ಭಕ್ತ ಪ್ರವಾಹವೇ ಕಂಡು ಬಂದಿದೆ.

ಕ್ಷೇತ್ರದಲ್ಲಿ ಭಾನುವಾರ ಹಗಲು ಮತ್ತು ರಾತ್ರಿ ಒಟ್ಟು ಸೇರಿ ಸುಮಾರು 60 ಸಾವಿರಕ್ಕೂ ಅಧಿಕ ಮಂದಿ ಭೋಜನ ಪ್ರಸಾದ ಸ್ವೀಕರಿಸಿದ್ದಾರೆ. ಪ್ರಮುಖ ಸೇವೆಗಳಾದ ಆಶ್ಲೇಷ ಬಲಿ, ನಾಗಪ್ರತಿಷ್ಠ್ಯ ಮಹಾಪೂಜೆ, ಕಾರ್ತಿಕ ಪೂಜೆ, ಮಹಾಭಿಷೇಕ, ಶೇಷ ಸೇವೆ, ತುಲಾಭಾರ ಅಧಿಕವಾಗಿ ನೆರವೇರಿದೆ.

ದೇವಾಲಯದ ವಸತಿ ಗೃಹಗಳು, ಖಾಸಗಿ ವಸತಿಗೃಹಗಳು ಭಕ್ತರಿಂದ ತುಂಬಿದೆ. ಕೋವಿಡ್ ನಿಯಮಪಾಲನೆಗೆ ಅನುಗುಣವಾಗಿ ಭಕ್ತರಿಗೆ ಶ್ರೀ ದೇವರ ದರ್ಶನ ಮತ್ತು ಸೇವೆಗಳನ್ನು ನೆರವೇರಿಸಲು ಆಡಳಿತ ಮಂಡಳಿ ಅವಕಾಶ ಮಾಡಿಕೊಟ್ಟಿದೆ. ಆದಿ ಸುಬ್ರಹ್ಮಣ್ಯ, ಸರ್ಪ ಸಂಸ್ಕಾರದ ಪ್ರದೇಶ, ದೇವಳದ ಒಳಭಾಗದಲ್ಲಿ ಹೆಚ್ಚಿನ ಜನ ಸಂದಣಿ ಕಂಡುಬಂದಿದೆ.

ಬಫೆ ಮಾದರಿಯಲ್ಲಿ ಭೋಜನ ಸ್ವೀಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಎರಡು ದಿನಗಳಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

Recommended Video

Ashes : Australia ಮೂರನೇ ಪಂದ್ಯವನ್ನು ಗೆದ್ದಿದ್ದು ಹೀಗೆ | Oneindia Kannada

English summary
Judge of Supreme Court justice S. Abdul Nazeer performed Aslesha Bali puja at Kukke Subramaya temple, Dakshina Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X