ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಕನ್ನಡ ಕಟ್ಟೆ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್: ಸಂದರ್ಶನ

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ನವೆಂಬರ್, 04: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿರುವ ಮನುಕುಲ ಹಾಗೂ ಅದರಲ್ಲಿನ ಜೀವಜಾಲ ಉಳಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಸಲುವಾಗಿ ರಾಜೋತ್ಸವ ಪ್ರಶಸ್ತಿಗಳನ್ನು ಮರಳಿಸುವ ಚಿಂತನೆ ನಡೆದಿದೆ ಎಂದು ಕನ್ನಡ ಕಟ್ಟೆ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಘೋಷಿಸಿದ್ದಾರೆ.

ನೇತ್ರಾವತಿ ಯೋಜನೆಯನ್ನು ಕೈಬಿಡುವ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಲು ಸರ್ಕಾರಕ್ಕೆ ಮೂರು ತಿಂಗಳು ಅವಧಿ ನೀಡುತ್ತೇವೆ. ಆದರೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, 2016ರ ಗಣರಾಜೋತ್ಸವದಂದು ರಾಜ್ಯೋತ್ಸವ ಪ್ರಶಸ್ತಿಗಳನ್ನು ವಾಪಾಸು ಮಾಡಲು ಪ್ರಶಸ್ತಿ ಪುರಸ್ಕೃತರು ನಿರ್ಧರಿಸಿದ್ದಾರೆ ಎಂದು ಅಣ್ಣಯ ಕುಲಾಲ್ ಒನ್ ಇಂಡಿಯಾದ ಜೊತೆ ತಮ್ಮ ಕೆಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.[ಪ್ರಶಸ್ತಿ ವಾಪಸ್ ಮಾಡಿ ಅವಮಾನಿಸಲಾರೆ : ಕಮಲ್ ಹಾಸನ್ ]

Interview : Annaya Kulal, President of Kannada Katte committee at Mangaluru

ನೇತ್ರಾವತಿ ಬತ್ತಿದರೆ ಇಡೀ ಜಿಲ್ಲೆಯ ಜನಜೀವನವೇ ನಾಶವಾಗುತ್ತದೆ. ಅಂಥ ಸ್ಥಿತಿಯಲ್ಲಿ ಪ್ರಶಸ್ತಿಗಳನ್ನು ಇಟ್ಟುಕೊಂಡು ಸಾಧಿಸಬೇಕಾಗಿರುವುದು ಏನು?

ಯಾವುದೋ ಕಾರಣಕ್ಕೆ ಪ್ರಶಸ್ತಿ ಮರಳಿಸುವ ಬದಲು ಜಿಲ್ಲೆಯ ಜನಜೀವನ ಉಳಿಸಲು ಒತ್ತಾಯಿಸುವ ಸಲುವಾಗಿ ಪ್ರಶಸ್ತಿ ವಾಪಾಸು ಮಾಡಿದರೆ ತಪ್ಪೆನಿಸುವುದಿಲ್ಲ. ಹಾಗಾಗಿ ನಾನು ಸಾಹಿತಿಗಳೊಂದಿಗೆ ಚರ್ಚೆ ನಡೆಸಿ ಸಲಹೆ ನೀಡಿದೆ. ಎಲ್ಲರೂ ನನ್ನ ಸಲಹೆಗೆ ಒಪ್ಪಿಗೆ ಸೂಚಿಸಿದ್ದಾರೆ. ನಾನು ಹಾಗೂ ಉಳ್ಳಾಲ ನೇತ್ರಾವತಿ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿಯವರು ಪ್ರಶಸ್ತಿ ಹಿಂದಿರುಗಿಸಲು ಈಗಾಗಲೇ ನಿರ್ಧರಿಸಿದ್ದೇವೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮನಸ್ಕ ಹೋರಾಟಗಾರರ ಬೆಂಬಲ ಪಡೆಯಲಾಗುವುದು. ರಾಜ್ಯಮಟ್ಟದ ರಾಜೋತ್ಸವ ಪ್ರಶಸ್ತಿ ಪಡೆದ ಗಣ್ಯರು, ಸಾಹಿತಿಗಳು, ಬುದ್ದಿಜೀವಿಗಳು ಕೂಡ ಈ ಅಭಿಯಾನಕ್ಕೆ ಕೈಜೋಡಿಸಬೇಕು. ಸಾಂಕೇತಿಕವಾಗಿ ಪ್ರಶಸ್ತಿಗಳನ್ನು ಮರಳಿಸುವ ಮೂಲಕ ಹೋರಾಟಕ್ಕೆ ನೈತಿಕ ಬೆಂಬಲ ನೀಡಬೇಕು ಎಂದು ಕೋರಿದರು.[ಪ್ರಶಸ್ತಿ ಹಿಂದಿರುಗಿಸುತ್ತಿರುವ ನಾಡಿನ ಸಾಹಿತಿಗಳಿಗೆ 6 ಪ್ರಶ್ನೆಗಳು]

ಕಳೆದ 40 ವರ್ಷಗಳಿಂದ ರಸ್ತೆ ಬದಿಯಲ್ಲಿ ಸಾಯುವ ಪ್ರಾಣಿ ಪಕ್ಷಿಗಳ ಅಂತ್ಯಸಂಸ್ಕಾರ ನೆರವೇರಿಸುವ ಕಾಯಕದಲ್ಲಿ ತೊಡಗಿರುವ ಉದಯ ಗಟ್ಟಿ ಅವರಿಗೆ "ನಾದಾನಾಯಕ" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಕಟ್ಟೆ ಸಂಪ್ರದಾಯದಂತೆ ಮುಂದಿನ ಒಂದು ವರ್ಷ ಕನ್ನಡ ಕಟ್ಟೆಯ ಎಲ್ಲ ಚಟುವಟಿಕೆಗಳು ಗಟ್ಟಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಕುಲಾಲ್ ಸಂತಸದ ವ್ಯಕ್ತಪಡಿಸಿದರು.

ಉದಯ ಗಟ್ಟಿ ಅವರು ಶಾಲಾ ದಿನಗಳಿಂದಲೂ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸೋಮೇಶ್ವರ ಪಂಚಾಯತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಇವರು, ಇಂದಿಗೂ ತಮ್ಮ ಕಾಯಕ ಮುಂದುವರಿಸಿಕೊಂಡು ಬರುತ್ತಿದ್ದಾರೆ ಇಂತವರಿಗೆ ನಮ್ಮ ಬೆಂಬಲ ಸದಾ ಇರಬೇಕು ಎಂದು ಹೇಳಿದರು.

English summary
Interview : Annaya Kulal, President of Kannada Katte committee at Mangaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X