ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಲೆ ಏರಿಕೆ ನಿರೀಕ್ಷೆಯಲ್ಲಿ ಕರಾವಳಿ ಮಲ್ಲಿಗೆ ಬೆಳೆಗಾರರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 10 : ಮಲ್ಲಿಗೆ ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆ. ಕರಾವಳಿಯಲ್ಲಿ ಪ್ರತಿ ಮಳೆಗಾಲದಲ್ಲಿ ಉಡುಪಿ ಮಲ್ಲಿಗೆ ಇಳುವರಿ ಹೆಚ್ಚಾಗಿ ಮಾರುಕಟ್ಟೆಗಳಲ್ಲಿ ಬೇಡಿಕೆ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಆಟಿ ತಿಂಗಳಿನಲ್ಲಿ ಮಲ್ಲಿಗೆ ಇಳುವರಿ ಹೆಚ್ಚಿದ್ದರೂ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾಗಿತ್ತು.

ಆದರೆ, ಸದ್ಯಕ್ಕೆ ಮಲ್ಲಿಗೆ ಮಾರುಕಟ್ಟೆ ಕುಸಿದಿದ್ದು, ಮಲ್ಲಿಗೆ ಅಟ್ಟೆಯೊಂದಕ್ಕೆ 130ರಿಂದ 150 ರು. ವರೆಗೆ ಕನಿಷ್ಠ ದರ ನಿಗದಿಯಾಗಿದೆ.[ನಾಗರ ಪಂಚಮಿ, ಮಾರುಕಟ್ಟೆಯಲ್ಲಿ ಕೇದಗೆ ಘಮ]

Jasmine in anticipation of price hike, Mangaluru

ಶಂಕರಪುರದಲ್ಲಿ ಬೆಳೆಯುವ ಮಲ್ಲಿಗೆ ಹೂವಿಗೆ ಏಪ್ರಿಲ್, ಮೇ ತಿಂಗಳಿನಲ್ಲಿ ಭರ್ಜರಿ ಬೇಡಿಕೆ ಇರುತ್ತದೆ. ಈ ಸೀಸನ್ ನಲ್ಲಿ ಮದುವೆಗಳು ಹೆಚ್ಚು ನಡೆಯುತ್ತವೆ. ಆಗ ರಾಜ್ಯ, ಹೊರರಾಜ್ಯವಲ್ಲದೆ ವಿದೇಶಕ್ಕೂ ಮಲ್ಲಿಗೆ ರಫ್ತಾಗುತ್ತದೆ. ಒಳ್ಳೆ ಬೆಲೆಯೂ ಸಿಗುತ್ತದೆ.

ಈ ಬಾರಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸಾಕಷ್ಟು ಮಳೆಯಾಗಿದ್ದು, ಮಲ್ಲಿಗೆ ಇಳುವರಿ ಹೆಚ್ಚಾಗಿತ್ತು. ಪ್ರಾರಂಭದಲ್ಲಿ ಮಲ್ಲಿಗೆ ಬೆಳೆಗಾರರು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಬೇಕಾದ ಪ್ರಮೇಯ ಎದುರಾಗಿತ್ತು. ಆಟಿ ತಿಂಗಳಲ್ಲಿ ಸಾಧಾರಣವಾಗಿ ಪೂರಕ ಮಳೆಯಾಗಿ ಇಳುವರಿ ಹೆಚ್ಚಿದ್ದು, ಮಾರುಕಟ್ಟೆ ಧಾರಣೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ.[ನೀನಿರಲೇ ಇಲ್ಲ ಮಲ್ಲಿಗೆಯು ಘಮಿಸಿದಾಗ]

ಮಳೆಗಾಲದಲ್ಲಿ ಶಂಕರಪುರ ಭಾಗದ ಎಲ್ಲ ಮನೆಗಳಲ್ಲಿಯೂ ಹೇರಳವಾಗಿ ಮಲ್ಲಿಗೆ ಬೆಳೆಯುವುದರಿಂದಾಗಿ ಮಾರುಕಟ್ಟೆ ಬೆಲೆ ಇಳಿಮುಖವಾಗಿದೆ. ಹೊರ ರಾಜ್ಯಗಳಿಂದ ಬೇಡಿಕೆ ಬಂದರೆ ಮಾತ್ರ ಮಾರುಕಟ್ಟೆಗಳಲ್ಲಿ ಉತ್ತಮ ದರ ದೊರೆಯುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಮಲ್ಲಿಗೆ ಬೆಳೆಗಾರರ ಸಂಖ್ಯೆ ಅಧಿಕವಾಗಿದೆ. ಆದರೆ ಲಾಭದ ದೃಷ್ಟಿಯಲ್ಲಿ ನೋಡುವುದಾದರೆ ಕೃಷಿಕರಿಗೆ ನಿರೀಕ್ಷಿತ ಮಟ್ಟದಲ್ಲಿ ಫಲ ದೊರೆತಿಲ್ಲ. ಸೋಣ ಆರಂಭವಾಗುವುದರಿಂದ ಇನ್ನಷ್ಟೇ ಮಾರುಕಟ್ಟೆ ಚೇತರಿಸಿಕೊಳ್ಳಬೇಕಾಗಿದೆ.

English summary
Karnataka Coastal areas major crop jasmine price dropped in the market. If demand come from out of state amd countries condition will improve.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X