India
 • search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಸಮುದ್ರದಲ್ಲಿ ಸಿಲುಕಿದ ಹಡಗು; 15 ಸಿಬ್ಬಂದಿ ರಕ್ಷಣೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 22: ತಾಂತ್ರಿಕ ದೋಷದಿಂದ ಸರಕು ಸಾಗಾಟದ ಹಡಗು ಅರಬ್ಬೀ ಸಮುದ್ರದಲ್ಲಿ ಮುಳುಗುವ ಭೀತಿ ಎದುರಿಸುತ್ತಿರುವ ಘಟನೆ ಮಂಗಳೂರಿನ 5.6 ನಾಟೆಕಲ್ ಮೈಲ್ ದೂರದ ಆಳ ಸಮುದ್ರದಲ್ಲಿ ನಡೆದಿದೆ. ಮಲೇಷ್ಯಾದಿಂ‌ದ ಲೆಬನಾಲ್‌ಗೆ ಸಾಗುತ್ತಿದ್ದ ಪ್ರಿನ್ಸೆಸ್ ಮಿರಾಲ್ ಎಂಬ ಹೆಸರಿನ ಹಡಗು ಇದಾಗಿದ್ದು, ಹಡಗಿನಲ್ಲಿ ರಂಧ್ರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವಘಢ ಸಂಭವಿಸಿದೆ. ಹಡಗಿನಲ್ಲಿದ್ದ 15 ಮಂದಿ ನಾವಿಕರನ್ನು ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ.

ಈ ನೌಕೆ ಲೆಬನಾಲ್ ದೇಶದಿಂದ ಮಲೇಶ್ಯಾದಿಂದ ಉಕ್ಕಿನ ಕಾಯಿಲ್ ಗಳನ್ನು ಸಾಗಿಸುತಿತ್ತು. ಉಳ್ಳಾಲ ಕಡಲಕಿನಾರೆಯಿಂದ ಐದು ನಾಟಿಕಲ್ ಮೈಲ್ ದೂರದಲ್ಲಿ ಸಂಚಾರ ಮಾಡುತ್ತಿದ್ದ ಸಂಧರ್ಭದಲ್ಲಿ ಹಡಗಿನಲ್ಲಿ ರಂಧ್ರ ಕಾಣಿಸಿಕೊಂಡು ತಳಸ್ಪರ್ಶ ಮಾಡಿ ಮುಳುಗುವ ಭೀತಿ ಎದುರಿಸಿದೆ.

ಮಂಗಳೂರು ನಗರದ ರಕ್ಷಣೆಗೆ ಕಠಿಣ ತರಬೇತಿ: ಶಸ್ತ್ರಸಜ್ಜಿತ ತಂಡ ತಯಾರುಮಂಗಳೂರು ನಗರದ ರಕ್ಷಣೆಗೆ ಕಠಿಣ ತರಬೇತಿ: ಶಸ್ತ್ರಸಜ್ಜಿತ ತಂಡ ತಯಾರು

ಕೂಡಲೇ ಹಡಗಿನಲ್ಲಿದ್ದ ಸಿಬ್ಬಂದಿ ಕೋಸ್ಟ್ ಗಾರ್ಡ್ ಮೊರೆ ಹೋಗಿದ್ದಾರೆ. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಕೋಸ್ಟ್ ಗಾರ್ಡ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕೋಸ್ಟ್ ಗಾರ್ಡ್ ನೌಕೆಗಳಾದ ಅಮರ್ತ್ಯ ಮತ್ತು ವಿಕ್ರಂ ನೌಕೆಗಳನ್ನು ಸ್ಥಳಕ್ಕೆ ಕಳುಹಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಬ್ಬರದ ಕಡಲ ನಡುವೆ ಕೋಸ್ಟ್ ಗಾರ್ಡ್ ಸಾಹಸಮಯ ಕಾರ್ಯಾಚರಣೆ ನಡೆಸಿ 15 ಮಂದಿ ಸಿರಿಯನ್ ನಾವಿಕರನ್ನು ರಕ್ಷಣೆ ಮಾಡಿದೆ.

105 ಗಂಟೆಗಳ ಬಳಿಕ ಬೋರ್‌ವೆಲ್‌ನಿಂದ ಸಾವನ್ನು ಗೆದ್ದು ಬಂದ ಬಾಲಕ 105 ಗಂಟೆಗಳ ಬಳಿಕ ಬೋರ್‌ವೆಲ್‌ನಿಂದ ಸಾವನ್ನು ಗೆದ್ದು ಬಂದ ಬಾಲಕ

