ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಯೋಗ ದಿನಕ್ಕೆ ಪರಿಸರಸ್ನೇಹಿ ವಸ್ತುಗಳ ಬಿಡುಗಡೆ

|
Google Oneindia Kannada News

ಮಂಗಳೂರು ಜೂನ್ 21: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ಜಿಲ್ಲಾ ಆಯುಷ್ ಇಲಾಖೆಯ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಇಂದು ಸಾಮೂಹಿಕ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 ವೈರಲ್ ವಿಡಿಯೋ: ಜಮ್ಮುವಿನಲ್ಲಿ ಸೇನಾ ಶ್ವಾನಗಳಿಂದ ಯೋಗ ಪ್ರದರ್ಶನ ವೈರಲ್ ವಿಡಿಯೋ: ಜಮ್ಮುವಿನಲ್ಲಿ ಸೇನಾ ಶ್ವಾನಗಳಿಂದ ಯೋಗ ಪ್ರದರ್ಶನ

ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ರಘುವೀರ ಸೂಟರ್ ಪೇಟೆ, ಹೋಂಗಾರ್ಡ್ ದ.ಕ. ಜಿಲ್ಲಾ ಕಮಾಂಡೆಂಟ್ ಡಾ.ಮುರಳಿಮೋಹನ ಚೂಂತಾರು, ವಿವಿಧ ಕಾಲೇಜುಗಳ ಪ್ರತಿನಿಧಿಗಳಾದ ಸಂತೋಷ್, ಡಾ.ಪ್ರವೀಣ್ ಕುಮಾರ್, ವಿವೇಕ್, ಆಯುಷ್ ಸಂಘಟನೆಯ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಮತ್ತಿತರರು ಭಾಗಗವಹಿಸಿದರು.
ಆದರೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕಾರ್ಯಕ್ರಮಕ್ಕೆ ಗೈರಾಗಿರುವುದು ಎದ್ದು ಕಾಣುತ್ತಿತ್ತು.

ಅಂತಾರಾಷ್ಟ್ರೀಯ ಯೋಗ ದಿನ LIVE: ದೇಶಾದ್ಯಂತ ಯೋಗ ಹಬ್ಬದ ಸಂಭ್ರಮಅಂತಾರಾಷ್ಟ್ರೀಯ ಯೋಗ ದಿನ LIVE: ದೇಶಾದ್ಯಂತ ಯೋಗ ಹಬ್ಬದ ಸಂಭ್ರಮ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಮಾನಸಿಕ, ದೈಹಿಕ ಆರೋಗ್ಯಕ್ಕೆ ಮತ್ತು ಒತ್ತಡ ನಿವಾರಣೆಗೆ ಯೋಗ ಸಹಕಾರಿ ಎಂದು ಹೇಳಿದರು. ಸಾವಿರಾರು ವರ್ಷಗಳ ಹಿಂದೆ ಪತಂಜಲಿ ಮಹರ್ಷಿ ಮೂಲಕ ನಮ್ಮ ದೇಶಕ್ಕೆ ದೊರೆತ ಯೋಗ ಇಂದು ವಿಶ್ವ ಸಂಸ್ಥೆಯ ಮನ್ನಣೆ ಪಡೆದು ಪ್ರತೀ ವರ್ಷ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲಾಗುತ್ತಿರುವುದು ಭಾರತೀಯರು ಹೆಮ್ಮೆ ಪಡುವ ವಿಚಾರ ಎಂದರು.

International Yoga day celebrated in Mangaluru

ನಾಗ್ಪುರದಲ್ಲಿ ವಿಶ್ವದ ಅತೀ ಚಿಕ್ಕ ಮಹಿಳೆ ಜ್ಯೋತಿಯಿಂದ ಯೋಗಾಭ್ಯಾಸನಾಗ್ಪುರದಲ್ಲಿ ವಿಶ್ವದ ಅತೀ ಚಿಕ್ಕ ಮಹಿಳೆ ಜ್ಯೋತಿಯಿಂದ ಯೋಗಾಭ್ಯಾಸ

ಕಾರ್ಯಕ್ರಮದ ಅಂಗವಾಗಿ ಪರಿಸರಸ್ನೇಹಿ ವಸ್ತುಗಳನ್ನು ಬಿಡುಗಡೆ ಮಾಡಲಾಯಿತು. ಯೋಗ ಪ್ರದರ್ಶನದಲ್ಲಿ ಉತ್ತಮ ಸಾಧನೆ ತೋರಿದ ಆಳ್ವಾಸ್ ನ್ಯಾಚುರೋಪಥಿ ಕಾಲೇಜಿನ ವಿದ್ಯಾರ್ಥಿಗಳಾದ ವಿನಯಾ, ಸ್ವಾಸ್ತಿ ರೈ, ಶ್ರುತಿ ರಾವ್, ಅಮೃತಾ ಹಾಗೂ ಚೈತ್ರಾ ಶೆಟ್ಟಿಯವರನ್ನು ಗೌರವಿಸಿ ಅಭಿನಂದಿಸಲಾಯಿತು. ಬಳಿಕ ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಅವರ ಶಿಷ್ಯರಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.

English summary
On behalf of International Yoga day, Mangaluru constituency MLA's and district administration officials performed Yoga at Town hall in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X