ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿನಿಮಾ ಸ್ಫೂರ್ತಿ: ಮಂಗಳೂರು ಶ್ವಾನ ದಳದ ನಾಯಿಮರಿಗೆ ಚಾರ್ಲಿ ಹೆಸರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಚಾರ್ಲಿ ಸಿನಿಮಾ ದೇಶಾದ್ಯಂತ ಬಿಡುಗಡೆಗೊಂಡು ಪ್ರೇಕ್ಷಕರ ಗಮನ ಸೆಳೆದಿದೆ. ಧರ್ಮ ಮತ್ತು ಚಾರ್ಲಿ ನಡುವಿನ ಕಥಾಹಂದರ ಸಿನಿ ಪ್ರೇಕ್ಷಕರ ಕಣ್ಣಾಲಿಗಳನ್ನು ತೇವಗೊಳಿಸಿದೆ. ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾದ ಚಾರ್ಲಿ ಸಿನಿಮಾ ಮಂಗಳೂರು ಪೊಲೀಸ್ ಇಲಾಖೆಗೂ ಸ್ಫೂರ್ತಿ ತಂದಿದೆ. ಚಾರ್ಲಿಯ ಪ್ರೇರಣೆಯಿಂದ ಮಂಗಳೂರು ಶ್ವಾನ ದಳದ ಮೂರು ತಿಂಗಳ ಶ್ವಾನ ಮರಿಗೆ ಚಾರ್ಲಿ ಎಂದು ನಾಮಕರಣ ಮಾಡಲಾಗಿದೆ.

ರಕ್ಷಿತ್ ಶೆಟ್ಟಿ ಹೊಸ ಸಿನಿಮಾ 'ಚಾರ್ಲಿ 777' ಗುರುವಾರ ಮಂಗಳೂರಿನಲ್ಲಿ ಪ್ರೀಮಿಯರ್ ಶೋ ನಡೆದಿತ್ತು‌. ಈ ಸಿನಿಮಾದಿಂದ ಸ್ಪೂರ್ತಿ ಪಡೆದು ಮಂಗಳೂರು ಪೊಲೀಸ್ ಶ್ವಾನದಳದ ನಾಯಿಗೆ ನಾಮಕರಣ ಮಾಡಲಾಗಿದೆ.

ಕತ್ತೆಗೊಂದು ಕಾಲ‌; ಕತ್ತೆ ಹಾಲಿಗೆ ಭಾರೀ ಡಿಮಾಂಡ್!ಕತ್ತೆಗೊಂದು ಕಾಲ‌; ಕತ್ತೆ ಹಾಲಿಗೆ ಭಾರೀ ಡಿಮಾಂಡ್!

ನಿನ್ನೆ ಮಂಗಳೂರು ಪೊಲೀಸರು 'ಚಾರ್ಲಿ 777' ಸಿನಿಮಾ ಪ್ರೀಮಿಯರ್ ಶೋ ವೀಕ್ಷಣೆ ಮಾಡಿದ್ದಾರೆ. ಈ ಸಿನಿಮಾದಲ್ಲಿಯೂ ಲ್ಯಾಬ್ರಡಾರ್ ರಿಟ್ರೈವರ್ ತಳಿಯ ನಾಯಿಯೂ ಪ್ರಮುಖ ಪಾತ್ರ ವಹಿಸಿದೆ. ಈ ಮೂಲಕ ಮನುಷ್ಯ ಹಾಗೂ ಶ್ವಾನದ ನಡುವಿನ ಸಂಬಂಧವನ್ನು ಸೊಗಸಾಗಿ ಚಿತ್ರಿಸಲಾಗಿದೆ. ಇದೇ ಸ್ಪೂರ್ತಿಯಿಂದ ಮಂಗಳೂರು ಪೊಲೀಸ್ ಇಲಾಖೆ ಇಂದು ಈ ನಾಯಿಮರಿಗೆ ಚಾರ್ಲಿ ಎಂದು ನಾಮಕರಣ ಮಾಡಲಾಗಿದೆ.