ಪ್ರಿನ್ಸೆನ್ ಮಿರಾಲ್ ಹಡಗು 32 ವರ್ಷದ ಹಳೆಯ ಹಡುಗು ಆಗಿದ್ದು, 1990 ಸೆಪ್ಟೆಂಬರ್ 20 ರಂದು ಸರಕು ಸಾಗಾಟದ ಸೇವೆಗೆ ತಯಾರು ಮಾಡಲಾಗಿತ್ತು. ಜಪಾನ್ ಮೂಲದ ಸೆವೆನ್ ಓಷಿಯನ್ ಸಂಸ್ಥೆ ಈ ಹಡಗನ್ನು ನಿರ್ಮಾಣ ಮಾಡಿದ್ದು ಫೈವ್ ಒಷಿಯನ್ ಅಡ್ಮಿನಿಸ್ಟ್ರೇಶನ್ ಕಂಪೆನಿ ಮಾಲೀಕತ್ವದಲ್ಲಿದೆ. ಅರಬ್ಬೀ ಸಮುದ್ರದಲ್ಲಿ ಅವಘಡ ಸಂಧರ್ಭದಲ್ಲಿ ಈ ನೌಕೆ ನವಮಂಗಳೂರು ಬಂದರಿಗೆ ಆಂಕರೇಜ್ ಗೆ ಬರಲು ಅನುಮತಿ ಯನ್ನು ಕೇಳಿದೆ. ಆದರೆ ನವಮಂಗಳೂರು ಬಂದರಿನ ನಿಯಮದ ಪ್ರಕಾರ ಹಳೆಯ ಹಡಗುಗಳಿಗೆ ಬಂದರು ಪ್ರವೇಶಕ್ಕೆ ಅವಕಾಶ ಇಲ್ಲದೇ ಇರುವುದರಿಂದ ಅವಕಾಶ ನಿರಾಕರಿಸಲಾಗಿದೆ..

ಜಲಸಮಾಧಿಯಾಗುವ ಆತಂಕ

ಕೊನೆಗೆ ಕೋಸ್ಟ್ ಗಾರ್ಡ್ ಮೂಲಕ ನಾವಿಕರು ಸಹಾಯ ಕೇಳಿದ್ದಾರೆ. ಪ್ರಸ್ತುತ ಹಡಗಿನಲ್ಲಿದ್ದ ಎಲ್ಲಾ ನಾವಿಕರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ. ಸದ್ಯ ಹಡಗಿನಲ್ಲಿ ಮೂರು ರಂಧ್ರಗಳು ಕಾಣಿಸಿಕೊಂಡಿದ್ದು ಆ ರಂಧ್ರದ ಮೂಲಕ ನೀರು ಒಳಹೊಕ್ಕುತ್ತಿದೆ. ಹಡಗು ಜಲಸಮಾಧಿಯಾದರೆ ಜಲಮಾಲಿನ್ಯವಾಗುವ ಆತಂಕ‌ ಕೂಡಾ ಎದುರಾಗಿದೆ. ದಕ್ಷಿಣ ಕನ್ನಡ, ಉಡುಪಿ ಕಡಲ ತೀರದಲ್ಲಿ ಹಲವು ನೌಕೆಗಳು ಜಲಸಮಾಧಿಯಾಗಿದೆ. ಕಡಲ ಅಬ್ಬರ ಜಾಸ್ತಿ ಇರೋದರಿಂದ ಪ್ರಿನ್ಸಸ್ ಮಿರಾಲ್ ನೌಕೆ ಕೂಡಾ ಈ ಪಟ್ಟಿಗೆ ಸೇರ್ಪಡೆಯಾದಂತೆ ಕಾಣುತ್ತಿದೆ.

ತಣ್ಣೀರುಭಾವಿಯಲ್ಲಿ 2 ಹಡಗುಗಳು ಮುಳುಗಡೆ

ತಣ್ಣೀರುಭಾವಿಯಲ್ಲಿ 2 ಹಡಗುಗಳು ಮುಳುಗಡೆ

29 ವರ್ಷದ ಹಿಂದೆ ತಣೀರುಬಾವಿ ಬಳಿ ಸಮುದ್ರದಲ್ಲಿ ಮುಳುಗಿದ್ದ ಸಿಂಗಪುರ ಮೂಲದ ಓಷನ್ ಬ್ರೌಸಿಂಗ್ ಹಡಗಿನ ತೆರವು ಕಾರ್ಯ ಇನ್ನೂ ಪೂರ್ಣವಾಗಿಲ್ಲ, ಎರಿಟ್ರಿಯಾದ ಎಂ.ವಿ. ಡೆನ್‌ ಡೆನ್ ಹಡಗು 2007ರಲ್ಲಿ ಮಂಗಳೂರಿನ ತಣ್ಣೀರುಬಾವಿ ಬಳಿ ಅಪಘಾತಕ್ಕೊಳಗಾಗಿ ಮುಳುಗಿತ್ತು. ನೌಕೆಯಲ್ಲಿದ್ದ 24 ಸಿಬಂದಿಗಳ ಪೈಕಿ ಮೂವರು ಸಾವನ್ನಪ್ಪಿ, 21 ಮಂದಿಯನ್ನು ರಕ್ಷಿಸಲಾಗಿತ್ತು. ಇನ್ನೂ ಇದು ಪೂರ್ಣ ವಿಲೇವಾರಿಯಾಗಿಲ್ಲ.

