ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತದಾನಕ್ಕೆ ತವರಿಗೆ ಮರಳಲಿರುವ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು

|
Google Oneindia Kannada News

ಮಂಗಳೂರು, ಮೇ 07: ರಾಜ್ಯ ವಿಧಾನಸಭಾ ಚುನಾವಣೆಗೆ 5ದಿನಗಳು ಮಾತ್ರ ಬಾಕಿ ಉಳಿದಿವೆ. ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದ ಅಭ್ಯರ್ಥಿಗಳ ಎದೆ ಬಡಿತ ಹೆಚ್ಚಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಅಭ್ಯರ್ಥಿಗಳು ತಮ್ಮ ಕ್ಷೇತ್ರದಿಂದ ಉದ್ಯೋಗ ಅರಸಿ ಇತರೆಡೆಗೆ ತೆರಳಿರುವ ಮತದಾರರನ್ನು ಕ್ಷೇತ್ರಕ್ಕೆ ಕರೆತರುವ ಎಲ್ಲಾ ಕಸರತ್ತು ಆರಂಭಿಸಿದ್ದಾರೆ.

ತಮ್ಮ ಊರು ಬಿಟ್ಟು ತುತ್ತಿನ ಚೀಲ ತಂಬಿಸಲು ಉದ್ಯೋಗ ಅರಸಿ ಪಟ್ಟಣ , ನಗರದ ಕಡೆಗೆ ಬಂದಿರುವ ಸಾವಿರಾರು ಕೂಲಿ ಕಾರ್ಮಿಕರಿಗೆ ಈಗ ಎಲ್ಲಿಲ್ಲದೆ ಬೇಡಿಕೆ ಬಂದಿದೆ. ಚುನಾವಣೆಯ ದಿನ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷ ಮುಖಂಡರು ಈ ಬಡಕಾರ್ಮಿಕರ ಹುಡುಕಾಟ ಅರಂಭಿಸಿದ್ದಾರೆ. ತಮ್ಮ ಪರ ಮತ ಚಲಾಯಿಸಲು ಕ್ಷೇತ್ರಕ್ಕೆ ಬರುವಂತೆ ಒತ್ತಡ ಹೇರುತ್ತಿರುವ ಈ ರಾಜಕೀಯ ಪುಢಾರಿಗಳು ಈ ಬಡ ಕಾರ್ಮಿಕರಿಗೆ ವಿವಿಧ ಆಮೀಷಗಳನ್ನು ಒಡ್ಡುತ್ತಿದ್ದಾರೆ.

ಬೆಂಗಳೂರು: ಮತದಾನದ ಕುರಿತು ಜಾಗೃತಿ ಮೂಡಿಸಲು ವಾಕಥಾನ್ಬೆಂಗಳೂರು: ಮತದಾನದ ಕುರಿತು ಜಾಗೃತಿ ಮೂಡಿಸಲು ವಾಕಥಾನ್

ಮಂಗಳೂರು ಎಂದರೆ ಉತ್ತರ ಕರ್ನಾಟಕದ ಬಡ ಕಾರ್ಮಿಕರಿಗೆ ದುಬೈ ಇದ್ದಂತೆ ಎನ್ನುವ ಮಾತಿದೆ. ತಮ್ಮ ಶ್ರಮಕ್ಕೆ ಇಲ್ಲಿ ತಕ್ಕ ಕೂಲಿ ದೊರೆಯುತ್ತದೆ ಎಂದು ಬಾಗಲಕೋಟೆ, ಇಂಡಿ, ಕಲ್ಬುರ್ಗಿ, ರೋಣ, ವಿಜಯಪುರ, ಬಾದಾಮಿ, ಗದಗ, ರಾಯಚೂರು, ಗೋಕಾಕ್ ಸೇರಿದಂತೆ ಇನ್ನಿತರ ಸ್ಥಳಗಳಿಂದ ಸಾವಿರಾರು ಕಾರ್ಮಿಕರು ಮಂಗಳೂರಿಗೆ ವಲಸೆ ಬಂದು ನೆಲೆಸಿದ್ದಾರೆ.

