• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಲ್ಲಿ ಕಾನೂನು ಬಾಹಿರ ಲೈಟ್ ಫಿಶಿಂಗ್; ಕತ್ತಲಲ್ಲಿ ನಾಡದೋಣಿ ಮೀನುಗಾರರು

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಜನವರಿ 17: ಲೈಟ್ ಫಿಶಿಂಗ್ ಕಾನೂನು ಬಾಹಿರ ಎಂದು ನ್ಯಾಯಾಲಯದ ಸ್ಪಷ್ಟ ಆದೇಶ ಇದ್ದರೂ ಮಂಗಳೂರಿನ ಉಳ್ಳಾಲ ಭಾಗದಲ್ಲಿ ಲೈಟ್ ಫಿಶಿಂಗ್ ಎಗ್ಗಿಲ್ಲದೇ ನಡೆಯುತ್ತಿದೆ. ಇದರಿಂದ ನಾಡದೋಣಿ ಮೀನುಗಾರರು ಕಂಗಾಲಾಗಿದ್ದಾರೆ.

ಲೈಟ್ ಫಿಶಿಂಗ್ ಪರಿಣಾಮವಾಗಿ ಉಳ್ಳಾಲದ ಮೀನುಗಾರರ ಕೋಟಿಪುರ ಕೋಡಿ, ದರ್ಗಾ ಭಾಗದಲ್ಲಿ ನಾಡದೋಣಿಗಳು ತಟ ಸೇರಿವೆ. ಲೈಟ್ ಫಿಶಿಂಗ್ ಹಾವಳಿಯಿಂದ ಈ ನಾಡದೋಣಿ ಕಂಗಾಲಾಗಿದ್ದು, ಲೈಟ್ ಫಿಶಿಂಗ್ ತಡೆಯಬೇಕಿದ್ದ ಅಧಿಕಾರಿ ವರ್ಗ ಮಾತ್ರ ಮೌನ ವಹಿಸಿದೆ.

ಮಂಗಳೂರಿನಲ್ಲಿ ಕಂಡಿತು ಅಪರೂಪದ ವೇಲ್ ಶಾರ್ಕ್

ಉಳ್ಳಾಲ ಭಾಗದಲ್ಲಿ ಪ್ರತಿ ವರ್ಷ ಸುಮಾರು 150 ಕ್ಕೂ ಹೆಚ್ಚು ನಾಡದೋಣಿಗಳು ಮೀನುಗಾರಿಕೆಯಲ್ಲಿ ನಿರತವಾಗಿರುತ್ತವೆ. ಈ ಕಾಯಕವನ್ನೇ ನಂಬಿಕೊಂಡು ಅನೇಕರು ಕುಟುಂಬ ಮುನ್ನಡೆಸುತ್ತಿದ್ದಾರೆ.

ಲೈಟ್ ಫಿಶಿಂಗ್ ಅವೈಜ್ಞಾನಿಕ ಎಂದು ಕೋರ್ಟ್ ತೀರ್ಪು

ಲೈಟ್ ಫಿಶಿಂಗ್ ಅವೈಜ್ಞಾನಿಕ ಎಂದು ಕೋರ್ಟ್ ತೀರ್ಪು

3 ವರ್ಷದ ಹಿಂದೆ ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲ್ ಆರಂಭಗೊಂಡಾಗ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರು ಕಂಗಾಲಾಗಿದ್ದರು. ನಾಡದೋಣಿ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದೊಂದು ಅವೈಜ್ಞಾನಿಕ ಮೀನುಗಾರಿಕೆ ಎಂದು ನ್ಯಾಯಾಲಯವು ತೀರ್ಪು ನೀಡಿದೆ. ಇದರಿಂದ ಕಳೆದ ವರ್ಷ ಉಳ್ಳಾಲ ಭಾಗದಲ್ಲಿ ಲೈಟ್ ಫಿಶಿಂಗ್ ನಿಂತಿತ್ತು. ಆದರೆ ಈ ಬಾರಿ ಲೈಟ್ ಫಿಶಿಂಗ್ ಭೂತ ಮತ್ತೆ ಆರಂಭಗೊಂಡಿದೆ.

ಕೇರಳದಲ್ಲಿ ಲೈಟ್ ಫಿಶಿಂಗ್ ಮಾಡಿದರೆ ದಂಡ

ಕೇರಳದಲ್ಲಿ ಲೈಟ್ ಫಿಶಿಂಗ್ ಮಾಡಿದರೆ ದಂಡ

ಮೂರು ತಿಂಗಳಿಂದ ರಾತ್ರಿ ವೇಳೆ ಈ ದಂಧೆ ನಡೆಯುತ್ತಿದ್ದು, ಇದರಿಂದ ನಾಡದೋಣಿ ಮೀನುಗಾರರು ದೋಣಿಯನ್ನು ದಡದಲ್ಲೇ ಲಂಗರು ಹಾಕಿದ್ದಾರೆ. ಇದರಿಂದ ಸುಮಾರು ಸಾವಿರದಷ್ಟು ಕುಟುಂಬಗಳು ಕಂಗಾಲಾಗಿವೆ.

