ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಸ್ಟ್‌ ಗಾರ್ಡ್‌ನಿಂದ ಯಶಸ್ವಿ ಕಾರ್ಯಾಚರಣೆ; ಪತ್ತೆಯಾದ ತಮಿಳುನಾಡು ಮೀನುಗಾರರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 29: ಭಾರತೀಯ ಕೋಸ್ಟ್ ಗಾರ್ಡ್ ಅರಬ್ಬೀ ಸಮುದ್ರದಲ್ಲಿ ಮತ್ತೊಂದು ಅಮೋಘ ಕಾರ್ಯಾಚರಣೆಯ ಮೂಲಕ ತಮಿಳುನಾಡಿನ ಮೀನುಗಾರರನ್ನು ರಕ್ಷಣೆ ಮಾಡಿದೆ.

ಗೋವಾದಿಂದ ಅರಬ್ಬೀ ಸಮುದ್ರದ 59 ಮೈಲಿ ದೂರದಲ್ಲಿ ಅಂದರೆ 1,100 ಕಿಲೋಮೀಟರ್ ದೂರದ ಆಳ ಸಮುದ್ರದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ತಮಿಳುನಾಡು ಮೂಲದ ಮೀನುಗಾರರನ್ನು ರಕ್ಷಣೆ ಮಾಡುವ ಮೂಲಕ ಸಾಹಸ ಮೆರೆದಿದೆ. ದಿಕ್ಕು ತಪ್ಪಿ ಆಳ ಸಮುದ್ರದಲ್ಲಿ ಕಂಗಾಲಾಗಿದ್ದ ಮೀನುಗಾರಿಕಾ ಬೋಟ್ ಅನ್ನು ಹುಡುಕುವ ಮೂಲಕ ಕೋಸ್ಟ್ ಗಾರ್ಡ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಅರಬ್ಬೀ ಸಮುದ್ರದ ಬೋಟ್ ದುರಂತ: ಮೀನುಗಾರ ಬಿಚ್ಚಿಟ್ಟ ಜೀವನ್ಮರಣ ಹೋರಾಟದ ಕಥೆಅರಬ್ಬೀ ಸಮುದ್ರದ ಬೋಟ್ ದುರಂತ: ಮೀನುಗಾರ ಬಿಚ್ಚಿಟ್ಟ ಜೀವನ್ಮರಣ ಹೋರಾಟದ ಕಥೆ

ಕಳೆದ ಎಪ್ರಿಲ್ 6ರಂದು ತಮಿಳುನಾಡಿನ ತೆಂಗಪಟ್ಟಣಂ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆಂದು 11 ಮೀನುಗಾರರ ತಂಡ ಅರಬ್ಬೀ ಸಮುದ್ರದ ಕೇರಳ ಪಶ್ಚಿಮ ಭಾಗದ ಆಳ ಸಮುದ್ರಕ್ಕೆ ತೆರಳಿತ್ತು. ಆದರೆ ಬೇರೆ ಎಲ್ಲಾ ಬೋಟ್ ಗಳೊಂದಿಗೆ ಸಂಪರ್ಕ ಕಳೆದುಕೊಂಡ ಬೋಟ್ ದಿಕ್ಕು ತಪ್ಪಿ ಬೇರೆ ಕಡೆ ಸಂಚಾರ ಮಾಡಿದೆ. ಗಾಳಿಯ ಅಬ್ಬರಕ್ಕೆ ಮೀನುಗಾರರೂ ಕಂಗಲಾಗಿದ್ದರು. ಇತ್ತ ಮೀನುಗಾರಿಕಾ ಬೋಟ್ ಸಂಪರ್ಕಕ್ಕೆ ಸಿಗದೆ, ಬೋಟ್ ಸಮುದ್ರದಲ್ಲಿ ಮುಳುಗಿರುವ ಶಂಕೆ ಎಲ್ಲರಲ್ಲೂ ವ್ಯಕ್ತವಾಗಿತ್ತು.