Immigrant labours leaving from Mangaluru for voting

ಇಲ್ಲಿ ಕಟ್ಟಡ ಕಾರ್ಮಿಕರಾಗಿ, ಬಹು ಮಹಡಿ ಕಟ್ಟಡದ ವಾಚ್ ಮೆನ್ ಗಳಾಗಿ , ಮರಳುಗಾರಿಕೆ, ಮೀನುಗಾರಿಕಾ ಕ್ಷೆತ್ರದಲ್ಲಿ ದುಡಿದು ತಮ್ಮ ಕುಟುಂಬದ ತುತ್ತಿನ ಚೀಲ ತುಂಬಿಸುತ್ತಿದ್ದಾರೆ.

ವೋಟ್ ಮಾಡಿ ಎನ್ನುತ್ತಿರುವ ಪುನೀತ್, ವೈಷ್ಣವಿ, ಕಂಬಾರರುವೋಟ್ ಮಾಡಿ ಎನ್ನುತ್ತಿರುವ ಪುನೀತ್, ವೈಷ್ಣವಿ, ಕಂಬಾರರು

ಚುನಾವಣೆಯ ಮತದಾನದ ದಿನ ಹತ್ತಿರ ವಾಗುತ್ತಿದ್ದಂತೆ ಈ ಬಡ ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮತದಾನಕ್ಕೆ ಕ್ಷೇತ್ರಗಳಿಗೆ ಮರಳುವಂತೆ ರಾಜಕೀಯ ಪಕ್ಷದ ಪುಢಾರಿಗಳು ಫರ್ಮಾನು ಹೊರಡಿಸಿದ್ದಾರೆ. ಮಂಗಳೂರಿನಿಂದ ಮತದಾನಕ್ಕಾಗಿ ಆಯಾ ಕ್ಷೇತ್ರಗಳಿಗೆ ತೆರಳಲು ವಿವಿಧ ರಾಜಕೀಯ ಪಕ್ಷಗಳು ಉಚಿತ ಬಸ್ ವ್ಯವಸ್ಥೆ ಕಲ್ಪಿಸುತ್ತಿವೆ. ಅಷ್ಟು ಮಾತ್ರವಲ್ಲದೆ ಪ್ರತಿ ಓಟಿಗೆ ಇಂತಿಷ್ಟು ನೋಟ್ ಹಾಗು ಊರಲ್ಲಿ ಒಂದು ವಾರ ಠಿಕಾಣಿ ನಂತರ ಮತ್ತೆ ವಾಪಾಸ್ ಮಂಗಳೂರಿಗೆ ಕರೆ ತಂದು ಬಿಡುವ ಅಫರ್ ಗಳನ್ನು ನೀಡುತ್ತಿದ್ದಾರೆ.

Immigrant labours leaving from Mangaluru for voting

ಚುನಾವಣೆಯ ಮತದಾನದ 2 ದಿನ ಮೊದಲು ಉತ್ತರ ಕರ್ನಾಟಕದ ಕಡೆ ನೂರಾರು ಖಾಸಗಿ ಬಸ್ ಗಳು ಸೇರಿದಂತೆ ಸರಕಾರಿ ಬಸ್ ಗಳು ಈ ಕಾರ್ಮಿಕರನ್ನು ಕೊಂಡೊಯ್ಯಲು ಬರಲಿವೆ. ಒಂದು ಮಾಹಿತಿ ಪ್ರಕಾರ ಮೇ 9ರ ಬಳಿಕ ಈ ಬಸ್ ಗಳು ಮಂಗಳೂರಿನಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಹೊರಡಲಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಕಾರ್ಮಿಕರು ಈಗಾಗಲೇ ತಮ್ಮ ಗಂಟು ಮೋಟೆ ಕಟ್ಟಿಕೊಂಡು ಸಿದ್ದರಾಗಿದ್ದಾರೆ.

English summary
Karnataka assembly elections 2018: Immigrant labours living in Mangaluru are ready to visit their native place for voting on May 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X