ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂದರ್ಶನ: ಲಲಿತಕಲಾ ವಿವಿ ಉಪ ಕುಲಪತಿ ಸರ್ವಮಂಗಳ

By Manjunatha
|
Google Oneindia Kannada News

ವರದಿ : ಸುಶ್ಮಿತ ಜೈನ್,

ಚಿತ್ರ :ಜಯಲಕ್ಷ್ಮಿ ಭಟ್

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ನಿಮಿತ್ತ ಬುಧವಾರ ಅಮೃತವರ್ಷಿಣಿ ಸಂಭಾಗಣದಲ್ಲಿ ಆಯೋಜಿಸಿದ ಲಲಿತಕಲಾ ಸಂಭ್ರಮಕ್ಕೆ ಲಲಿತಕಲಾ ವಿವಿ ಉಪಕುಲಪತಿಗಳಾದ ಸರ್ವಮಂಗಳ ಅವರು ಆಗಮಿಸಿದ್ದರು.

ಧರ್ಮಸ್ಥಳದಲ್ಲಿ ಎಂದಿರನ್ ಭವಿಷ್ಯಧರ್ಮಸ್ಥಳದಲ್ಲಿ ಎಂದಿರನ್ ಭವಿಷ್ಯ

ಈ ವೇಳೆ 'ಒನ್ ಇಂಡಿಯಾ ಕನ್ನಡಕ್ಕೆ' ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು.

ಧರ್ಮಸ್ಥಳದ ವಸ್ತುಪ್ರದರ್ಶನದಲ್ಲಿ ಮೈ ಮರೆಸುವ ಮರದ ವಸ್ತುಧರ್ಮಸ್ಥಳದ ವಸ್ತುಪ್ರದರ್ಶನದಲ್ಲಿ ಮೈ ಮರೆಸುವ ಮರದ ವಸ್ತು

ಸಂಗೀತದಿಂದ ಉತ್ತಮ ಜೀವನವನ್ನೇ ನಡೆಸಬಹುದು

ಸಂಗೀತದಿಂದ ಉತ್ತಮ ಜೀವನವನ್ನೇ ನಡೆಸಬಹುದು

ಇಂದು ಪೋಷಕರಲ್ಲಿ ಒಂದು ತಪ್ಪುಕಲ್ಪನೆ ಅವರಿಸಿದೆ. ಎಂಜಿನಿಯರಿಂಗ್ ಎಂಬಿಬಿಎಸ್ ಮುಂತಾದ ವೃತ್ತಿಪರ ಕೋರ್ಸ್‌ಗಳು ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ತಿಂಗಳಾದರೆ ಕೈ ತುಂಬಾ ಸಂಬಳವು ಸಿಗುತ್ತದೆ ಎಂದು ಮಕ್ಕಳನ್ನು ಕಲೆಯಿಂದ ದೂರ ಮಾಡುತ್ತಿದ್ದಾರೆ. ಕಲಾಜ್ಞಾನ ತಿಳಿಯದವರು ಸಂಗೀತ ಅಭ್ಯಾಸದಿಂದ ಹೊಟ್ಟೆತುಂಬುವುದಿಲ್ಲ, ಜೀವನ ನಡೆಯುವುದಿಲ್ಲ ಎಂದು ಹೇಳುತ್ತಾರೆ. ಇಂತಹ ಮಾತುಗಳು ಸುಳ್ಳು, ಸಂಗೀತ ಕ್ಷೇತ್ರದಲ್ಲಿಯೂ ತಂತ್ರಜ್ಞಾನಿಗಳಿಗೆ ಬೇಡಿಕೆ ಇದೆ. ಇಂದು ಕಲೆಯು ವೃತ್ತಿಪರ ಸ್ವರೂಪವನ್ನು ಪಡೆದುಕೊಳ್ಳತ್ತಿದೆ.

