ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಷಪ್ ಆಶೀರ್ವಾದ ಪಡೆದು ದೇವೇಗೌಡರು ಹೇಳಿದ್ದೇನು?

By Srinath
|
Google Oneindia Kannada News

jds-hd-deve-gowda-seeks-blessings-of-bishop-in-mangalore
ಮಂಗಳೂರು, ಸೆ.18: ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರು ಇಂದು ಕೊಡಿಯಾಲ್ ಬೈಲಿನಲ್ಲಿರುವ ಆರ್ಚ್ ಬಿಷಪ್ ಡಾ. ಅಲೋಯ್ಸಿಯಸ್ ಪಾಲ್ ಡಿಸೋಜಾ ಅವರ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎ ಕೃಷ್ಣಪ್ಪ, ಡೆನಿಸ್ ಮೋರಸ್ ಪ್ರಭು, ವಿಲಿಯಂ ಮೆನೆಜೆಸ್ ಮತ್ತಿತರರರು ದೇವೇಗೌಡ ಜತೆಗಿದ್ದರು.

ರಾಜ್ಯ ಪ್ರವಾಸಕ್ಕೆ ತೆರಳುವ ಮುನ್ನ ಕ್ರೈಸ್ತ ಬಿಷಪ್ ಡಾ. ಅಲೋಯ್ಸಿಯಸ್ ಪಾಲ್ ಡಿಸೋಜಾ ಅವರ ಆಶೀರ್ವಾದ ಪಡೆಯಲು ಬಂದಿರುವೆ ಎಂದು ತಿಳಿಸಿದ ದೇವೇಗೌಡರು ಕ್ರೈಸ್ತ ಪಾದ್ರಿಗಳ ಜತೆ ಮಾತುಕತೆ ನಡೆಸಿದರು. ಇದೇ ವೇಳೆ, ಮಂಗಳೂರಿನಲ್ಲಿ ನಡೆದಿದ್ದ ಚರ್ಚ್ ಮೇಲಿನ ದಾಳಿಯ ಬಗ್ಗೆಯೂ ದೇವೇಗೌಡರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಜೆಡಿಎಸ್ ಪಕ್ಷವನ್ನು ನಾಶಮಾಡಿವೆ ಎಂದು ಹೇಳಿದರು.

ನರೇಂದ್ರ ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು 'ಯಾರೇ ಆಗಲಿ ಮೊದಲು ದೇಶದ ಬಗ್ಗೆ ಮೊದಲು ಯೋಚನೆ ಮಾಡಬೇಕು. ವ್ಯಕ್ತಿಗಳ ಬಗ್ಗೆ ಮಾತನಾಡುವುದು ಬೇಡ' ಎಂದು ಸೂಕ್ಷ್ಮವಾಗಿ ಹೇಳಿದರು.

ಮನಮೋಹನ್ ಸಿಂಗ್ ಅವರ ಬಗ್ಗೆ ಮಾತನಾಡಿದ ಗೌಡರು 'ನೋಡಿ ಪ್ರತಿ ಸಲವೂ ಮೌನಕ್ಕೆ ಶರಣಗಾವುದು ಒಳ್ಳೆಯ ಲಕ್ಷಣವಲ್ಲ. ಕಲ್ಲಿದ್ದಲು ಹಗರಣದ ಕಡತಗಳು ಕಾಣೆಯಾಗಿವೆ ಎಂದು ಸರಕಾರ ಹೇಳುತ್ತದೆ. ಜನ ಇಂತಹ ಪೊಳ್ಳು ಮಾತುಗಳನ್ನು ನಂಬುವುದಿಲ್ಲ' ಎಂದರು.

ಪಕ್ಷದ ವತಿಯಿಂದ ರಾಜ್ಯ ಪ್ರವಾಕ್ಕೆಂದು 6 ತಂಡಗಳನ್ನು ರಚಿಸಲಾಗಿದೆ. 15 ದಿನಗಳಿಗೊಮ್ಮೆ ಸಭೆ ನಡೆಸಿ, ಪಕ್ಷದ ಅಭಿವರ್ಧನೆ ಬಗ್ಗೆ ಚಿಂತನ-ಮಂಥನ ಮಾಡುವುದಾಗಿಯೂ ಅವರು ಹೇಳಿದರು. ಕರಾವಳಿಯಲ್ಲಿ ತಮ್ಮ ಪಕ್ಷಕ್ಕೆ ನೆಲೆಯಿಲ್ಲ. ಆದರೂ ಪಕ್ಷವನ್ನು ಬಲಪಡಿಸಲು ಶಕ್ತಿಮೀರಿ ಯತ್ನಿಸುವುದಾಗಿ ಗೌಡರು ಹೇಳಿದರು.

English summary
Former Prime Minister and national president of JD(S) party Deve Gowda on Wednesday September 18 visited the Bishop's House and sought blessings from bishop Dr Aloysius Paul D'Souza. He said, "We have committed two mistakes - the first was supporting the Congress, and second, the BJP. Both the parties have tried to destroy JD(S)."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X