ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ಬೆಂಗಳೂರು ನಡುವೆ ಮತ್ತೊಂದು ನೂತನ ವಿಮಾನ ಸೇವೆ

|
Google Oneindia Kannada News

ಮಂಗಳೂರು, ಮಾರ್ಚ್ 19: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಹೌದು, ಮಂಗಳೂರು ಮತ್ತು ಬೆಂಗಳೂರು ನಡುವೆ ಇನ್ನೊಂದು ವಿಮಾನಯಾನ ಸೇವೆ ಸದ್ಯದಲ್ಲೇ ಆರಂಭಗೊಳ್ಳಲಿದೆ. ಇಂಡಿಗೋ ಸಂಸ್ಥೆ ಇದೇ ಬರುವ ಏಪ್ರಿಲ್‌ನಿಂದ ಮಂಗಳೂರು-ಬೆಂಗಳೂರು ನಡುವೆ ವಿಮಾನ ಸೇವೆ ಆರಂಭಿಸಲಿದೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲೇ ಇಂಡಿಗೋ ವಿಮಾನ ದುರಸ್ತಿ ಘಟಕಕೆಂಪೇಗೌಡ ಏರ್‌ಪೋರ್ಟ್‌ನಲ್ಲೇ ಇಂಡಿಗೋ ವಿಮಾನ ದುರಸ್ತಿ ಘಟಕ

ಭಾರತದ ಆನ್‌-ಟೈಮ್‌ ಪರ್ಫಾರ್ಮರ್ ಇಂಡಿಗೊ, ತನ್ನ ಗ್ರಾಹಕ ಅನುಭವವನ್ನು ತನ್ನ ಜಾಲಕ್ಕೆ 14 ಹೊಸ ವಿಮಾನಗಳನ್ನು ಸೇರ್ಪಡೆ ಮಾಡುತ್ತಿದ್ದು, ಅದರಲ್ಲಿ ಮಂಗಳೂರು- ಬೆಂಗಳೂರು ಮಾರ್ಗವೂ ಸೇರಿದೆ.ಇಂಡಿಗೋ ಚೆನ್ನೈ-ರಾಯಪುರ, ಹೈದರಾಬಾದ್‌-ಗೋರಖ್ ಪುರ ಮತ್ತು ಕೋಲ್ಕತಾ-ಗೋರಖ್ ಪುರಗಳ ನಡುವೆ ತನ್ನ ಮೊದಲ ವಿಮಾನವನ್ನು ಆರಂಭಿಸಲಿದೆ.

 ಜ.25ರಿಂದ ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೊಂದು ವಿಮಾನ ಹಾರಾಟ ಜ.25ರಿಂದ ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೊಂದು ವಿಮಾನ ಹಾರಾಟ

ಹೊಸ ವಿಮಾನ ಮುಂಜಾನೆ 7:30ಕ್ಕೆ ಬೆಂಗಳೂರಿನಿಂದ ಹೊರಟು 8:40ಕ್ಕೆ ಮಂಗಳೂರು ತಲುಪಲಿದೆ. ಬಳಿಕ 9:30ಕ್ಕೆ ಮಂಗಳೂರಿನಿಂದ ಹೊರಟು 10:30ಕ್ಕೆ ಬೆಂಗಳೂರು ತಲುಪಲಿದೆ.

IndiGo announced new flight services

ಬೆಂಗಳೂರು ಮಂಗಳೂರು ವಿಮಾನ ಸೇವೆ ಮಾತ್ರವಲ್ಲದೇ, ಪ್ರಸ್ತುತ ಚೆನ್ನೈ- ತಿರುವನಂತಪುರ, ಬೆಂಗಳೂರು- ಉದಯಪುರ ಮತ್ತು ಬೆಂಗಳೂರು- ಚೆನ್ನೈ ಮಾರ್ಗಗಳಿಗೆ ಹೆಚ್ಚು ವಿಮಾನಗಳ ಸೇರ್ಪಡೆ ಮಾಡಲಿದೆ. ಎಲ್ಲ ಹೊಸ ಸೇವೆಗಳು ಏಪ್ರಿಲ್‌ನಿಂದ ಪ್ರಾರಂಭಗೊಳ್ಳಲಿವೆ.
English summary
Low cost passenger carrier IndiGo announced new flight services. IndiGo will operate flight between Mangaluru- Bangaluru from April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X