ಬಣ್ಣ ಬಣ್ಣದ ಬಾಂಬೆ ಐಸ್ ಗೋಲಾಬಣ್ಣ ಬಣ್ಣದ ಬಾಂಬೆ ಐಸ್ ಗೋಲಾ

ಕೆಲಸಗಳು ಜಾರಿಯಲ್ಲಿವೆ.

ಕೆಲಸಗಳು ಜಾರಿಯಲ್ಲಿವೆ.

ಈ ನಿಟ್ಟಿನಲ್ಲಿ ಮೊಟ್ಟಮೊದಲ ಬಾರಿಗೆ ಸಂಗೀತ ಮತ್ತು ಲಲಿತಕಲಾ ವಿಶ್ವವಿದ್ಯಾಲಯದಲ್ಲಿ ಕಳೆದ ಒಂದು ವರ್ಷದ ಹಿಂದೆ ಸೈನ್ಸ್ ಟೆಕ್ನಾಲಾಜಿ ಆಂಡ್ ಮ್ಯಾನೇಜ್‌ಮೆಂಟ್ ಪರ್‌ಫಾರ್ಮಿಂಗ್ ಆರ್ಟ್ಸ್ ಎಂಬ ಅಧ್ಯಯನ ವಿಭಾಗವನ್ನು ಆರಂಭಿಸಲಾಗಿದೆ ಎಂದರು. ಸಂಗೀತ ವಿದ್ಯೆಯೊಂದಿಗೆ ತಂತ್ರಜ್ಞಾನದ ವಿದ್ಯೆಯನ್ನು ಅಳವಡಿಸಿದ್ದು,ಉದ್ಯೋಗ ಸೃಷ್ಟಿ ಇದರ ಹಿಂದಿನ ಮಹತ್ವದ ಉದೇಶವಾಗಿದೆ.

ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ

ತಂತ್ರಜ್ಞಾನ ಸಂಗೀತವನ್ನು ಮುಂದೆ ತೆಗೆದುಕೊಂಡು ಹೋಗುತ್ತದೆ

ತಂತ್ರಜ್ಞಾನ ಸಂಗೀತವನ್ನು ಮುಂದೆ ತೆಗೆದುಕೊಂಡು ಹೋಗುತ್ತದೆ

ಸಂಗೀತ ಕಛೇರಿಗಳು ನಡೆಯುವ ಸಂದರ್ಭದಲ್ಲಿ ತಂತ್ರಜ್ಞಾನ ಅವಶ್ಯಕತೆ ಇರುತ್ತದೆ. ತಬಲ ನುಡಿಸುವ ಸಂದರ್ಭದಲ್ಲಿ, ಕೊಳಲು ವಾದಿಸುವ ಸಮಯದಲ್ಲಿ ಹೇಗೆ ತಂತ್ರಜ್ಞಾನವನ್ನು ಉಪಯೋಗಿಸಬೇಕು ಎಂಬುದನ್ನು ಹೇಳಿಕೊಡಲಾಗುತ್ತಿದೆ. ಧ್ವನಿವರ್ಧಕಗಳನ್ನು ವಾದ್ಯಗಳಿಗೆ ಅನುಗುಣವಾಗಿ ಅಳವಡಿಸುವುದು. ಕಿಬೋರ್ಡ್‌ಗಳನ್ನು ಬಳಸುವುದರ ಕುರಿತು ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು. ಈ ವಿನೂತನಅಧ್ಯಯನ ವಿಷಯವನ್ನು ಪರಿಚಿಯಿಸುವುದರ ಸಲುವಾಗಿ ಉನ್ನತ ಶಿಕ್ಷಣ ಸಚಿವರುಅಭಿನಂದನೆ ಸೂಚಿಸಿದ್ದಾರೆ.ಇದರೊಂದಿಗೆ ಕೊyaಯಿಮತ್ತೂರು ವಿಶ್ವವಿದ್ಯಾಲಯವು ಈ ಕೋರ್ಸ್‌ನ್ನುಆರಂಭಿಸಲು ತೀರ್ಮಾನಿಸಿದೆ.

