ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ದನ ಪೂಜಾರಿ ವಿರುದ್ಧ ಕ್ರಮಕ್ಕೆ ಜೆಡಿಎಸ್ ಒತ್ತಾಯ

|
Google Oneindia Kannada News

ಮಂಗಳೂರು ಮಾರ್ಚ್ 16: ಕೇಂದ್ರ ದಲ್ಲಿನ ಮೋದಿ ಆಡಳಿತ ವನ್ನು ಹೊಗಳಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ದನ ಪೂಜಾರಿಅವರ ವಿರುದ್ಧ ಒಂದೆಡೆ ಕಾಂಗ್ರೆಸ್ ಮುಖಂಡರೇ ಕಿಡಿಕಾರ ತೊಡಗಿದ್ದಾರೆ .

ಇನ್ನೊಂದೆಡೆ ಜೆಡಿಎಸ್ ನಾಯಕರು ಜನಾರ್ದನ ಪೂಜಾರಿ ವಿರುದ್ಧ ಆಕ್ರೋಶ ವ್ಯಕ್ತ ಪಡೆಸುತ್ತಿದ್ದಾರೆ. ಮಂಗಳೂರಿನ ಲ್ಲಿ ಇತ್ತೀಚೆಗೆ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಜನಾರ್ದನ ಪೂಜಾರಿ ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ. ಅದನ್ನು ಮುಂದುವರೆಸಬೇಕು ಎಂದು ಹೇಳಿದ್ದರು ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂದು ಹೇಳಿದೆ ನೀಡಿ ಅಚ್ಚರಿ ಮೂಡಿಸಿದ್ದರು.

ರಾಜೇಂದ್ರ ಕುಮಾರ್ ಗೆ ಟಿಕೆಟ್ ನೀಡಿದರೆ ಬಂಡಾಯ ಸ್ಪರ್ಧೆ ಖಚಿತ:ಜನಾರ್ದನ ಪೂಜಾರಿ ರಾಜೇಂದ್ರ ಕುಮಾರ್ ಗೆ ಟಿಕೆಟ್ ನೀಡಿದರೆ ಬಂಡಾಯ ಸ್ಪರ್ಧೆ ಖಚಿತ:ಜನಾರ್ದನ ಪೂಜಾರಿ

ಅದಲ್ಲದೇ ತಮ್ಮ ಮಾದ್ಯಮ ಗೋಷ್ಠಿಯಲ್ಲಿ ಕೆಲ ಕಾಂಗ್ರೆಸ್‌ ಮುಖಂಡರನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಪೂಜಾರಿ ವಿರುದ್ಧ ಜೆಡಿಎಸ್ ಆಕ್ಷೇಪ ವ್ಯಕ್ತಪಡೆಸಿದೆ. ಜನಾರ್ಧನ ಪೂಜಾರಿ ಅವರ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗುತ್ತಿದೆ. ಹೀಗಾಗಿ ಅವರ ವಿರುದ್ಧ ಕಾಂಗ್ರೆಸ್‌ ಈ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಂಞಿ ಆಗ್ರಹಿಸಿದ್ದಾರೆ.

JDS slamms Janardhana Poojari

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು , ಮೋದಿ ಪುನರಾಯ್ಕೆಯಾಗಬೇಕು ಎನ್ನುವ ಪೂಜಾರಿ, ಮತ್ತೂಂದೆಡೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್‌ ಆಕಾಂಕ್ಷಿ ಅನ್ನುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದ ನಾಯಕರನ್ನು ಟೀಕಿಸುತ್ತಾರೆ. ಕೆಲವರಿಗೆ ಟಿಕೆಟ್‌ ಕೊಡಬೇಡಿ ಅನ್ನುತ್ತಾರೆ. ಚುನಾವಣೆ ಹೊಸ್ತಿಲಿನಲ್ಲಿ ಇಂತಹ ಹೇಳಿಕೆ ನೀಡಲು ಇವರು ಯಾರು? ಎಂದು ಮಹಮ್ಮದ್‌ ಕುಂಞಿ ಪ್ರಶ್ನಿಸಿದ್ದಾರೆ.

ಜೆಡಿಎಸ್ ಹಿರಿಯ ನಾಯಕರ ಕೈ ಸೇರಿದ ದ.ಕ.ಆಕಾಂಕ್ಷಿಗಳ ಪಟ್ಟಿ ಜೆಡಿಎಸ್ ಹಿರಿಯ ನಾಯಕರ ಕೈ ಸೇರಿದ ದ.ಕ.ಆಕಾಂಕ್ಷಿಗಳ ಪಟ್ಟಿ

ಪೂಜಾರಿ ಅವರ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ ಆಗಿರ ಬಹುದು. ಅವರನ್ನು ಸಮಾಜ ಹಾಗೂ ಅಲ್ಪಸಂಖ್ಯಾಕ ಸಮುದಾಯ ತಿರಸ್ಕರಿಸಿದೆ. ಹಾಗಾಗಿ ಅವರ ವ್ಯಕ್ತಿಯ ಹೇಳಿಕೆ ಬಗ್ಗೆ ಕಾಂಗ್ರೆಸ್‌ ನಾಯಕರು ಮೌನವಾಗಿರಬಾರದು. ಜೆಡಿಎಸ್‌ ಕಾಂಗ್ರೆಸ್‌ನ ಮೈತ್ರಿ ಪಕ್ಷವಾಗಿರುವ ಕಾರಣ ಅದರ ರಾಜ್ಯ ನಾಯಕರಿಗೆ ಈ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಅವರು ಹೇಳಿದರು.

English summary
peaking to media persons JDS District president Mohammad Kunni slammed Congress senior leader B Janardhan Poojari over his statement on Narendra Modi .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X