ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೇತ್ರಾವತಿ ನದಿಯಲ್ಲಿ ಇಸ್ಕಾನ್ ಅರ್ಚಕನ ಶವ ಪತ್ತೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಆಗಸ್ಟ್ 10 : ಇಸ್ಕಾನ್ ದೇವಾಲಯದ ಅರ್ಚಕರ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದು, ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಮೃತಪಟ್ಟವರನ್ನು ಬೆಂಗಳೂರಿನ ಇಸ್ಕಾನ್‌ನ ಸಿಬ್ಬಂದಿ ರಾಘವ ಗೋವಿಂದದಾಸ್ (28) ಎಂದು ಗುರುತಿಸಲಾಗಿದೆ. ರಾಘವ ಅವರು ಮಂಗಳೂರು ಇಸ್ಕಾನ್‌ನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ಆಡಂಕುದ್ರು ಬಳಿ ನೇತ್ರಾವತಿ ನದಿಯತ್ತ ತೆರಳಿದ್ದಾಗ ನಾಪತ್ತೆಯಾಗಿದ್ದರು. ಸಂಜೆ ಅವರ ಮೃತ ದೇಹ ಪತ್ತೆಯಾಗಿದೆ.

ISKCON

ಮೃತದೇಹವನ್ನು ನದಿಯಿಂದ ಹೊರತೆಗೆದಾಗ ಅವರ ಬೆನ್ನ ಹಿಂದೆ ಹಾಕಿಕೊಂಡ ಬ್ಯಾಗ್ ದೊರೆತಿದ್ದು, ಬ್ಯಾಗ್‌ನಲ್ಲಿ ದೊಡ್ಡ ಕಲ್ಲೊಂದು ಪತ್ತೆಯಾಗಿದೆ. ಅರ್ಚಕರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. [ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಅರ್ಚಕ]

ಕೊಲೆ ಮಾಡಿದ್ದಾರೆ ಎಂದು ದೂರು : ರಾಘವ ಗೋವಿಂದದಾಸ್ ಅವರನ್ನು ಯಾರೋ ಕೊಲೆ ಮಾಡಿ ನದಿಗೆ ಎಸೆದಿದ್ದಾರೆ ಎಂದು ಅವರ ಅಣ್ಣ ನರೇಂದ್ರ ಅವರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದಾರೆ. ಬ್ಯಾಗ್‌ನಲ್ಲಿ ಕಲ್ಲು ಸಿಕ್ಕಿರುವುದರಿಂದ ಕಲ್ಲಿನಿಂದ ಹೊಡೆದು ಕೊಲೆ ಮಾಡಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೃತರ ಅಣ್ಣ ನರೇಂದ್ರ ಕಾಮತ್ ನೀಡಿದ ದೂರಿನ ಅನ್ವಯ ಉಳ್ಳಾಲ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
28-year-old ISKCON priest Ragav Govindadas found dead in Mangaluru. Bengaluru based Ragav working in Mangaluru ISKCON. Body found in Netravati river on Sunday. Ullal police registered the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X