India
 • search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ಪೋಸ್ಟ್; ಮುತಾಲಿಕ್, ಯಶ್ ಪಾಲ್ ತಲೆಗೆ ತಲಾ 20 ಲಕ್ಷ ಘೋಷಣೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂ8: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮುಖಂಡ ಹಾಗೂ ಶ್ರೀರಾಮಸೇನೆ ಮುಖ್ಯಸ್ಥರ ತಲೆ ಕಡಿದರೆ ತಲೆಗೆ ತಲಾ 20 ಲಕ್ಷ ಘೋಷಣೆ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಹಾಗೂ ಪ್ರಮೋದ್ ಮುತಾಲಿಕ್ ತಲೆ ಕಡಿದರೆ ಬಹುಮಾನ ಘೋಷಣೆ ಮಾಡಲಾಗಿದೆ.

ಇಸ್ಟಾಗ್ರಾಮ್‌ನಲ್ಲಿ ಮಾರಿಗುಡಿ ಪೇಜ್‌ನಲ್ಲಿ ಬಹಿರಂಗ ಬೆದರಿಕೆ ಹಾಕಲಾಗಿದ್ದು, ಪೇಜ್ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಲಾಗಿದೆ. ಉಡುಪಿಯಲ್ಲಿ ಹಿಜಾಬ್ ಸಂಘರ್ಷ ನಡೆದಾಗ ಯಶ್ ಪಾಲ್ ಸುವರ್ಣ ಸಿಎಫ್‌ಐ ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಎಂದಿದ್ದರು. ಹಿಜಾಬ್ ವಿರುದ್ಧದ ಕಾನೂನು ಹೋರಾಟದ ನೇತೃತ್ವ ವಹಿಸಿದ್ದರು.

ಆರ್‌ಎಸ್‌ಎಸ್‌ನ ಖಾಕಿ ಚಡ್ಡಿ, ಕರಿಟೋಪಿ ಹಿಟ್ಲರ್ ಆರ್ಮಿಯ ಸಮವಸ್ತ್ರ: ಬಿ.ಕೆ ಹರಿಪ್ರಸಾದ್ ವಾಗ್ದಾಳಿಆರ್‌ಎಸ್‌ಎಸ್‌ನ ಖಾಕಿ ಚಡ್ಡಿ, ಕರಿಟೋಪಿ ಹಿಟ್ಲರ್ ಆರ್ಮಿಯ ಸಮವಸ್ತ್ರ: ಬಿ.ಕೆ ಹರಿಪ್ರಸಾದ್ ವಾಗ್ದಾಳಿ

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಸೀದಿಗಳಲ್ಲಿನ ಮೈಕ್ ತೆರವು ಸೇರಿದಂತೆ ವಿವಿಧ ವಿಚಾರಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಕಾಪು ಬಿಜೆಪಿ ಯುವ ಮೋರ್ಚಾ ಲಿಖಿತ ರೂಪದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

ಕಾಲೇಜಿನ ವಿರುದ್ಧವೇ ಪತ್ರಿಕಾಗೋಷ್ಠಿ: ಹಿಜಾಬ್ ವಿದ್ಯಾರ್ಥಿನಿಯರಿಗೆ ನೋಟೀಸ್ಕಾಲೇಜಿನ ವಿರುದ್ಧವೇ ಪತ್ರಿಕಾಗೋಷ್ಠಿ: ಹಿಜಾಬ್ ವಿದ್ಯಾರ್ಥಿನಿಯರಿಗೆ ನೋಟೀಸ್

ನಾನು ದುಡಿದು ತಿನ್ನುವವನು

ನಾನು ದುಡಿದು ತಿನ್ನುವವನು

ಬೆದರಿಕೆ ಕುರಿತು ಬಿಜೆಪಿ ಮುಖಂಡ ಮಾತನಾಡಿದ್ದು, "ಈ ಪೇಜ್ ಬಗ್ಗೆ ತಲೆ‌ ಕೆಡಿಸಿಕೊಳ್ಳಲ್ಲ ಆದರೆ ನನ್ನ ತಲೆಗೆ ಬೆಲೆ ಕಟ್ಟಿದವನ ಯಾರೆಂದು ಗೊತ್ತಾದರೆ ಸಂತೋಷವಾಗುತ್ತದೆ. ನನ್ನ ಬೆಲೆ, ಬೆದರಿಕೆ ಹಾಕಿದವನಿಗೆ ಗೊತ್ತಿಲ್ಲ. ಹಾಗಾಗಿ‌ ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಅನ್ಯಮಾರ್ಗದಲ್ಲಿ ಹೋದವನಲ್ಲ. ನಾನು ದುಡಿದು ತಿನ್ನುವವನು. ನಾನು ದೇಶ, ರಾಷ್ಟ್ರೀಯತೆ ವಿಚಾರದಲ್ಲಿ ಹಿಂದೆ ಮುಂದೆ ನೋಡುವುದಿಲ್ಲ, ರಾಜಿ ಮಾಡುವ ಪ್ರಶ್ನೆಯೇ ಇಲ್ಲ. ಈ ಹಿಂದಿನಿಂದಲೂ ಟೀಕೆ, ಬೆದರಿಕೆ, ನಿಂದನೆ, ಅಪಪ್ರಚಾರ ಮೆಟ್ಟಿ ನಿಂತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಈ ವಿಚಾರಕ್ಕೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದರು.