ಸಮುದ್ರದಲ್ಲಿ ಮುಳುಗಿ ಅವಘಡ

ಸಮುದ್ರದಲ್ಲಿ ಮುಳುಗಿ ಅವಘಡ

ಮೀನುಗಾರಿಗಾ ಬೋಟ್ ಕಾಣೆಯಾದ ಕೆಲವೇ ದಿನಗಳಲ್ಲಿ ಆಳ ಸಮುದ್ರ ಭಾಗದಲ್ಲಿ ಇತರ ಮೀನುಗಾರಿಕಾ ಬೋಟ್ ನವರಿಗೆ ಬೋಟ್ ಅವಶೇಷಗಳು ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿತ್ತು. ಹೀಗಾಗಿ ಇದು ತೆಂಗಪಟ್ಟಣಂ ನಿಂದ ಹೊರಟ ಬೋಟ್ ನದ್ದೇ ಅಂತಾ ಖಾತ್ರಿಗೊಳಗಾದ ಇತರ ಬೋಟ್ ಮೀನುಗಾರರು ದಡಕ್ಕೆ ಬಂದು ಬೋಟ್ ಸಮುದ್ರದಲ್ಲಿ ಮುಳುಗಿ ಅವಘಡವಾಗಿರುವ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ತಕ್ಷಣ ಕಾರ್ಯಪೃವೃತ್ತರಾದ ತಮಿಳುನಾಡು ಮೀನುಗಾರಿಕಾ ಅಧಿಕಾರಿಗಳು ಗೋವಾ ಕೋಸ್ಟ್ ಗಾರ್ಡ್ ನೆಲೆಗೆ ಮಾಹಿತಿ ನೀಡಿದ್ದಾರೆ.

ವಾಣಿಜ್ಯ ಹಡಗುಗಳಿಗೆ ಸಂದೇಶ

ವಾಣಿಜ್ಯ ಹಡಗುಗಳಿಗೆ ಸಂದೇಶ

ಗೋವಾ ಅಧಿಕಾರಿಗಳು ಮುಂಬೈ ಕೋಸ್ಟ್ ಗಾರ್ಡ್ ಎಂ.ಆರ್.ಸಿ.ಸಿಗೆ ಮಾಹಿತಿ ನೀಡಿದ್ದು, ಎಂ.ಆರ್.ಸಿ.ಸಿ ತಕ್ಷಣ ತನ್ನ ಅಂತಾರಾಷ್ಟ್ರೀಯ ಸುರಕ್ಷತಾ ಜಾಲವನ್ನು ಸಕ್ರಿಯಗೊಳಿಸಿ ಕಾಣೆಯಾದ ಬೋಟ್ ಸಂಚರಿಸಿದ ಮಾರ್ಗದಲ್ಲಿ ಸಾಗುವ ವಾಣಿಜ್ಯ ಹಡಗುಗಳಿಗೆ ಸಂದೇಶ ರವಾನಿಸಿದೆ. ಮೀನುಗಾರಿಕಾ ಬೋಟ್ ಹುಡುಕಾಟಕ್ಕಾಗಿ ಐಸಿಜಿಎಸ್ ಸಮುದ್ರ ಪ್ರಹಾರಿ ನೌಕೆಯನ್ನು ಕಳುಹಿಸಲಾಯಿತು. ಇದರ ಜೊತೆಗೆ ಮುಂಬೈ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಇತರ ಮೀನುಗಾರಿಕಾ ಬೋಟ್ ಗಳಿಗೆ ನಾಪತ್ತೆಯಾದ ಬೋಟ್ ಹುಡುಕುವಂತೆ ಸೂಚನೆ ನೀಡಲಾಯಿತು. ನಾಪತ್ತೆಯಾದ ಮೀನುಗಾರಿಕಾ ಬೋಟ್ ಯಾವುದೇ ಸ್ಥಳ ಶೋಧಕ ಉಪಕರಣಗಳನ್ನು ಹೊಂದಿರದ ಕಾರಣ, ಕೇವಲ ಬೋಟ್ ಹೊರಟ ಆರಂಭಿಕ ತಾಣದ ಲೆಕ್ಕಾಚಾರದಿಂದಲೇ ಆಳ ಸಮುದ್ರದಲ್ಲಿ ಹುಡುಕಾಟ ಆರಂಭವಾಗಿದೆ.

