ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯ ದೈವಾರಾಧ್ಯನಿಗೆ ಸರ್ಕಾರದ ಅಧಿಕೃತ ವೆಬ್ ಸೈಟ್‌ನಲ್ಲೇ ಅವಮಾನ; ಭುಗಿಲೆದ್ದ ಆಕ್ರೋಶ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್‌ 25; ಕರಾವಳಿಯ ಜನರು ಭಕ್ತಿಯಿಂದ ಪೂಜಿಸುವ ದೈವಾರಾಧನೆಗೆ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್‌ನಲ್ಲಿ ಅವಮಾನ ಮಾಡಲಾಗಿದೆ. ವೆಬ್ ಸೈಟ್‌ನಲ್ಲಿ ದೈವಾರಾಧನೆ ವಿಚಾರದಲ್ಲಿ ಅನುಚಿತವಾಗಿ ಬರೆಯಲಾಗಿದ್ದು, ತುಳುವರ ವ್ಯಾಪಕ ವಿರೋಧದ ಬಳಿಕ ಇಲಾಖೆ ವೆಬ್ ಸೈಟ್‌ನ ಪೇಜ್ ಅನ್ನೇ ಡಿಲೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ಅಧಿಕೃತ ವೆಬ್ ಸೈಟ್‌ನಲ್ಲಿ ಅನುಚಿತ ಬರಹ ವೈರಲ್ ಆಗುತ್ತಿದ್ದು, ಇದರ ವಿರುದ್ಧ ಜನಾಕ್ರೋಶವೂ ವ್ಯಕ್ತವಾಗುತ್ತಿದೆ.

ಮಂಗಳೂರು ದಸರಾ; ವಿದ್ಯುತ್ ದೀಪಗಳಿಂದ ಝಗಮಗಿಸಿದ ಕಡಲನಗರಿಮಂಗಳೂರು ದಸರಾ; ವಿದ್ಯುತ್ ದೀಪಗಳಿಂದ ಝಗಮಗಿಸಿದ ಕಡಲನಗರಿ

ತುಳುವರ ದೈವಾರಾಧ್ಯನಿಗೆ ಅವಮಾನ
ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್‌ನಲ್ಲಿ ದೈವಾರಾಧನೆಯ ಪರಿಕಲ್ಪನೆಯನ್ನೇ ಅಡಿಮೇಲು ಮಾಡಿದ್ದಾರೆ ಎಂದು ಆಕ್ರೋಶಗಳು ವ್ಯಕ್ತವಾಗುತ್ತಿವೆ. ಆಕ್ಷೇಪಾರ್ಹ ಪದ ಉಪಯೋಗಿಸಿರುವುದನ್ನು ತುಳುವಿನ ಟ್ರೋಲ್ ಪೇಜ್‌ನವರು ಟ್ರೋಲ್ ಮಾಡಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಪ್ರವಾಸೋದ್ಯಮ ಇಲಾಖೆಯು ವೆಬ್ ಸೈಟ್‌ನಲ್ಲಿನ 'ಭೂತ ಕೋಲ' ಪೇಜ್ ಅನ್ನು ಡಿಲಿಟ್ ಮಾಡಿದೆ.

Insult of Tuluva Gods on Government Website, Outrage

'ಆ' ಒಂದು ಟ್ವೀಟ್‌ನಿಂದ ಯಡವಟ್ಟು
ಭೂತಾರಾಧನೆ ಎಂಬ ತಲೆಬರಹದಲ್ಲಿರುವ ದೈವಾರಾಧನೆ ವಿಚಾರ ಟ್ರೋಲ್ ಆಗಿದೆ. ಇಲ್ಲಿ ಭೂತದ ಕೋಲ ಎಂಬ ಪದವು "ಭೂತದ ಕೊಳ" ಎಂದಾಗಿದೆ‌. ಅಲ್ಲದೆ ಭೂತಾರಾಧನೆಯನ್ನು ದೆವ್ವದ ಆರಾಧನೆ ಎಂದು ಬರೆಯಲಾಗಿದೆ. ಭೂತಗಳನ್ನು ಪ್ರತಿನಿಧಿಸುವ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಡ್ರಮ್‌ಗಳನ್ನು ಬಾರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಮೆರವಣಿಗೆ ಮಾಡುತ್ತಾರೆ. ಕತ್ತಿ ಮತ್ತು ಗಂಟೆಗಳೊಂದಿಗೆ ಕುಣಿಯುತ್ತ ನರ್ತಕಿ ತಾನು ಪ್ರತಿನಿಧಿಸುವ ದೆವ್ವದ ಅನುಕರಣೆಯಲ್ಲಿ ಸುತ್ತುತ್ತಾನೆ‌. ಉದ್ರಿಕ್ತವಾಗಿ ಮೇಲಕ್ಕೆ ಕೆಳಕ್ಕೆ ಹೆಜ್ಜೆ ಹಾಕುತ್ತಾನೆ ಎಂದು ಆಕ್ಷೇಪಾರ್ಹವಾಗಿ ಬರೆಯಲಾಗಿದೆ.