ಸಾಕಷ್ಟು ಹೊಸ ರೀತಿಯ ಕೋರ್ಸ್ ಪರಿಚಯಿಸಲಾಗಿದೆ

ಸಾಕಷ್ಟು ಹೊಸ ರೀತಿಯ ಕೋರ್ಸ್ ಪರಿಚಯಿಸಲಾಗಿದೆ

ಡಿಪ್ಲೊಮೋ, ಪದವಿ ಹಾಗೂ ಸ್ನಾತಕೋತ್ತರ ತರಗತಿಗಳಿಗೆ ಐಚ್ಛಿಕ ವಿಷಯಗಳನ್ನು ಅಳವಡಿಸಲಾಗಿದೆ. ಕರ್ನಾಟಕ ಸಂಗೀತ, ಸುಗಮ ಸಂಗೀತ, ಹಿಂದೂಸ್ತಾನಿ ಸಂಗೀತ, ನಾಟಕ, ತಬಲ, ರಂಗಭೂಮಿ, ಕೊಳಲು, ಭರತನಾಟ್ಯ ಮುಂತಾದವುಗಳು ಮುಖ್ಯ ಅಧ್ಯಯನ ವಿಷಯಗಳಾಗಿವೆ ಎಂದರು. ಇದರೊಂದಿಗೆ ಕಲಾಭಿಮಾನಿಗಳಿಗಾಗಿ ಸಂಜೆಯ ತರಗತಿಗಳನ್ನು ನಡೆಸಲಾಗುತ್ತದೆ .ಇದುಆರು ತಿಂಗಳ ಕೋರ್ಸ್‌ಆಗಿದ್ದು, ಸರ್ಟಿಫಿಕೇಟ್ ನೀಡುವುದರಿಂದ ಸಾಕಷ್ಟು ಕಲಾಸಕ್ತರು ನೊಂದಣಿ ಮಾಡಿಕೊಳ್ಳತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

400 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ

400 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ

ವಿಶ್ವವಿದ್ಯಾಲಯದಲ್ಲಿ ಸುಮಾರು 400 ವಿದ್ಯಾರ್ಥಿಗಳು ಅಭ್ಯಾಸನಿರತರಾಗಿದ್ದಾರೆ. ಅವರಿಗೆ ಅನೂಕೂಲವಾಗುವಂತೆ ನೂತನ ಸಂಗೀತ ಅಧ್ಯಯನ ಕೇಂದ್ರದ ನಿರ್ಮಾಣ ಪ್ರಾರಂಭವಾಗಿದೆ ಎಂದರು.ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸಲು ವೀಣೆಯಾಕರದ ಕಟ್ಟಡ ನಿರ್ಮಿಸಲು ತೀರ್ಮಾನ ಮಾಡಲಾಗಿದೆ. ಸುಮಾರು 57 ಕೋಟಿ, 47 ಲಕ್ಷವೆಚ್ಚದಯೋಜನೆಇದಾಗಿದ್ದು, ಅಧ್ಯಯನಕೇಂದ್ರದ ಸುತ್ತಮುತ್ತ ಉದ್ಯಾನವನ ಮಾಡಲಾಗುತ್ತಿದೆ. ಇದರ ಮಧ್ಯೆ ಗಾನಕೋಗಿಲೆ ಗಂಗೂಬಾಯಿ ಹಾನಗಲ್ ಅವರ ಪ್ರತಿಮೆಯನ್ನು ನಿರ್ಮಿಸು ಯೋಜನೆಯನ್ನು ಹಾಕಿಕೊಂಡಿದ್ದೇವೆ. ಹಾಗೇ ಕಟ್ಟಡದ ಗೋಡೆಯ ಮೇಲೆ ಸಂಗೀತ ದಿಗ್ಗಜರುಗಳ ಭಾವಚಿತ್ರವನ್ನು ಚಿತ್ರಿಸುವ ಯೋಚನೆ ಮಾಡಲಾಗಿದೆ.

English summary
Lalitha Academy vice chancellor Suvarnamangala Shankar Interview
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X