Inspired by Kannada Movie Mangaluru Police Named Charlie to a 3 Months Puppy

3 ತಿಂಗಳ ಈ ಲ್ಯಾಬ್ರಡಾರ್ ರಿಟ್ರೈವರ್ ಶ್ವಾನವನ್ನು ಬಂಟ್ವಾಳದಿಂದ ಖರೀದಿಸಲಾಗಿದೆ. 2022 ಮಾರ್ಚ್ 16ಗೆ ಹುಟ್ಟಿದ ಈ ಶ್ವಾನವನ್ನು ಪೊಲೀಸ್ ಇಲಾಖೆಗಾಗಿ 20,000 ರೂ. ನೀಡಿ ಖರೀದಿಸಲಾಗಿದೆ‌‌. ಮುಂದೆ 3-4 ತಿಂಗಳ ಬಳಿಕ ಬೆಂಗಳೂರು ಸೌತ್ ಸಿಆರ್ ನಲ್ಲಿ ಆರು ತಿಂಗಳ ಕಾಲ ಈ ಶ್ವಾನಕ್ಕೆ ತರಬೇತಿ ನೀಡಲಾಗುತ್ತದೆ. ಬಳಿಕ ಈ ಶ್ವಾನವು ಬಾಂಬ್ ನಿಷ್ಕ್ರಿಯ ಹಾಗೂ ಪತ್ತೆ ಮಾಡಲು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುತ್ತದೆ.

ವಿಡಿಯೋ: ಒರಾಂಗೂಟಾನ್‌ನೊಂದಿಗೆ ಚೆಲ್ಲಾಟವಾಡಲು ಹೋದವನಿಗೆ ಆಗಿದ್ದೇನು?ವಿಡಿಯೋ: ಒರಾಂಗೂಟಾನ್‌ನೊಂದಿಗೆ ಚೆಲ್ಲಾಟವಾಡಲು ಹೋದವನಿಗೆ ಆಗಿದ್ದೇನು?

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಂಗಳೂರು ಸಿಎಆರ್ ಎಸಿಪಿ ಎಂ.ಎ ಉಪಾಸೆ, ಚಾರ್ಲಿ ಅಂತಾ ನಾಮಕರಣ ಮಾಡುವ ಮೂಲಕ ಶ್ವಾನ ಮರಿಯನ್ನು ಇಲಾಖೆಗೆ ಸೇರಿಸಿದ್ದೇವೆ. ಗುರುವಾರ ರಾತ್ರಿ ಎಲ್ಲರೂ ಚಾರ್ಲಿ ಚಿತ್ರ ವೀಕ್ಷಣೆ ಮಾಡಿದ್ದೇವೆ. ಹೀಗಾಗಿ ಚಿತ್ರದ ಸ್ಫೂರ್ತಿ ಪಡೆದು ಚಾರ್ಲಿ ಹೆಸರನ್ನು ಇಲಾಖೆಯ ಶ್ವಾನದ ಮರಿಗೆ ಹೆಸರು ಇಟ್ಟಿದ್ದೇವೆ. ಶ್ವಾನದಳದಲ್ಲಿ ಶ್ವಾನವನ್ನು ಮೂರು ವಿಭಾಗಗಳ ತರಬೇತಿ ನೀಡುತ್ತೇವೆ. ಸದ್ಯ ಚಾರ್ಲಿಗೆ ಬಾಂಬ್ ಪತ್ತೆ ದಳದ ತರಬೇತಿಯನ್ನು ನೀಡುತ್ತೇವೆ ಎಂದು ಉಪಾಸೆ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಮಂಗಳೂರು ಶ್ವಾನದಳದಲ್ಲಿ ಐದಕ್ಕೂ ಹೆಚ್ಚು ಶ್ವಾನಗಳಿವೆ. ಮೂರು ತಿಂಗಳ ಹಿಂದೆ ಹುಟ್ಟಿದ ಹೆಣ್ಣು ಶ್ವಾನವನ್ನು ಈಗ ಇಲಾಖೆಗೆ ಸೇರಿಸಿದ್ದೇವೆ‌‌. ಶ್ವಾನದಳ ಸಿಬ್ಬಂದಿಯ ಆಸೆಯ ಪ್ರಕಾರ ಈ ಶ್ವಾನಕ್ಕೆ ಚಾರ್ಲಿ ಅಂತಾ ಹೆಸರಿಟ್ಟಿದ್ದೇವೆ ಅಂತಾ ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

Recommended Video

Hardik Pandyaಗೆ ಟಾಂಗ್ ಕೊಟ್ಟ ಆಶಿಶ್ ನೆಹ್ರಾ | Oneindia Kannada

English summary
Inspired by 'Charlie 777' movie, Mangaluru police dog squad named 'charlie 777' to 3 month old puppy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X