ಕೋಸ್ಟ್ ಗಾರ್ಡ್‌ನ ರೆಡಾರ್ ಮೂಲಕ ಬೋಟ್ ಪತ್ತೆ

ಕೋಸ್ಟ್ ಗಾರ್ಡ್‌ನ ರೆಡಾರ್ ಮೂಲಕ ಬೋಟ್ ಪತ್ತೆ

ಕೋಸ್ಟ್ ಗಾರ್ಡ್‌ನ ಸಾಹಸಮಯ ಕಾರ್ಯಾಚರಣೆಗೆ ಭಾರತೀಯ ನೌಕಾ ಸೇನೆ ಕೂಡಾ ಸಾಥ್ ನೀಡಿದ್ದು, ತನ್ನ ವಿಮಾನದ ಮೂಲಕ ಹುಡಕಾಟ ಆರಂಭಿಸಲಾಯಿತು. ಸತತ ನಾಲ್ಕು ದಿನಗಳ ಅವಿರತ ಹುಡುಕಾಟದ ಬಳಿಕ ಕಾಣೆಯಾದ ಮೀನುಗಾರಿಕಾ ಬೋಟ್ ಲಕ್ಷ ದ್ವೀಪದಿಂದ 200 ಮೈಲಿ ಅಂದರೆ ಸುಮಾರು 370 ಕಿಮೀ ದೂರದಲ್ಲಿರೋದು ಗೊತ್ತಾಗಿದೆ. ಕೋಸ್ಟ್ ಗಾರ್ಡ್‌ನ ರೆಡಾರ್ ಮೂಲಕ ಬೋಟ್ ಇರೋದು ಗೊತ್ತಾಗಿದೆ. ಕೂಡಲೇ ಮೀನುಗಾರಿಕಾ ಬೋಟ್ ನಲ್ಲಿ ಮೀನುಗಾರರಿಗೆ ಸ್ಯಾಟಲೈಟ್ ಫೋನ್ ಸಂಪರ್ಕ ಮಾಡಿದ್ದು, ಎಲ್ಲರೂ ಸುರಕ್ಷಿತವಾಗಿರುವ ಬಗ್ಗೆ ಖಚಿತಪಡಿಸಲಾಗಿದೆ.

ಮೇ 3ರಂದು ದಡ ತಲುಪುವ ವಿಶ್ವಾಸ

ಮೇ 3ರಂದು ದಡ ತಲುಪುವ ವಿಶ್ವಾಸ

ಆದರೆ ತುಂಬಾ ಭಯ ಮತ್ತು ನಿತ್ರಾಣಗೊಂಡಿರುವ ಮೀನುಗಾರರಿಗೆ ಅಗತ್ಯ ಚಿಕಿತ್ಸೆಗಾಗಿ ಲಕ್ಷದ್ವೀಪದಿಂದ ಕೋಸ್ಟ್ ಗಾರ್ಡ್‌ನ ನೌಕೆ ಪತ್ತೆಯಾದ ಬೋಟ್ ಕಡೆಗೆ ಕಳುಹಿಸಲಾಗಿದೆ. ಮೀನುಗಾರಿಕಾ ಬೋಟ್ ಕೋಸ್ಟ್ ಗಾರ್ಡ್ ಹಡಗಿನ ಬೆಂಗಾವಲಿನೊಂದಿಗೆ ತಮಿಳುನಾಡಿನ ತೆಂಗಪಟ್ಟಣಂ ಬಂದರಿಗೆ ಬರುತ್ತಿದ್ದು, ಮೇ.3ರಂದು ದಡ ತಲುಪುವ ವಿಶ್ವಾಸವನ್ನು ಕೋಸ್ಟ್ ಗಾರ್ಡ್ ಹೊಂದಿದೆ.

English summary
The Indian Coast Guard has located missing Tamil Nadu fishing boat Mercedes in a massive search operation launched since 24 Apr 2021. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X