Insult of Tuluva Gods on Government Website, Outrage

ಕರಾವಳಿಯಲ್ಲಿ ಭುಗಿಲೆದ್ದ ಆಕ್ರೋಶ
ತುಳುವಿನ ಟ್ರೋಲ್ ಪೇಜ್ @Tuluvas speaks ಕರ್ನಾಟಕ ಸರ್ಕಾರದಿಂದ ತುಳುವರ ದೈವಕ್ಕೆ ಅವಮಾನ ಎಂದು ಈ ಬರಹದ ಪೇಜ್ ಅನ್ನು ಪೋಸ್ಟ್ ಮಾಡಿ ಟ್ರೋಲ್ ಮಾಡಿದೆ. ನಾವು ನಂಬುವ ದೈವಗಳನ್ನು, ಸತ್ಯಗಳನ್ನು ದೆವ್ವವೆಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ. ಅಲ್ಲದೆ ದೆವ್ವ?, ಕತ್ತಿ?, ಕೊಳ?, ಡ್ರಮ್, ನರ್ತಕಿ? ಎಂದು ಆಕ್ಷೇಪವುಳ್ಳ ಪದ ಬಳಕೆ ಮಾಡಿದೆ. ಈ ಟ್ರೋಲ್ ಪೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ವೆಬ್ ಸೈಟ್‌ನ ಪೇಜ್ ಟ್ರೋಲ್ ಆಗುತ್ತಿದ್ದಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಭೂತ ಕೋಲ ಎಂಬ ಪೇಜ್ ಅನ್ನು ಡಿಲಿಟ್ ಮಾಡಿದೆ ಎನ್ನಲಾಗಿದೆ.

ರಾಜ್ಯದ ಬಿಲ್ಲವ ಸಚಿವರು ಬ್ರಾಹ್ಮಣಶಾಹಿಗಳ ದಾಸರಾಗಿದ್ದಾರೆ; ಮಂಗಳೂರಿನಲ್ಲಿ ಪ್ರಣವಾನಂದ ಶ್ರೀ ಕಿಡಿರಾಜ್ಯದ ಬಿಲ್ಲವ ಸಚಿವರು ಬ್ರಾಹ್ಮಣಶಾಹಿಗಳ ದಾಸರಾಗಿದ್ದಾರೆ; ಮಂಗಳೂರಿನಲ್ಲಿ ಪ್ರಣವಾನಂದ ಶ್ರೀ ಕಿಡಿ

ದೈವಾರಾಧನೆಯ ಅರಿವೇ ಇಲ್ಲದ ವ್ಯಕ್ತಿಯಿಂದ ಈ ಬರಹವನ್ನು ಬರೆಯಲಾಗಿದೆ. ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್ ಅನ್ನು ನಂಬಿ ಕರಾವಳಿಗೆ ಬರುವ ಜನರು ಭೂತಾರಾಧನೆಯ ಪರಿಕಲ್ಪನೆಯನ್ನೇ ಅಪಾರ್ಥಮಾಡಿಕೊಳ್ಳುವ ಸಾಧ್ಯತೆಗಳಿವೆ. ಇಲಾಖೆ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ತುಳು ವಿದ್ವಾಂಸರಿಂದಲೇ ವೆಬ್ ಸೈಟ್‌ನಲ್ಲಿ ಕರಾವಳಿಯ ಸಂಸ್ಕೃತಿ ಬಗ್ಗೆ ಬರೆಯಲಿ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.

English summary
Gods of Tuluvas insulted on website of tourism department of Karnataka government. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X