ನಾನು ಹಿಂದುತ್ವ ಪರವಾಗಿ, ಸಂಘಟನಾತ್ಮಕವಾಗಿ ಬೆಳೆದು ಬಂದವನು

ನಾನು ಹಿಂದುತ್ವ ಪರವಾಗಿ, ಸಂಘಟನಾತ್ಮಕವಾಗಿ ಬೆಳೆದು ಬಂದವನು

"ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಜಾಬ್ ಮಾರಕ ಎಂದು ಹೋರಾಟ ಮಾಡಿದ್ದೇನೆ. ಹಿಜಾಬ್ ವಿಚಾರವಾಗಿ ಬೆದರಿಕೆ ಹಾಕಲಿ, ಹಾಕದೆ ಇರಲಿ ರಾಜಿ ಮಾಡುವ ಪ್ರಶ್ನೆಯೇ ಇಲ್ಲ. ಇಂತಹ ಬೆದರಿಕೆಯಿಂದ ನನ್ನ ವೇಗಕ್ಕೆ ತಡೆಯಾಗುತ್ತದೆ ಅಂತಾ ಅಂದುಕೊಂಡಿದ್ದರೆ ಆ ಆಲೋಚನೆ ಬದಿಗಿಡಿ. ಇಂತಹ ಬೆದರಿಕೆ ಹಿನ್ನೆಲೆ ಗನ್ ಮ್ಯಾನ್ ಕೇಳುವ ಪ್ರಮೇಯ ಇಲ್ಲ. ನಾನು ಹಿಂದುತ್ವ ಪರವಾಗಿ, ಸಂಘಟನಾತ್ಮಕವಾಗಿ ಬೆಳೆದು ಬಂದವನು. ಸಾಮಾಜಿಕ ‌ಜೀವನದಲ್ಲಿ ಬಹಳಷ್ಟು ಸಂಘ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂತಹ ಪೇಜ್‌ಗಳಿಂದ ನಾನು ಹೆದರಿ ಮನೆಯಲ್ಲಿ ಕೂರುವವನಲ್ಲ" ಎಂದು ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ಹಿಂದೂ ನಾಯಕ ಯಶಪಾಲ್ ಸುವರ್ಣಗೆ ಬೆದರಿಕೆ ವಿಚಾರವಾಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಿಂದೂ ಯುವ ಸೇನೆ ಮನವಿ ಮಾಡಿದೆ. ಬೆದರಿಕೆ ಹಾಕಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಿಂದೂ ಕಾರ್ಯಕರ್ತರು ಮನವಿ ನೀಡಿದ್ದಾರೆ.