ಕೇರಳದಲ್ಲಿ ಲೈಟ್ ಫಿಶಿಂಗ್ ಮಾಡಲು ಮುಂದಾದವರನ್ನು ಅಲ್ಲಿನ ಮೀನುಗಾರರು ಹೊಡೆದು ಓಡಿಸುವುದರಿಂದ ಆ ಭಾಗಕ್ಕೆ ತಲೆ ಹಾಕಲು ಹೆದರುವ ದಂಧೆಕೋರರು ಉಳ್ಳಾಲ ಭಾಗದಲ್ಲಿ ಸುತ್ತುತ್ತಿದ್ದಾರೆ.

ಮಲ್ಪೆ ಬೋಟ್ ಬಲೆಗೆ ಬಿದ್ದ ರಕ್ಕಸ ಗಾತ್ರದ ಅಪರೂಪದ ತೊರಕೆ ಮೀನು!

ಮೀನುಗಾರರ ಮನವಿಗೆ ಸ್ಪಂದಿಸದ ಅಧಿಕಾರಿಗಳು

ಮೀನುಗಾರರ ಮನವಿಗೆ ಸ್ಪಂದಿಸದ ಅಧಿಕಾರಿಗಳು

ನ್ಯಾಯಾಲಯದ ಆದೇಶ ಜಾರಿಗೆ ತಂದು ತಮಗೆ ನ್ಯಾಯ ಕೊಡಿಸಿ ಎಂದು ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರ ಸಂಘ ಕಳೆದ ಮೂರು ತಿಂಗಳಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಚೇರಿಗೆ ಅಲೆದಾಡಿ ಸುಸ್ತಾಗಿದ್ದಾರೆ.

ಲೈಟ್ ಫಿಶಿಂಗ್ ನಡೆಸುವ ಬೋಟ್ ಗಳನ್ನು ಹಿಡಿದುಕೊಡಿ ಎಂದು ಮೀನುಗಾರಿಕಾ ಇಲಾಖೆಯಿಂದ ಉತ್ತರ ಬರುತ್ತಿದೆ ಎನ್ನುವ ಆರೋಪ ನಾಡದೋಣಿ ಮೀನುಗಾರರದ್ದು. ಇನ್ನು ಕೇರಳದಲ್ಲಿ ಈ ರೀತಿ ಅವೈಜ್ಞಾನಿಕ ಮೀನುಗಾರಿಕೆ ನಡೆದರೆ 5 ಲಕ್ಷ ದಂಡ ಹಾಕುತ್ತಾರೆ.

ಕಂಡೂ ಕಾಣದಂತೆ ವರ್ತಿಸುತ್ತಿರುವ ಮೀನುಗಾರಿಕಾ ಅಧಿಕಾರಿಗಳು

ಕಂಡೂ ಕಾಣದಂತೆ ವರ್ತಿಸುತ್ತಿರುವ ಮೀನುಗಾರಿಕಾ ಅಧಿಕಾರಿಗಳು

ನಮ್ಮಲ್ಲಿ ಆ ನಿಯಮವಿಲ್ಲದ ಕಾರಣ ಅವೈಜ್ಞಾನಿಕ ಮೀನುಗಾರಿಕೆ ನಡೆಯುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಈ ಬಗ್ಗೆ ಸ್ಥಳೀಯ ಶಾಸಕ ಯು.ಟಿ ಖಾದರ್ ಅವರನ್ನ ಕೇಳಿದರೆ ಇದೆಲ್ಲದಕ್ಕೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮೀನುಗಾರಿಕಾ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರೇ ಕಡಿವಾಣ ಹಾಕಬೇಕು ಅಂತಿದ್ದಾರೆ.

ಒಟ್ಟಿನಲ್ಲಿ ಕರಾವಳಿ ಭಾಗದಲ್ಲಿ ಇತ್ತೀಚೆಗೆ ಲೈಟ್ ಫಿಶಿಂಗ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇನ್ನಾದರೂ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ ಸಣ್ಣ ಮೀನುಗಾರರ ಹಿತ ಕಾಪಾಡಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

English summary
The court has already ruled that light fishing is illegal, But Light Fishing happening in Mangaluru Coastal Area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X