ಮ್ಯಾಂಗನೀಸ್ ಅದಿರನ್ನು ಸಾಗಿಸುತ್ತಿದ್ದ ಹಡಗು ಮುಳುಗಡೆ

ಆ ಬಳಿಕ 2008ರಲ್ಲಿ ಚೈನೀಸ್ ಹಡಗು 'ಚಾಂಗ್ ಲಿ ಮನ್' ಪ್ರತಿಕೂಲ ಹವಾಮಾನದಿಂದ ಗಾಳಿಯ ರಭಸಕ್ಕೆ ತಣ್ಣೀರು ಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿತ್ತು. ಆದರೆ ಈ ಹಡಗು ಮುಳುಗಡೆ ಆಗಿರಲಿಲ್ಲ. 2008 ಜು.17ರಂದು ನವಮಂಗಳೂರು ಬಂದರಿನಿಂದ 13,000 ಟನ್ ಮ್ಯಾಂಗನೀಸ್ ಅದಿರನ್ನು ಹೊತ್ತು ಚೀನಾಕ್ಕೆ ಹೊರಟಿದ್ದ ಇಥಿಯೋಪಿಯಾದ 'ಏಶಿಯನ್ ಫಾರೆಸ್ಟ್' ಹಡಗು ಪ್ರತಿಕೂಲ ಹವಾಮಾನದಿಂದ ಮುಂದಕ್ಕೆ ಚಲಿಸಲಾಗದೆ ತಣ್ಣೀರುಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿ ಮರುದಿನ (ಜು. 18) ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಈ ನೌಕೆಯಲ್ಲಿದ್ದ ಎಲ್ಲಾ 18 ಮಂದಿಯನ್ನು ರಕ್ಷಿಸಲಾಗಿತ್ತು. ಈ ಹಡಗಿನ ಅವಶೇಷವನ್ನು ಕೂಡ ಪೂರ್ಣವಾಗಿ ತೆಗೆಯಲು ಕೆಲವು ವರ್ಷಗಳೇ ಬೇಕಾಯಿತು.

2019ರಲ್ಲಿ ತ್ರಿದೇವಿ ಪ್ರೇಮ್ ಎಂಬ ಡ್ರೆಜ್ಜರ್ ನೌಕೆ ಜಲಸಮಾಧಿ

2019ರಲ್ಲಿ ತ್ರಿದೇವಿ ಪ್ರೇಮ್ ಎಂಬ ಡ್ರೆಜ್ಜರ್ ನೌಕೆ ಜಲಸಮಾಧಿ

2021ರಲ್ಲಿ ಎಂಆರ್‌ಪಿಎಲ್ ತೇಲು ಜೆಟ್ಟಿಯ ನಿರ್ವಹಣೆಗೆ ಹೋಗುತ್ತಿದ್ದ ಅಲಯನ್ಸ್ ಎಂಬ ಟಗ್ ತೌಖ್ತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ನೀರುಪಾಲಾಗಿ ಇಬ್ಬರು ಮೃತಪಟ್ಟಿದ್ದರು. ಇದೇ ದಿನ ಕೋರ ಮಂಡಲ್ ಎನ್ನುವ ಟಗ್ ಕಾಪು ಬಳಿಯ ಮೂಲ್ಕಿರಾಕ್ಸ್‌ ಎಂಬಲ್ಲಿ ತಳಸ್ಪರ್ಶಗೊಂಡಿತ್ತು. ಬಳಿಕ ಅದರ ನಾವಿಕರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿತ್ತು. ಈ ನೌಕೆ ಈಗಲೂ ಅಲ್ಲೇ ಉಳಿದುಕೊಂಡಿದೆ. ಇನ್ನು 2019ರಲ್ಲಿ ತ್ರಿದೇವಿ ಪ್ರೇಮ್ ಎಂಬ ಡ್ರೆಜ್ಜರ್ ನೌಕೆ ನವಮಂಗಳೂರು ಬಂದರು ಬಳಿ ಜಲ ಸಮಾಧಿಯಾಗಿತ್ತು. ಅದೇ ಕಂಪನಿಗೆ ಸೇರಿದ ಭಗವತಿ ಪ್ರೇಮ್ ಎಂಬ ಡ್ರೆಜ್ಜರನ್ನು ಸುರತ್ಕಲ್ ಬಳಿಯ ಹೊಸಬೆಟ್ಟು ಕಡಲ ಕಿನಾರೆಯಲ್ಲಿ ನಿಲ್ಲಿಸಲಾಗಿದ್ದು ಈಗಲೂ ತೆರವಾಗದೆ ಬಾಕಿಯಾಗಿದೆ.

   ಮಹಾಸರ್ಕಾರಕ್ಕೆ ಸಿಡಿಲು ಬಡಿದಿರುವಾಗ್ಲೇ CM Uddhav Thackeray ಗೆ ಕೊರೊನಾ | *Politics | OneIndia Kannada
   English summary
   Indian Coast Guard saved 15 crew mebers of merchan ship which got grounded in Arebean sea of news Mangaluru cost on Tuesday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X