ಹೊರ ರಾಜ್ಯ ಹೊರದೇಶದಲ್ಲಿ ಕುಳಿತು ಈ ಪೇಜ್ ಸೃಷ್ಟಿಸಿರಬಹುದು

ಹೊರ ರಾಜ್ಯ ಹೊರದೇಶದಲ್ಲಿ ಕುಳಿತು ಈ ಪೇಜ್ ಸೃಷ್ಟಿಸಿರಬಹುದು

"ಹೊರ ರಾಜ್ಯ ಹೊರದೇಶದಲ್ಲಿ ಕುಳಿತು ಈ ಪೇಜ್ ಸೃಷ್ಟಿಸಿರಬಹುದು. ಆದರೆ ನಮ್ಮ ಜಿಲ್ಲೆಯಲ್ಲಿದ್ದು ಸಂದೇಶ ರವಾನಿಸುವವರನ್ನು ಪತ್ತೆ ಹಚ್ಚುವ ಕೆಲಸ‌ ಆಗಬೇಕು. ಇಂತಹ ಪೇಜ್‌ಗಳೊಂದಿಗೆ ತೊಡಗಿಸಿ ಕೊಂಡವರು ನಮ್ಮ ಊರಿನಲ್ಲಿದ್ದರೆ ಮಾರಕ. ಇಂಥವರಿಂದ ನಮ್ಮ ಕಾರ್ಯಕರ್ತರಲ್ಲಿ ಹಾಗೂ ಅವರ ಕುಟುಂಬಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಮನೆಯಲ್ಲೇ‌ ಮನಸ್ಥಾಪ ಸೃಷ್ಟಿಯಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಆಗಬಹುದು. ಹೀಗಾಗಿ ಮಾರಿಗುಡಿ ಪೇಜ್ ಹಿಂದೆ ಇರುವವರನ್ನ ಕಡಿವಾಣ ಹಾಕಬೇಕಿದೆ. ಜಮ್ಮು ಕಾಶ್ಮೀರದ ಉಗ್ರಗಾಮಿ ಬೆಂಗಳೂರಿನಲ್ಲಿ ಹತ್ತು ವರ್ಷದ ಹಿಂದೆ ರಿಕ್ಷಾ ಓಡಿಸುತ್ತಿದ್ದ. ಹೀಗೆ ಗಡ್ಡ ಬಿಟ್ಟು, ಟೋಪಿ ಹಾಕಿ ನಾಟಕ ಮಾಡುವವರು ಇಂತಹ ಪೇಜ್ ಹಿಂದೆ ಇರಬಹುದು. ಹಿಂದುಗಳಿಗೆ ಬೆದರಿಕೆ ಹಾಕಿ ಅವರ ವೇಗ ನಿಯಂತ್ರಣ ಮಾಡಿ ಅವರ ಬೇಳೆ ಬೇಯಿಸುವವರು ಇರಬಹುದು. ಉಡುಪಿ ಜಿಲ್ಲೆ ಸಂಘಟನಾತ್ಮಕ ವಾಗಿದೆ . ಯಾವ ಸಂದರ್ಭದಲ್ಲಿ ಹೇಗೆ ಉತ್ತರ ಕೊಡಬೇಕೆಂದು ಗೊತ್ತಿದೆ" ಎಂದು ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು: ಮಂಜು

ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು: ಮಂಜು

ಈ ಬಗ್ಗೆ ಹಿಂದೂ ಯುವಸೇನೆ ಮುಖಂಡ ಮಂಜು ಕೊಳ ಹೇಳಿಕೆ ನೀಡಿದ್ದು, "ಯಶ್‌ಪಾಲ್ ಸುವರ್ಣ ಬಾಲ್ಯದಿಂದಲೇ ಹಿಂದುತ್ವಕ್ಕಾಗಿ ಹೋರಾಡಿದವರು. ಇದು ಯಶ್ ಪಾಲ್ ಸುವರ್ಣಗೆ ಹಾಕಿದ ಬೆದರಿಕೆಯಲ್ಲ. ಹಿಂದೂ ಸಮಾಜಕ್ಕೆ ಹಾಕಿರುವ ಬೆದರಿಕೆ ಎಂದು ಭಾವಿಸುತ್ತೇವೆ. ಅಷ್ಟು ಸುಲಭವಾಗಿ ಈ ವಿಚಾರ ಕೈಬಿಡಲು ಸಾಧ್ಯವಿಲ್ಲ. ಇಂತಹ ಬೆದರಿಕೆಯಿಂದ ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಧಕ್ಕೆ ಆಗುತ್ತದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು.

ಸಾಮಾಜಿಕ ಜಾಲತಾಣ ಮೂಲಕ ಬೆದರಿಕೆ ಹಾಕಿದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಹೇಳಿದ್ದಾರೆ. ಹಿಜಾಬ್ ವಿಷಯದಲ್ಲಿ ಯಶ್ ಪಾಲ್ ಸುವರ್ಣ ಮುಂಚೂಣಿ ಕೆಲಸ ಮಾಡಿದ್ದರು. ಕರಾವಳಿ ಭಾಗದಲ್ಲಿ ಹಿಂದುತ್ವದ ಶಕ್ತಿ ಯಶ್ ಪಾಲ್. ಈ ರೀತಿಯ ಪೊಳ್ಳು ಬೆದರಿಕೆಗೆ ಯಶ್‌ಪಾಲ್ ಸುವರ್ಣ ಬೆದರುವುದಿಲ್ಲ. ಈ ಹಿಂದೆಯೂ ಹಲವಾರು ಬೆದರಿಕೆ ಬಂದಿದೆ. ಯಶ್ ಪಾಲ್ ಸುವರ್ಣ ರಕ್ಷಣೆಗೆ ಹಿಂದೂ ಕಾರ್ಯಕರ್ತರು ಯಾವಾಗಲೂ ಸಿದ್ಧರಿದ್ದಾರೆ" ಎಂದರು.

   ರೋಹಿತ್ ಇಲ್ದಿದ್ರೂ ನಾವು ಗೆಲ್ತೀವಿ: ರಾಹುಲ್ ದ್ರಾವಿಡ್ ನಿಷ್ಠುರ ನುಡಿ | Oneindia Kannada
   English summary
   Social media post viral that called for beheading of BJP leader Yashpal Suvarna and Sri Ram Sena chief Pramod Muthalik for money. Complaint filed in Udipi police station.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X