ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬುದ್ದಿವಂತ ಜಿಲ್ಲೆಯ ಸಂಸದ ನಳಿನ್ ಕಟೀಲ್ ಅವರ ಈ ಚಿತ್ರವನೊಮ್ಮೆ ನೋಡಿ!

|
Google Oneindia Kannada News

ಮಂಗಳೂರು, ಏಪ್ರಿಲ್ 18: ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಮತ್ತು ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರ ಈ ಕೆಳಗಿನ ಫೋಟೋ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕೊರೊನಾ ಎರಡನೇ ಅಲೆಯಿಂದ ತತ್ತರಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಸರಕಾರ ಹಲವಾರು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಅದರಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದರಲ್ಲಿ ಯಾವುದೇ ಬದಲಾವಣೆಯನ್ನು ಮಾಡಿರಲಿಲ್ಲ. ಎರಡೂ ಕಡ್ಡಾಯ ಎನ್ನುವ ಗೈಡ್ಲೈನ್ಸ್ ಮುಂದುವರಿದಿತ್ತು.

ನಿಶಿತಾ ಸೇರಿ ಎಷ್ಟು ಹೆಣ್ಣು ಮಕ್ಕಳನ್ನು ಕಾಡಿದ್ದೀರಿ: ನಳಿನ್ ಕಟೀಲ್‌ಗೆ ಕಾಂಗ್ರೆಸ್ ಪ್ರಶ್ನೆನಿಶಿತಾ ಸೇರಿ ಎಷ್ಟು ಹೆಣ್ಣು ಮಕ್ಕಳನ್ನು ಕಾಡಿದ್ದೀರಿ: ನಳಿನ್ ಕಟೀಲ್‌ಗೆ ಕಾಂಗ್ರೆಸ್ ಪ್ರಶ್ನೆ

ಧಾರ್ಮಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿರುವ ಸರಕಾರ ರಾಜಕೀಯ ಕಾರ್ಯಕ್ರಮಗಳಿಗೆ ನಿರ್ಬಂಧವನ್ನು ವಿಧಿಸಿರಲಿಲ್ಲ. ಇದು, ಜನಸಾಮಾನ್ಯರ ಕೋಪಕ್ಕೆ ಕಾರಣವಾಗಿತ್ತು. ಅಷ್ಟೇ ಯಾಕೆ, ಉಡುಪಿಯ ಬಿಜೆಪಿಯ ಶಾಸಕ ರಘುಪತಿ ಭಟ್ ಕೂಡಾ ಸರಕಾರದ ಈ ನಿಯಮಕ್ಕೆ ಆಕ್ಷೇಪವನ್ನು ವ್ಯಕ್ತ ಪಡಿಸಿದ್ದರು.

 In Picture: Corona Guidelines Completely Neglected By Dakshina Kannada MP Nalin Kumar Kateel And Team

ಈ ಚಿತ್ರದ ಹಿನ್ನಲೆಯಲ್ಲಿ ಕೋವಿಡ್ ಮಾರ್ಗಸೂಚಿ ಬ್ಯಾನರ್ ಇದೆ. ಅದರಲ್ಲಿ 'ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಿ'ಎನ್ನುವ ಬರಹವನ್ನು ಬ್ಯಾನರ್ ನಲ್ಲಿ ನೀವು ನೋಡಬಹುದಾಗಿದೆ.

ಆದರೆ, ನಳಿನ್ ಕಟೀಲ್ ಆದಿಯಾಗಿ ಎಲ್ಲರೂ ಸಾಮಾಜಿಕ ಅಂತರ ಹಾಳಾಗಿ ಹೋಗಲಿ, ಒಬ್ಬರಿಗೊಬ್ಬರು ಗಂಡ ಹೆಂಡತಿಯಂತೆ ಅಂಟಿಕೊಂಡು ಕೂತಿದ್ದಾರೆ. ಜೊತೆಗೆ, ಒಂದು ಉದ್ದದ ಬೆಂಚ್ ನಲ್ಲಿ ಬರೋಬ್ಬರಿ ಹದಿನೇಳು ಜನ ಕೂತಿದ್ದರೆ, ಒಬ್ಬರು ವಿಧೇಯಕರಂತೆ ನಿಂತಿದ್ದಾರೆ.

ಅದೂ ಹೋಗಲಿ, ಮಾಸ್ಕ್ ಅನ್ನಾದರೂ ಜನರಿಗೆ ತಿಳಿಹೇಳಬೇಕಾದ ಜನಪ್ರತಿನಿಧಿಗಳಾದ ಮಾನ್ಯ ಕಟೀಲ್ ಮತ್ತವರ ಅಕ್ಕಪಕ್ಕ ಕೂತವರು ಹಾಕಿಕೊಂಡಿದ್ದಾರಾ? ಕಟೀಲ್ ಮಾಸ್ಕ್ ಮುಖಕ್ಕೆ ಹಾಕಿಕೊಂಡಿದ್ದಾರಾದರೂ, ಅದು ಎಲ್ಲಿ ಇರಬೇಕೋ ಅಲ್ಲಿಲ್ಲ.

 ಕೊರೊನಾ: ಧಾರ್ಮಿಕ ಕೇಂದ್ರದಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಆಡಳಿತ ಮಂಡಳಿ ಕೊರೊನಾ: ಧಾರ್ಮಿಕ ಕೇಂದ್ರದಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಆಡಳಿತ ಮಂಡಳಿ

ಇನ್ನು, ಅಲ್ಲಿರುವ ಹದಿನೆಂಟು ಜನರಲ್ಲಿ ಎಂಟು ಜನ, ಪಕ್ಕದಲ್ಲಿ ಸಂಸದರು ಇದ್ದಾರೆ ಎನ್ನುವ ಸೌಜನ್ಯಕ್ಕಾದರೂ ಮಾಸ್ಕ್ ಧರಿಸಿರಲಿಲ್ಲ ಎನ್ನುವುದನ್ನು ಫೋಟೋ ಸಾರಿಸಾರಿ ಹೇಳುತ್ತಿದೆ. ಹೋಗಲಿ, ದಕ್ಷಿಣ ಕನ್ನಡ ಜಿಲ್ಲಾಡಳಿತ ಇವರಿಗೆ ದಂಡ ಏನಾದರೂ ವಿಧಿಸಿದೆಯಾ ಅಥವಾ ಈ ದಂಡ ಎನ್ನುವುದು ಬರೀ ಬಡಪಾಯಿ ಜನಸಾಮಾನ್ಯರಿಗಾ ಮಾತ್ರನಾ ಎನ್ನುವುದಿಲ್ಲಿ ಪ್ರಶ್ನೆ. ವಾ ಅವಸ್ಥೆ ಮಾರೇ.. ಮುಗಲ್ನಾ..

English summary
In Picture: Corona Guidelines Completely Neglected By Dakshina Kannada MP Nalin Kumar Kateel And Team. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X